ಕನ್ನಡ ವಾರ್ತೆಗಳು

ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಕುರಿತು ಮಾಹಿತಿ ಕಾರ್ಯಗಾರ

Pinterest LinkedIn Tumblr

Child_line_workshop_1

ಮಂಗಳೂರು,ನ.20: ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದ.ಕ, ಚೈಲ್ಡ್ ಲೈನ್ ಮಂಗಳೂರು-1098 ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ.ಕ ಇವರ ಸಹಯೋಗದಲ್ಲಿ ಮಾಧ್ಯಮ ಮಿತ್ರರಿಗೆ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಕುರಿತು ಮಂಗಳೂರು ಪತ್ರಕರ್ತರ ಭವನ ಲೇಡಿಹಿಲ್‌ನಲ್ಲಿ ಅರ್ಧ ದಿನದ ಕಾರ್ಯಗಾರವನ್ನು ಆಯೋಜಿಸಲಾಯಿತು.

ಈ ಕಾರ್ಯಕ್ರಮವನ್ನು ಶ್ರೀ ಗಣೇಶ ಬಿ, ಹಿರಿಯ ಸಿವಿಲ್ ನ್ಯಾಯಧಿಶರು ಹಾಗು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದ.ಕ ಇವರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ-2012 ಇದರ ಭಿತ್ತಿ ಪತ್ರವನ್ನು ಬಿಡುಗಡೆ ಮಾಡುವುದರ ಮೂಲಕ ಉಧ್ಘಾಟಿಸಿ ಮಾತನಾಡುತ್ತ ಮಕ್ಕಳ ಕುರಿತಾದ ಮಾಹಿತಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸುವಾಗ ಮಕ್ಕಳ ಖಾಸಗಿತನ, ಗೌಪ್ಯತೆಯನ್ನು ಕಾಪಾಡಬೇಕು ಹಾಗೂ ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಮಾನವೀಯತೆಯಿಂದ ನೊಡಬೇಕು ಎಂದು ನುಡಿದರು.

Child_line_workshop_2 Child_line_workshop_3 Child_line_workshop_4

ಕಾರ್ಯಕ್ರಮದ ಸಂಪನ್ಮೂಲ ವ್ಯಕಿಯಾದ ಶ್ರೀ ರೆನ್ನಿ ಡಿ’ಸೋಜ, ದ.ಕ ಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯರು ಹಾಗು ಕೇಂದ್ರ ನಿರ್ದೇಶಕರು,ಚೈಲ್ಡ್‌ಲೈನ್ ಮಂಗಳೂರು-1098 ಇವರು ಮಾಧ್ಯಮ ಮಿತ್ರರಿಗೆ ಬಾಲನ್ಯಾಯ ಕಾಯಿದೆ-2000 ಮತ್ತು ಪೊಕ್ಸೋ ಕಾಯಿದೆ-2012 ಅನ್ವಯ ಮಕ್ಕಳ ಗೌಪ್ಯತೆ ಕಾಪಾಡುವ ಬಗ್ಗೆ ಹಾಗು ಬಾಲನ್ಯಾಯ ಕಾಯಿದೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಇರುವ ನಿಯಮಗಳ ಕುರಿತು ಉಪನ್ಯಾಸವನ್ನು ನಿಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶ್ರೀ ನಿಕೇಶ್ ಶೆಟ್ಟಿ, ಸಿಸ್ಟರ್|| ದುಲ್ಸಿನ್ ಮತಾಯಸ್, ನಿರ್ದೇಶಕರು, ಶಾಂತಿ ಸಂದೇಶ್ ರಿಸೋರ್ಸ್ ಆಂಡ್ ಡೆವೆಲಪ್‌ಮೆಂಟ್ ಸಂಟರ್ ಮಂಗಳೂರು, ಶ್ರೀ ಉಸ್ಮಾನ್ ಎ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದ.ಕ, ಶ್ರೀ ವಿನ್ಸೆಂಟ್ ಶಾಂತಕುಮಾರ ಹೆಚ್ಚುವರಿ ಪೋಲಿಸ ಅಧಿಕ್ಷಕರು, ದ.ಕ ಜಿಲ್ಲೆ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾಧ್ಯಮ ಮಿತ್ರರ ಪ್ರಶ್ನೆಗಳಿಗೆ ಉತ್ತರಿಸಿ ಮಧ್ಯಮ ಮಿತ್ರರ ಪ್ರಶ್ನೆಗಳನ್ನು ಪರಿಹರಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವವನ್ನು ವಹಿಸಿಕೊಂಡಿದ್ದ ಮಂಗಳೂರು ಪ್ರೆಸ್ ಕ್ಲಬ್‌ನ ಅಧ್ಯಕ್ಷರಾದ ಶ್ರೀ ಅನಿಲ್ ರೋನಾಲ್ಡ್ ಫೆರ್ನಾಂಡಿಸ್ ಇವರು ಮಾತನಾಡುತ್ತ ಮಾಧ್ಯಮ ಪ್ರತಿನಿಧಿಗಳು ಈಗಾಗಲೆ ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳು ಬಂದಾಗ ತುಂಬಾ ಜವಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಆದರೆ ಕೆಲವೊಂದು ಸಂದರ್ಭದಲ್ಲಿ ಸಣ್ಣ ಪುಟ್ಟ ಪ್ರಮಾದಗಳು ನಡೆಯುತ್ತವೆ ಆದರೆ ಇದು ಯಾವೂದೇ ಉದ್ದೇಶಪೂರ್ವಕವಾಗಿ ಆಗಿರುವುದಲ್ಲ ಎನ್ನುತ್ತ ಇನ್ನು ಮುಂದಿನ ದಿನಗಳಲ್ಲಿ ಕೂಡ ಮಾಧ್ಯಮ ಮಿತ್ರರು ತುಂಬಾ ಉತ್ತಮ ರೀತಿಯಲ್ಲಿ ಜವಬ್ದಾರಿಯುತವಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಶ್ರೀ ಉಸ್ಮಾನ್ ಎ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸ್ವಾಗತಿಸಿ, ಮಂಗಳೂರು ಪ್ರೆಸ್ ಕ್ಲಬ್‌ನ ಅಧ್ಯಕ್ಷರಾದ ಶ್ರೀ ಅನಿಲ್ ರೋನಾಲ್ಡ್ ಫೆರ್ನಾಂಡಿಸ್ ಇವರು ವಂದಿಸಿ, ಶ್ರೀ ಯೋಗಿಶ್ ಮಲ್ಲಿಗೆಮಾಡು, ನಗರ ಸಂಯೋಜಕರು, ಚೈಲ್ಡ್‌ಲೈನ್ ಮಂಗಳೂರು-1098 ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಸುಮಾರು 40 ಕ್ಕೂ ಹೆಚ್ಚು ಮಾಧ್ಯಮ ಮಿತ್ರರು ಈ ಕಾರ್ಯಗಾರದ ಉಪಯೋಗವನ್ನು ಪಡೆದುಕೊಂಡರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದ.ಕ, ಚೈಲ್ಡ್‌ಲೈನ್ ಮಂಗಳೂರು-1098 ಇದರ ಸಿಬ್ಬಂಧಿಗಳು ಹಾಗೂ ಸಂತ ಅಲೋಷಿಯಸ್ ಕಾಲೇಜಿನ ಪತ್ರಿಕೋಧ್ಯಮಿ ವಿದ್ಯಾರ್ಥಿಗಳು ಉಪಸ್ಥಿತರಿದ್ಧರು.

Write A Comment