ಕನ್ನಡ ವಾರ್ತೆಗಳು

ಸರಕಾರ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡಲಿ: ಗುರುರಾಜ ಮಾರ್ಪಳ್ಳಿ

Pinterest LinkedIn Tumblr

Alvas_citra_siri

ಮೂಡುಬಿದಿರೆ, ನ.20: ಚಿತ್ರಕಲೆಯಲ್ಲಿ ಆಯಾ ಕಾಲಘಟ್ಟಗಳಲ್ಲಿ ಹೊಸ ಹೊಸ ಪ್ರಯೋಗಗಳು ನಡೆದಿದ್ದರೂ, ಅವು ಸಾರ್ವಕಾಲಿಕ ಮಹತ್ವವನ್ನು ಪಡೆದಿವೆ. ಸಮುದಾಯದ ಸಾಮರಸ್ಯವನ್ನು ಕಾಪಾ ಡುವ ನಿಟ್ಟಿನಲ್ಲಿ ಕಲಾವಿದರ ಪಾತ್ರ ಮಹತ್ವದ್ದಾಗಿದೆ. ಸರಕಾರ ವ್ಯಾಪಾರ ಉದ್ದಿಮೆಗೆ ನೀಡುವ ಮಹತ್ವ ವನ್ನು ಮಾನವ ಸಂಪನ್ಮೂಲ ಬಳಕೆಗೆ ನೀಡುತ್ತಿಲ್ಲ. ಕಲೆಯನ್ನು ನಂಬಿ ಬದುಕುವುದು ಕಷ್ಟ ಎಂಬ ಮನೋಭಾವ ಕಲಾವಿದರಲ್ಲಿದೆ. ಹೀಗಾಗಿ ಸರಕಾರ ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ನೀಡುವ ಯೋಜನೆಯನ್ನು ರೂಪಿಸಬೇಕು ಎಂದು ಸಾಹಿತಿ, ಚಿಂತಕ ಗುರುರಾಜ ಮಾರ್ಪಳ್ಳಿ ಹೇಳಿದರು.

ಅವರು ಆಳ್ವಾಸ್ ಪ್ರತಿಷ್ಠಾನದ ವತಿಯಿಂದ ಪುತ್ತಿಗೆ ವಿವೇಕಾನಂದ ನಗರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಚಿತ್ರಕಲಾ ಶಿಬಿರ ‘ಆಳ್ವಾಸ್ ಚಿತ್ರಸಿರಿ-2015’ನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಕಲಾ ಸಂಘಟಕ ಕೋಟಿ ಪ್ರಸಾದ್ ಆಳ್ವ ಅಧ್ಯಕ್ಷತೆ ವಹಿಸಿ ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಿಬಿರದ ಸಂಯೋಜಕ ಗಣೇಶ್ ಸೋಮಯಾಜಿ, ಇಂತಹ ಶಿಬಿರಗಳ ಮೂಲಕ ಕಲಾವಿದರ ಪರಿಣತಿ, ಹೊಸತನ ಇತರ ಕಲಾವಿದರಿಗೆ ಅರಿಯಲು ಸಹಕಾರಿಯಾಗುತ್ತದೆ. ಇಲ್ಲಿ ರಚನೆಯಾಗುವ ಕಲಾಕೃತಿಗಳು ಶಾಶ್ವತವಾಗಿ ಪ್ರದರ್ಶನಗೊಳ್ಳಲಿದೆ ಎಂದರು.

ಶಿಬಿರದ ಸಂಯೋಜಕ ಪುರುಷೋತ್ತಮ ಅಡ್ವೆ, ಆಳ್ವಾಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ಉದಯ ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು.

ಭಾಗವಹಿಸಿದ ಕಲಾವಿದರು
ಅಚ್ಚುತನ್ ಡಿ.ಕೆ. ದಾವಣಗೆರೆ, ಬಸವರಾಜು ಕೆ.ಎಸ್. ತುಮಕೂರು, ಭರತ್ ಕುಮಾರ್ ಡಿ.ಎಸ್. ಮೈಸೂರು, ಭವರದೇವಿ ಹುಬ್ಬಳ್ಳಿ, ದಯಾನಂದ ಕೆ. ಕಮಾಕರ್ ಧಾರವಾಡ, ದಿಲೀಪ್ ಕುಮಾರ್ ಕಾಳೆ ಬೆಳಗಾಂ, ಕರಿಯಪ್ಪ ಹಂಚಿನಮನೆ ಹಾವೇರಿ, ಲಾಲ್ ಮೋಹನ್ ದ.ಕ., ಮಾಧುರಿ ಪಿ.ದೊಡ್ಡಮನಿ ಬೆಳಗಾವಿ, ಮಲ್ಲಪ್ಪ ಹಳ್ಳಿ ತುಮಕೂರು, ಪ್ರಕಾಶ್ ಜಿ. ನಾಯಕ್ ಉತ್ತರ ಕನ್ನಡ, ಪ್ರಮೋದ್ ಕುಮಾರ್ ರಾಯಚೂರು, ಸಂಜೀವ ಕುಲಕರ್ಣಿ ಬೆಂಗಳೂರು, ಸಂತೋಷ್ ಕುಮಾರ್ ಮಂಡ್ಯ, ಶಹನಾಝ್ ಸುಲ್ತಾನಾ ರಾಯಚೂರು, ಶರತ್ ಕುಮಾರ್ ಎಲ್. ಉಡುಪಿ, ಸುಪ್ರಿಯ ಕಲ್ಬುರ್ಗಿ, ವೀರೇಶ್ ಎಸ್. ಪಾತಳಿ, ಧಾರವಾಡ, ವಿಲ್ಸನ್ ಜೆ.ಪಿ. ಡಿಸೋಜ ಕಾಸರಗೋಡು.

Write A Comment