ಕನ್ನಡ ವಾರ್ತೆಗಳು

ಹೊನ್ನಾವರ: ದೀಪಾವಳಿಗೆ ಹಣ ಕಡಿಮೆ ಕೊಟ್ಟ ತಾಯಿಯ ಮೇಲೆ ಮುನಿಸಿಕೊಂಡು ಅಕ್ಕ-ತಂಗಿ ನೇಣಿಗೆ ಶರಣು

Pinterest LinkedIn Tumblr

ಉತ್ತರಕನ್ನಡ: ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಗಾಗಿ ತಾಯಿನೀಡಿದ ಹಣ ಕಮ್ಮಿಯಾಗಿದೆಯೆಂದು ಮುನಿಸಿಕೊಂಡ ಸೋದರಿಯರಿಬ್ಬರು ತಮ್ಮ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಎಂಬಲ್ಲಿ ನಡೆದಿದೆ.

Honnavara_Sisters_Suiside

ಸುನಿತಾ (17) ಹಾಗೂ ಮಂಗಳಾ ( 15 ) ಆತ್ಮಹತ್ಯೆಗೆ ಶರಣಾದ ಸೋದರಿಯರು. ಕವಲಕ್ಕಿ ಗ್ರಾಮದ ಸಿದ್ದಿವಿನಾಯಕ ಪ್ರೌಡ ಶಾಲೆಯಲ್ಲಿ ಸುನಿತಾ ಎಸ್.ಎಸ್.ಎಲ್.ಸಿ ಓದುತ್ತಿದ್ದು ಮಂಗಳ 8ನೇ ತರಗತಿ ಓದುತ್ತಿದ್ದಳು ಎನ್ನಲಾಗಿದೆ.

ಮಕ್ಕಳಿಗೆ ಸಾಲದ 3 ಸಾವಿರ ಹಣ: ಪ್ರೀತಿಯ ಮಕ್ಕಳು ದೀವಾಳಿ ಹಬ್ಬಕ್ಕೆ ಬಟ್ಟೆ ಖರೀದಿಸಲು ಮಕ್ಕಳಿಗೆ 3 ಸಾವಿರ ಹಣವನ್ನು ನೀಡಿದ್ದರು, ಆದರೇ 3 ಸಾವಿರ ಹಣ ಸಾಲುವುದಿಲ್ಲ ಇನ್ನು ಜಾಸ್ಥಿ ಹಣ ಬೇಕು ಎಂದು ಇಬ್ಬರೂ ಹಠ ಹಿಡಿದಿದ್ದು ತಾಯಿಯ ಬಳಿ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೇ ತಾಯಿ ಹಣ ಹೆಚ್ಚು ನೀಡಲೂ ಆಗುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಮುನಿಸಿಕೊಂಡ ಸೋದರಿಯರು ಮನೆಯ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಡತನದ ಕುಟುಂಬ ಇದಾಗಿದ್ದು ಮಕ್ಕಳು ಮಾಡಿಕೊಂಡ ಕ್ರತ್ಯಕ್ಕೆ ತಾಯಿಯ ರೋಧನ ಮುಗಿಲು ಮುಟ್ಟಿದೆ.

ಈ ಬಗ್ಗೆ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.

Write A Comment