ಕನ್ನಡ ವಾರ್ತೆಗಳು

ಚುಟುಕಿಗೆ ತನ್ನದೇ ಆದ ಸತ್ವ, ಶಕ್ತಿ ಇದೆ : ಎಮ್.ಜಾನಕಿ ಬ್ರಹ್ಮಾವರ

Pinterest LinkedIn Tumblr

Tulu_sahtya_Program_1

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾದ ತುಳುವಿನಲ್ಲಿ ಚುಟುಕು ಸಾಹಿತ್ಯ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ತುಳು ಭವನದ ಸಿರಿ ಚಾವಡಿಯಲ್ಲಿ ಅಕಾಡೆಮಿಯ ಅಧ್ಯಕ್ಷೆ ಎಮ್.ಜಾನಕಿ ಬ್ರಹ್ಮಾವರ ಉದ್ಘಾಟಿಸಿದರು.

ಚುಟುಕು ಬರೆಯುವುದು ಸುಲಭವಲ್ಲ ಕಿರಿದರಲ್ಲಿ ಹಿರಿದನ್ನು ತುಂಬಿಸಿಕೊಂಡು ಅರ್ಥಗರ್ಭಿತವಾಗುವ ಚುಟುಕಿಗೆ ತನ್ನದೇ ಆದ ಸತ್ವ ಶಕ್ತಿಯಿದೆ ಎಂದು ನುಡಿದರು.

ತುಳುವಿನಲ್ಲಿ ಚುಟುಕು ಸಾಹಿತ್ಯ ವಿಚಾರ ಮಂಡಿಸಿದ ಡಾ.ಧನಂಜಯ ಕುಂಬ್ಳೆ, ತುಳುವಿನಲ್ಲಿ ಚುಟುಕು ಸಾಹಿತ್ಯ ಬೆಳೆದು ಬಂದ ದಾರಿಯ ಸಿಂಹಾವಲೋಕನ ಮಾಡುತ್ತಾ ಧ್ವನಿಪೂರ್ಣವಾಗಿದ್ದುಕೊಂಡು ಕಾಲದ ಪರೀಕ್ಷೆಯಲ್ಲಿ ನಿಲ್ಲುವ ಚುಟುಕುಗಳು ಭಾಷೆಗೆ ಗೌರವ ಎಂದು ವಿಶ್ಲೇಷಿಸಿದರು.

ಪತ್ರಿಕೆಗಳಲ್ಲಿ ತುಳು ಚುಟುಕುಗಳು ಎಂಬ ಬಗ್ಗೆ ಶ್ರೀ ಚೇತನ್ ಮುಂಡಾಜೆ ವಿಚಾರ ಮಂಡಿಸಿದರು. ಆ ಬಳಿಕ ನಡೆದ ಕವಿಗೋಷ್ಠಿಯಲ್ಲಿ ರಾಜೇಂದ್ರ ಕೇದಿಗೆ, ಚೆನ್ನಪ್ಪ ಅಳಿಕೆ, ರಾಜೇಶ್ ಶೆಟ್ಟಿ ದೋಟ, ಅಂಡಾಳ ಗಂಗಾಧರ ಶೆಟ್ಟಿ, ದಾ.ನ ಉಮಾಣ್ಣ ಕೊಕ್ಕಪುಣಿ, ಸುಲೋಚನಾ ಪಚ್ಚಿನಡ್ಕ, ಜಯಶ್ರೀ ಇಡ್ಕಿದು, ಅಕ್ಷತಾ ಡಿ.ಸಾಲಿಯಾನ್, ಸುಭಾಶ್ಚಂದ್ರ ಪಡಿವಾಳ್ ಭಾಗವಹಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಶ್ರೀ ಇರಾ ನೇಮು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ.ಬಿ, ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕುಂಬ್ಳೆ ಸುಂದರ ರಾವ್, ಎನ್ ಸುಬ್ರಾಯ ಭಟ್ ಉಪಸ್ಥಿತರಿದ್ದರು.

ಅಕಾಡೆಮಿ ಸದಸ್ಯ ಮೋಹನ್ ಕೊಪ್ಪಲ ಕದ್ರಿ ಇವರು ಸ್ವಾಗತಿಸಿದರು. ರಘು ಇಡ್ಕಿದು ಹಾಗೂ ಯಶವಂತ್ ಡಿ.ಎಸ್ ನಿರೂಪಿಸಿದರು. ಗುಣವತಿ ಕಿನ್ಯ ಪ್ರಾರ್ಥಿಸಿದರು, ಪ್ರವಿತ್‌ರಾಜ್ ವಂದಿಸಿದರು.

Write A Comment