ಕನ್ನಡ ವಾರ್ತೆಗಳು

ಮಂಗಳೂರಿನ ಟ್ರಾಫಿಕ್ ಸಮಸೈಗೆ ಒಂದು ಸಣ್ಣ ಪರಿಹಾರ : ಸಂಚಾರ ನಿಯಮ ಪಾಲಕರ ದಳ ಉದ್ಘಾಟನೆ

Pinterest LinkedIn Tumblr

Traffik_Dala_Inu_1

ಮಂಗಳೂರು: ಮಂಗಳೂರಿನ ಸಂಚಾರ ಸಮಸೈಯನ್ನು ಸರಳೀಕರಣಗೊಳಿಸುವ ಉದ್ದೇಶದಿಂದ 94 ವರ್ಷದ ಜೋಯ್ ಗೊನ್ಸೆಲ್ವ್ ಅವರ ನೇತ್ರತ್ವದಲ್ಲಿ ಮಂಗಳೂರಿನಲ್ಲಿ ನೂತನವಾಗಿ ಆರಂಭಗೊಂಡ ಸಂಚಾರ ನಿಯಮ ಪಾಲಕರ ದಳಕ್ಕೆ ಶುಕ್ರವಾರ ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಚಾಲನೆ ನೀಡಲಾಯಿತು. ಬಳಿಕ ನಗರದ ಹೃದಯ ಭಾಗವಾದ ಹಂಪನಕಟ್ಟೆ ಬಳಿಯಿಂದ ಹೊರಟ ಸಂಚಾರಿ ಪಾಲನೆ ಜಾಗೃತಿ ಜಾಥಾಕ್ಕೆ ಮಂಗಳೂರು ಪ್ರಾಂತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜ ಚಾಲನೆ ನೀಡಿದರು.

Traffik_Dala_Inu_2 Traffik_Dala_Inu_3 Traffik_Dala_Inu_4 Traffik_Dala_Inu_5 Traffik_Dala_Inu_6 Traffik_Dala_Inu_8 Traffik_Dala_Inu_9 Traffik_Dala_Inu_10 Traffik_Dala_Inu_11 Traffik_Dala_Inu_13 Traffik_Dala_Inu_14

ಕಮಿಷನರ್ ಕಚೇರಿಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಯುನಿಟಿ ಆಸ್ಪತ್ರೆಯ ಅಧ್ಯಕ್ಷ ಹಬೀಬ್ ರಹ್ಮಾನ್ ಅವರು ಉದ್ಘಾಟಿಸಿ, 94 ವರ್ಷದ ಜೋಯ್ ಗೊನ್ಸೆಲ್ವ್ ಸಾಮಾಜಿಕ, ಧಾರ್ಮಿಕ, ನ್ಯಾಯಿಕ, ಸಮಾಜವನ್ನು ಕಟ್ಟಲು ಹೋರಾಟ ನಡೆಸಿದ್ದಾರೆ. ಇದೀಗ ಸಂಚಾರಿ ನಿಯಮ ಪಾಲನೆಯ ಸಮಸ್ಯೆಯನ್ನು ಸರಿಮಾಡಲು ಅವರು ಮುಂದಾಗಿದ್ದು, ಖಂಡಿತವಾಗಿಯೂ ಅವರ ಉದ್ದೇಶ ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆನಾರ ಬಸ್ ಮಾಲ್ಹಕರ ಸಂಘದ ಅಧ್ಯಕ್ಲ್ಷ ಶ್ರೀ ರಾಜವರ್ಮಾ ಬಳ್ಳಾಲ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಮುರುಗನ್, ಡಿಸಿಪಿಗಳಾದ ಸಂಜೀವ ಎಂ. ಪಾಟೀಲ, ಶಾಂತರಾಜು, ಸಂಚಾರಿ ವಿಭಾಗದ ಎಸಿಪಿ ಉದಯ ನಾಯಕ, ಮತ್ತಿತರ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Write A Comment