ಮಂಗಳೂರು: ಪಾರ್ಕ್ ಮಾಡಿದ್ದ ಕಾರಿನ ಗಾಜು ಹೊಡೆದು ಐದು ಲಕ್ಷ ರೂ. ಕಳವು ಮಾಡಿದ ಘಟನೆ ಗುರುವಾರ ಹಾಡುಹಗಲೇ ಜನನಿಬಿಡ ಪ್ರದೇಶವಾದ ಮಂಗಳೂರಿನ ಕೆ.ಎಸ್.ರಾವ್ ರಸ್ತೆ ಬಳಿ ನಡೆದಿದೆ.
ಬಂಟ್ವಾಳ ಮೂಲದ ವಕೀಲ ಅರುಣ್ ಶೆಟ್ಟಿ ಅವರು ಕೆ.ಎಸ್. ರಾವ್ ರಸ್ತೆಯಲ್ಲಿರುವ ಎಕ್ಸೆಲ್ ಮಾಲ್‌ನ ಜೋಯ್ ಅಲುಕ್ಕಾಸ್ ಚಿನ್ನಾಭರಣ ಮಳಿಗೆ ಮುಂಭಾಗ ತಮ್ಮ ಕಾರನ್ನು ಪಾರ್ಕ್ ಮಾಡಿದ್ದರು. ಈ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ. ಕಾರಿನ ಹಿಂದಿನ ಬಾಗಿಲ ಗಾಜು ಹೊಡೆದು 5 ಲಕ್ಷ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಕಾರಿನ ಗಾಜು ಹೊಡೆದು ಕಾರಿನಲ್ಲಿಟ್ಟಿದ್ದ ಹಣದೊಂದಿಗೆ ಕ್ಷಣ ಮಾತ್ರದಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಪೊಲೀಸರು ಜೋಯ್ ಅಲುಕ್ಕಾಸ್‌ನಲ್ಲಿ ಅಳವಡಿಸಲಾಗಿರುವ ಸಿ.ಸಿ ಕ್ಯಾಮಾರದಲ್ಲಿ ಕಳವು ಪ್ರಕರಣದ ಬಗ್ಗೆ ದಾಖಾಲೆಗಳನ್ನು ಸಂಗ್ರಹಿಸಿದ್ದಾರೆ.

