ಕನ್ನಡ ವಾರ್ತೆಗಳು

ಕೈಕೊಟ್ಟ ವೈದ್ಯರು : ರಸ್ತೆ ಮಧ್ಯೆ ಆ್ಯಂಬುಲೆನ್ಸ್‌ನಲ್ಲಿ ಹೆರಿಗೆ ನಡೆಸಿಕೊಟ್ಟ ಆರೋಗ್ಯ ಕವಚ ಸಿಬ್ಬಂದಿ

Pinterest LinkedIn Tumblr

108_ambulance_staff1

ಬಂಟ್ವಾಳ, ಅ.28: ತುಂಬು ಗರ್ಭಿಣಿ ಯೊಬ್ಬರನ್ನು ಹೆರಿಗೆಗೆಂದು ಸರಕಾರಿ ಆಸ್ಪತ್ರೆಗೆ ಕರೆದೊಯ್ದರೆ, ಅಲ್ಲಿನ ವೈದ್ಯರು ಇಲ್ಲಿ ಆಗುವುದಿಲ್ಲ, ಸಮಸ್ಯೆ ಇದೆ ಎಂದರು. ಆದರೆ ಆ್ಯಂಬುಲೆನ್ಸ್‌ನ ಸ್ಟಾಫ್ ನರ್ಸ್ ಆ ಹೆರಿಗೆ ಯನ್ನು ಆ್ಯಂಬುಲೆನ್ಸ್ ವಾಹನದಲ್ಲೇ ಸಲೀಸಾಗಿ ನಡೆಸಿಕೊಟ್ಟರು…! ಇದು ಸಂಕಟದ ನಡುವೆ ಮಹಿಳೆ ಮತ್ತು ಮಗುವಿನ ಪಾಲಿಗೆ ಆಪದ್ಬಾಂಧವರಾದ ಬಿ.ಸಿ.ರೋಡ್‌ನ 108 ಆ್ಯಂಬುಲೆನ್ಸ್ ಸಿಬ್ಬಂದಿಯ ಯಶೋಗಾಥೆ..!

ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಬಂಗಾರಕೋಡಿಯ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ಅ.24ರಂದು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಚಿಕಿತ್ಸೆ ಆರಂಭಿಸಿದ್ದರು.

ಆದರೆ ಒಂದು ಗಂಟೆಯ ಕಳೆಯು ವಷ್ಟರಲ್ಲಿ ಗರ್ಭಿಣಿಗೆ ಮೆಕೋನಿಯಂ ಸ್ಟ್ರೈನ್ ಸಮಸ್ಯೆ ಇದೆ, ಹಾಗಾಗಿ ಇಲ್ಲಿ ಹೆರಿಗೆ ಮಾಡಿ ಸಲು ಸಾಧ್ಯವಿಲ್ಲ. ಕೂಡಲೇ ಮಂಗಳೂರಿಗೆ ಕರೆದೊಯ್ಯುವಂತೆ ಅಲ್ಲಿನ ವೈದ್ಯರು ಸೂಚಿಸಿದರು.

ಈ ವೇಳೆ ಗಾಬರಿಗೊಂಡ ಮನೆಮಂದಿ ಆರೋಗ್ಯ ರಕ್ಷಾಕವಚ 108 ಆ್ಯಂಬುಲೆನ್ಸ್ ವಾಹನಕ್ಕೆ ಕರೆ ಮಾಡಿದರು. ತಕ್ಷಣ ಬಿ.ಸಿ.ರೋಡ್‌ನ ಆ್ಯಂಬುಲೆನ್ಸ್ ಬಂಟ್ವಾಳ ಆಸ್ಪತ್ರೆಗೆ ಧಾವಿಸಿ, ಹೆರಿಗೆ ನೋವು ಅನುಭವಿಸುತ್ತಿದ್ದ ಗರ್ಭಿಣಿ ಹಾಗೂ ಆಕೆಯ ಸಂಬಂಧಿ ವೃದ್ಧೆಯೊಬ್ಬರ ಜೊತೆಗೆ ಮಂಗಳೂರಿಗೆ ಕರೆದೊಯ್ದರು.

ಪಡೀಲ್ ತಲುಪುವಷ್ಟರಲ್ಲಿ: ಅವಸರದ ಸೈರನ್ ಮೊಳಗಿಸುತ್ತಾ 108 ಆ್ಯಂಬುಲೆನ್ಸ್ ಮಂಗಳೂರಿನತ್ತ ಬಿರುಸಿನಿಂದ ಸಾಗುತ್ತಿದ್ದರೆ, ಇತ್ತ ಗರ್ಭಿಣಿಯ ನೋವಿನ ಕೂಗೂ ಹೆಚ್ಚಿತ್ತು. ಸ್ಟಾಫ್ ನರ್ಸ್ ಚೇತನ್ ಆ್ಯಂಬುಲೆನ್ಸ್ ವಾಹನದಲ್ಲಿ ಲಭ್ಯವಿದ್ದ ಅಗತ್ಯ ಸೌಲಭ್ಯವನ್ನು ಗರ್ಭಿಣಿಗೆ ಒದಗಿಸಿದ್ದರು.

ಆದರೆ ಆ್ಯಂಬುಲೆನ್ಸ್ ಪಡೀಲ್ ತಲುಪುವಷ್ಟರಲ್ಲಿ ಮಹಿಳೆಗೆ ಹೆರಿಗೆ ನೋವು ತೀವ್ರಗೊಂಡ ಕಾರಣ ಅಲ್ಲೇ ವಾಹನವನ್ನು ನಿಲ್ಲಿಸಿದ ಸ್ಟಾಫ್ ನರ್ಸ್ ಚೇತನ್ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ, ಹೆರಿಗೆ ಮಾಡಿಸಿಯೇ ಬಿಟ್ಟರು. ಮುದ್ದುಮುದ್ದಾದ ಗಂಡು ಮಗುವಿನ ಜನನವಾಗುತ್ತಲೇ ತಾಯಿಯ ನೋವಿನ ಕೂಗು ನಿಂತಿತು. ಅದುವರೆಗೆ ಆತಂಕದಲ್ಲಿದ್ದ ವೃದ್ಧೆ ಸಮಾಧಾನದ ನಿಟ್ಟುಸಿರುಬಿಟ್ಟರು.

ಆ ಬಳಿಕ ತಾಯಿ ಮತ್ತು ಮಗುವನ್ನು ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ ದಾಖಲಿ ಸಲಾಗಿದ್ದು, ತಾಯಿ-ಮಗು ಇದೀಗ ಆರೋಗ್ಯ ವಂತರಾಗಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಕೈಬಿಟ್ಟ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಬಿ.ಸಿ.ರೋಡ್ 108 ಆ್ಯಂಬುಲೆನ್ಸ್ ಸ್ಟಾಫ್ ನರ್ಸ್ ಚೇತನ್ ಹಾಗೂ ವಾಹನದ ಪೈಲೆಟ್ ನಾಗಪ್ಪಅವರ ಕಾರ್ಯದಕ್ಷತೆ, ಸಮಯ ಪ್ರಜ್ಞೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ.

ತಿಂಗಳ ಹಿಂದೆಯೂ ಇದೇ ತೆರನಾದ ಘಟನೆ ನಡೆದಿದ್ದು, ಮಹಿಳೆಯೊಬ್ಬರು ಆ್ಯಂಬುಲೆನ್ಸ್ ವಾಹನದಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

ವರದಿ ಕೃಪೆ : ವಾಭಾ

Write A Comment