ಕನ್ನಡ ವಾರ್ತೆಗಳು

ಮಲ್ಪೆ ಬೀಚ್‍ನಲಿ ಕಡಲಿಗಿಳಿದವರಿಗೆ ತೊರಕೆ ಇಂಜೆಕ್ಷನ್ : ಪ್ರವಾಸಿಗರಿಗೆ ಜೀವರಕ್ಷಕ ದಳದಿಂದ ಎಚ್ಚರಿಕೆ

Pinterest LinkedIn Tumblr

Malpe_Ray_Fish_1

ಮಲ್ಪೆ, ಸೆ.29: ಮಲ್ಪೆ ಬೀಚ್‍ನಲ್ಲಿ ಭಾರೀ ಸಂಖ್ಯೆಯಲ್ಲಿ ರೇ ಫಿಶ್ (ತೊರಕೆ ಮೀನು) ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ಜೀವರಕ್ಷಕ ದಳ ಎಚ್ಚರವಹಿಸುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಾಕಷ್ಟು ಮಂದಿ ಈ ಮೀನುಗಳಿಂದ ಚುಚ್ಚಿಸಿಕೊಂಡ ಹಿನ್ನೆಲೆಯಲ್ಲಿ ಈ ಕಾರ್ಯಕ್ಕೆ ಜೀವರಕ್ಷಕ ದಳ ಮುಂದಾಗಿದೆ.

ಕಡಲ ತೀರದಲ್ಲಿಯೇ ಈ ಮೀನುಗಳು ಬೀಡುಬಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಮಲ್ಪೆಯ ಜೀವರಕ್ಷಕ ದಳ ಹಾಗೂ ಸ್ಥಳೀಯ ಪೊಲೀಸರು ಎಚ್ಚರಿಕೆಯ ಸೂಚನೆ ಈಗಾಗಲೇ ನೀಡಿದ್ದಾರೆ.

ರಜಾ ದಿನವಾದ ಭಾನುವಾರ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗಳು ಆಗಮಿಸಿದ್ದು, ಸಮುದ್ರಕ್ಕಿಳಿದ ಹಲವರಿಗೆ ಈ ಮೀನು ಕಡಿದಿದೆ. ಈ ಮೀನಿನ ಕಡಿತ ಅಪಾಯಕಾರಿಯಾಗಿದ್ದು, ಚುಚ್ಚಿದ ಕೂಡಲೇ ಚಿಕಿತ್ಸೆ ಪಡೆಯದಿದ್ದಲ್ಲಿ ಅದು ಕಚ್ಚಿದ ದೇಹದ ಭಾಗ ಕೊಳೆಯುವ ಸಾಧ್ಯತೆಗಳಿದೆ. ಸೋಮವಾರ ಯಾರಿಗೂ ಮೀನು ಕಚ್ಚಿದ ಬಗ್ಗೆ ವರದಿಯಾಗಿಲ್ಲವಾದರೂ ವ್ಯಾಪಕ ಮುನ್ನೆಚ್ಚರಿಕೆ ವಹಿಸಲಾಗಿದೆ.

ಮೊಟ್ಟೆಯಿಡಲು ಬರುತ್ತವೆ…

ಈ ಭಾಗದ ಆಳ ಸಮುದ್ರದಲ್ಲಿ ಹೆಚ್ಚಾಗಿ ಕಂಡು ಬರುವ ಈ ಮೀನುಗಳು, ಪ್ರತಿವರ್ಷ ಇದೇ ಅವಧಿಯಲ್ಲಿ ಮೊಟ್ಟೆ ಇಡಲು ಹಾಗೂ ಆಹಾರಕ್ಕಾಗಿ ತೀರಕ್ಕೆ ಬರುತ್ತವೆ. ಅದರಂತೆ ಈ ವರ್ಷವೂ ಸಾಕಷ್ಟು ಸಂಖ್ಯೆಯ ಮೀನುಗಳು ಸಮುದ್ರ ತೀರಕ್ಕೆ ಬಂದಿವೆ ಎಂದು ಸ್ಥಳೀಯ ಮೀನುಗಾರರು ತಿಳಿಸಿದ್ದಾರೆ.

Write A Comment