ಕನ್ನಡ ವಾರ್ತೆಗಳು

ಬಟ್ವಾಳದ ಶ್ರೀ ವನದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್.

Pinterest LinkedIn Tumblr

yuvaraj_sing_photo_1

ಬಟ್ವಾಳ,ಅ.15  : ಭಾರತದ ಖ್ಯಾತ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಬುಧವಾರ ಬಿಸಿರೋಡ್ ಸಮೀಪದ ಮೊಡಂಕಾಪುವಿನ ಶ್ರೀ ವನದುರ್ಗಾ ದೇವಸ್ಥಾನಕ್ಕೆ ನೀಡಿದರು. ಇವರ ಜೊತೆ ‘ಬಾಡ್ ಗಾರ್ಡ್’ ಚಿತ್ರದ ನಾಯಕಿ ಹಝೀಲ್ ಕೀಚ್ ಕೂಡ ಇದ್ದರು.

yuvaraj_sing_photo_2

ಬುಧವಾರ ಬೆಳಗ್ಗೆ 10 ಗಂಟೆಗೆ ದೇವಸ್ಥಾನಕ್ಕೆ ಬಂದ ಯುವಿ, ಸುಮಾರು ಮೂರು ಗಂಟೆಗಳ ಕಾಲ ದೇವಸ್ಥಾನದಲ್ಲೇ ಇದ್ದರು. ಈ ವೇಳೆ ದೆವಸ್ಥಾನದ ಚರಿತ್ರೆಯನ್ನು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಗುರುದತ್ತ್ ಶೆಣೈ ಅವರೊಂದಿಗೆ ಕೇಳಿ ತಿಳಿದುಕೊಂಡರು.

ಈ ಸಂದರ್ಭದಲ್ಲಿ ಪಾಂಡುರಂಗ ಶೆಣೈ, ವಲ್ಲಭ ಶೆಣೈ ಮತ್ತಿತರ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Write A Comment