ಕನ್ನಡ ವಾರ್ತೆಗಳು

ಪುತ್ತೂರು: “ಇನ್‌ಲ್ಯಾಂಡ್ ಮಯೂರ” ವಸತಿ ಮತ್ತು ವಾಣಿಜ್ಯ ಕಟ್ಟಡಕ್ಕೆ ನಾಳೆ ಶಿಲಾನ್ಯಾಸ

Pinterest LinkedIn Tumblr

Inland-Mayura-Residency_1

ಮಂಗಳೂರು, ಅ.24: ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪುತ್ತೂರಿನಲ್ಲಿ ನಿರ್ಮಾಣಗೊಳ್ಳಲಿರುವ ‘ಇನ್‌ಲ್ಯಾಂಡ್ ಮಯೂರ’ ವಸತಿ ಮತ್ತು ವಾಣಿಜ್ಯ ಕಟ್ಟಡಕ್ಕೆ ಅ.25ರಂದು ಶಿಲಾನ್ಯಾಸ ನೆರವೇರಲಿದೆ.

ಮಂಗಳೂರು ಹಾಗೂ ಬೆಂಗಳೂರು ಮಹಾನಗರಗಳಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಇನ್‌ಲ್ಯಾಂಡ್ ಸಂಸ್ಥೆ ಈ ಮೂಲಕ ಪುತ್ತೂರಿಗೂ ಪಾದಾರ್ಪಣೆ ಮಾಡುತ್ತಿದೆ. ಪುತ್ತೂರಿನ ಮುಖ್ಯ ರಸ್ತೆಯಲ್ಲಿದ್ದ ಮಯೂರ ಚಲನಚಿತ್ರ ಮಂದಿರದ ಜಾಗದಲ್ಲೇ ಈ ವಸತಿ ಹಾಗೂ ವಾಣಿಜ್ಯ ಕಟ್ಟಡ ನಿರ್ಮಾಣವಾಗಲಿದೆ ಎಂದು ಇನ್‌ಲ್ಯಾಂಡ್ ಗ್ರೂಪ್‌ನ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ತಿಳಿಸಿದ್ದಾರೆ.

Inland-Mayura-Residency_2

ಇನ್‌ಲ್ಯಾಂಡ್ ಸಂಸ್ಥೆಯ ಸಂಪ್ರದಾಯದಂತೆ ಈ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭವೂ ಸರ್ವ ಧರ್ಮ ಪ್ರಾರ್ಥನೆಯೊಂದಿಗೆ ನೆರವೇರಲಿದೆ. 1,170, 1,190, 1,210 ಚದರ ಅಡಿಗಳ 2 ಬೆಡ್ ರೂಂಗಳು ಹಾಗೂ 1,550, 1,595 ಚದರ ಅಡಿಗಳ 3 ಬೆಡ್‌ರೂಂಗಳ 72 ಫ್ಲಾಟ್‌ಗಳನ್ನು ಇನ್‌ಲ್ಯಾಂಡ್ ಮಯೂರ ಹೊಂದಿರಲಿದೆ. ಮಕ್ಕಳ ಆಟದ ತಾಣ, ಲ್ಯಾಂಡ್‌ಸ್ಕೇಪ್ ಗಾರ್ಡನ್, ಜಿಮ್ನೇಶಿಯಂ, ಸಿಸಿಟಿವಿ, ಫಯರ್ ಫೈಟಿಂಗ್, ಇಂಟರ್‌ಕಾಂ ಸೌಕರ್ಯಗಳ ಜೊತೆಗೆ 2 ಎಲಿವೇಟರ್‌ಗಳ ಸೌಲಭ್ಯವನ್ನು ಈ ಸಂಕೀರ್ಣ ಹೊಂದಿರುತ್ತದೆ.

‘1986ರಲ್ಲಿ ಆರಂಭಗೊಂಡ ಇನ್‌ಲ್ಯಾಂಡ್ ರಿಯಲ್ ಎಸ್ಟೇಟ್ ಇಂದು ಇನ್‌ಲ್ಯಾಂಡ್ ಗ್ರೂಪ್ ಆಗಿ ಬೆಳೆದು ಹಲ ವಾರು ಆಕರ್ಷಕ ಕಟ್ಟಡಗಳ ನಿರ್ಮಾಣದ ಮೂಲಕ ಹೆಸರು ಮಾಡಿದೆ. ಗುಣಮಟ್ಟ, ಆಕರ್ಷಕ ವಿನ್ಯಾಸ, ಸುರಕ್ಷತಾ ಕ್ರಮಗಳು ಹಾಗೂ ಅತ್ಯುತ್ತಮ ಸೌಲಭ್ಯಗಳಿಗಾಗಿ ಹಲವಾರು ರಾಷ್ಟ್ರೀಯ ಪ್ರಶಸ್ತಿಗಳಿಗೆ ಸಂಸ್ಥೆ ಪಾತ್ರವಾಗಿದೆ.

Inland-Mayura-Residency_3 Inland-Mayura-Residency_4 Inland-Mayura-Residency_5 Inland-Mayura-Residency_6 Inland-Mayura-Residency_7

ಇನ್‌ಲ್ಯಾಂಡ್‌ನಿಂದ ಪುತ್ತೂರಿನಲ್ಲಿ ವಾಣಿಜ್ಯ-ವಸತಿ ಸಂಕೀರ್ಣವನ್ನು ನಿರ್ಮಾಣ ಮಾಡಬೇಕೆಂದು ಆ ಪ್ರದೇಶದ ಜನರು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಅವರ ಪ್ರೀತಿ, ವಿಶ್ವಾಸ ಹಾಗೂ ಬಯಕೆಯಂತೆ ಇದೀಗ ಪುತ್ತೂರಿನಲ್ಲಿ ಒಂದು ಆಕರ್ಷಕ ವಾಣಿಜ್ಯ-ವಸತಿ ಸಂಕೀರ್ಣ ಇನ್‌ಲ್ಯಾಂಡ್‌ನಿಂದ ತಲೆ ಎತ್ತಲಿದೆ.

ಧಾರ್ಮಿಕ ಸೌಹಾರ್ದ, ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕೇಂದ್ರವಾಗಿರುವ ಪುತ್ತೂರಿನ ಜನತೆಗೆ ಈ ಮೂಲಕ ಸೇವೆ ಸಲ್ಲಿಸುವ ಸೌಭಾಗ್ಯ ನಮಗೆ ಸಿಕ್ಕಿದೆ’ ಎಂದು ಸಿರಾಜ್ ಅಹ್ಮದ್ ಸಂತಸ ವ್ಯಕ್ತಪಡಿಸಿದ್ದಾರೆ.

Write A Comment