ಉಡುಪಿ : ಶಾಸಕರಾದ ಪ್ರಮೋದ್ ಮಧ್ವರಾಜ್ ಅವರ 48ನೇ ಹುಟ್ಟು ಹಬ್ಬದ ಸಂಭ್ರಮ ಶನಿವಾರ ಕಾಂಗ್ರೆಸ್ ಭವನ, ಬ್ರಹ್ಮಗಿರಿ ಉಡುಪಿಯಲ್ಲಿ ಅದ್ದೂರಿಯಾಗಿ ನಡೆಯಿತು. ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ಲಕ್ಷೀವರ ತೀರ್ಥ ಶ್ರೀಪಾದರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.
ಬಳಿಕ ಆಶೀರ್ವಚನ ನೀಡಿ, ರಾಷ್ಟ್ರಮಟ್ಟದಲ್ಲಿ ಭ್ರಷ್ಟಾಚಾರ ಇದ್ದರೂ ಉಡುಪಿ ಮಾತ್ರ ಲಂಚ ಮುಕ್ತವಾಗಿದೆ. ಇದಕ್ಕೆ ಮುಖ್ಯ ಕಾರಣ ಶಾಸಕ ಪ್ರಮೋದ್ ಮಧ್ವರಾಜ್. ಅವರ ಪ್ರಾಮಾಣಿಕತೆ, ದಾನಧರ್ಮದ ಗುಣಗಳು ನಮ್ಮ ಎಲ್ಲ ನಾಯಕರಲ್ಲೂ ಮೂಡಿದರೆ ನಮ್ಮದು ಭ್ರಷ್ಟಾಚಾರ ಮುಕ್ತ ರಾಜ್ಯವಾಗಲು ಸಾಧ್ಯ ಎಂದರು.
ಈ ಕಾರ್ಯಕ್ರಮವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪ್ರಮೋದ್ ಮಧ್ವರಾಜ್ ಅವರ ಅಭಿಮಾನಿಗಳು ಆಯೋಜಿಸಿದ್ದರು. ಈ ಪ್ರಯುಕ್ತ ಕೆ.ಎಮ್.ಸಿ ಆಸ್ಪತ್ರೆಯ ತಜ್ಞ ವೈಧ್ಯರಿಂದ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪ್ರಮೋದ್ ಮಧ್ವರಾಜ್ ಅವರ ಅಭಿಮಾನಿ ಬಳಗದವರಿಂದ ಅಭಿನಂದನಾ ಮಹಾಪೂರ ನಡೆಯಿತು.
ಈ ಸಂದರ್ಭದಲ್ಲಿ ಡಾ॥ ಪದ್ಮರಾಜ್ ಹೆಗ್ಡೆ, ಶ್ರೀ ಮೊಹಮ್ಮದ್ ಹನೀಫ್, ಫಾ. ವಿಲಿಯಂ ಮಾರ್ಟಿಸ್ ಉಪಸ್ಥಿತರಿದ್ದರು.




