ಕನ್ನಡ ವಾರ್ತೆಗಳು

ನೆತ್ತರಕೆರೆ ಮಸೀದಿಗೆ ಬೆಂಕಿ ಕೊಳ್ಳಿ ಎಸೆದು ಪರಾರಿಯಾದ ಕಿಡಿಗೇಡಿಗಳು : ಸುಮಾರು 5 ಸಾವಿರ ರೂ. ನಷ್ಟ

Pinterest LinkedIn Tumblr

kodman_maszid_fire

ಬಂಟ್ವಾಳ, ನ.16: ಮಾರಿಪಳ್ಳ – ಪೊಳಲಿ ರಸ್ತೆಯ ಕೊಡ್ಮಾಣ್ ಸಮೀಪವಿರುವ ನೆತ್ತರಕೆರೆ ಮುಹಿಯುದ್ದೀನ್ ಮಸೀದಿಗೆ ದುಷ್ಕರ್ಮಿಗಳು ಬೆಂಕಿ ಕೊಳ್ಳಿ ಎಸೆದು ಪರಾರಿಯಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದ್ದು, ರವಿವಾರ ಬೆಳಗ್ಗೆ ಮಸೀದಿಗೆ ನಮಾಝ್ ನಿರ್ವಹಿಸಲು ಬಂದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.

ಕಿಡಿಗೇಡಿಗಳು ಮಸೀದಿಯ ಎಡಭಾಗದ ಕಿಟಕಿಯ ಮೂಲಕ ಬೆಂಕಿ ಕೊಳ್ಳಿಯನ್ನು ಹಾಕಿದ್ದು, ಇದರಿಂದ ನಮಾಝ್ ನಿರ್ವಹಿಸುವ ಚಾಪೆ ಹಾಗೂ ಬಟ್ಟೆ ಬೆಂಕಿಯಿಂದ ಸುಟ್ಟು ಹೋಗಿವೆ. ಇದರಿಂದ ಸುಮಾರು 5 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ಸ್ಥಳೀಯ ನಿವಾಸಿ ಹಸನಬ್ಬ ಎಂಬವರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ರವಿವಾರ ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಂಡನೆ:

ಮಸೀದಿಗೆ ಬೆಂಕಿ ಇಟ್ಟಿರುವ ದುಷ್ಕರ್ಮಿಗಳ ಕೃತ್ಯವನ್ನು ಪಿಎಫ್‌ಐ ಬಂಟ್ವಾಳ ಸಮಿತಿ ಖಂಡಿಸಿದ್ದು, ಈ ಪರಿಸರದಲ್ಲಿ ಮುಸ್ಲಿಮ್ ಸಮುದಾಯದ ಏಳು ಮನೆಗಳು ಮಾತ್ರವಿದ್ದು, ಇಲ್ಲಿಗೆ ಪೊಲೀಸ್ ಇಲಾಖೆ ಹೆಚ್ಚಿನ ಬಂದೋಬಸ್ತ್ ಒದಗಿಸಬೇಕೆಂದು ಆಗ್ರಹಿಸಿದೆ.

Write A Comment