ಕನ್ನಡ ವಾರ್ತೆಗಳು

ಎಂಡೋ ಸಂತ್ರಸ್ತರ ಹಲವು ಬೇಡಿಕೆ ಈಡೇರಿಕೆಗಾಗಿ ಧರಣಿ.

Pinterest LinkedIn Tumblr

Endo_Protest_photo_1

ಮಂಗಳೂರು, ಸೆ.29: ಸ್ಥಗಿತಗೊಂಡಿರುವ ಮಾಸಾಶನ, ಸಂತ್ರಸ್ತರ ಆಯ್ಕೆಯ ವೈದ್ಯ ಕೀಯ ಶಿಬಿರ ಪುನರಾರಂಭ, ನ್ಯಾಯಾಲಯದ ಆದೇಶ ಅನುಷ್ಠಾನ ಮೊದಲಾದ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಎಂಡೋಸಲ್ಫಾನ್ ಸಂತ್ರಸ್ತರು ಸೋಮವಾರ ಬೀದಿಗಿಳಿದು ಹೋರಾಟ ನಡೆಸಿದರು. ಎಂಡೋ ಸಂತ್ರಸ್ತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಧರಣಿಗೆ ಚಾಲನೆ ನೀಡಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್ ಯೂತ್ ವಿಂಗ್ ಜಿಲ್ಲಾಧ್ಯಕ್ಷ ಮುಹಮ್ಮದ್ ಮುಹ್ಸಿನ್, ಎಂಡೋ ಪೀಡಿತರಿಗಾಗಿ ಉನ್ನತ ವೈದ್ಯರನ್ನು ಜಿಲ್ಲೆಗೆ ತರಿಸಿ ವೈದ್ಯಕೀಯ ಶಿಬಿರ ನಡೆಸುವುದಾಗಿ ಸರಕಾರ ಭರವಸೆ ನೀಡಿದ್ದರೂ ವೈದ್ಯ ವಿದ್ಯಾರ್ಥಿಗಳಿಂದ ಶಿಬಿರ ನಡೆಸಿ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯವನ್ನು ಮಾಡಲಾಗಿದೆ ಎಂದು ಆಕ್ಷೇಪಿಸಿದರು. ಎಂಡೋ ಸಂತ್ರಸ್ತರು ಈಗಾಗಲೇ ನರಕ ಸದೃಶ ಜೀವನ ನಡೆಸುತ್ತಿದ್ದು, ಅವರಿಗೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಕಳೆದ ನಾಲ್ಕು ತಿಂಗಳಿನಿಂದ ಬಾಕಿಯಾಗಿರುವ ಮಾಸಾಶನವನ್ನು ಕೂಡಲೇ ಬಿಡುಗಡೆಗೊಳಿ ಸಬೇಕು ಎಂದು ಅವರು ಒತ್ತಾಯಿಸಿದರು. ಧರಣಿಯನ್ನುದ್ದೇಶಿಸಿ ಹರೀಶ್ ಪೂಂಜಾ, ನವೀನ್ ಪುತ್ತೂರು ಮೊದಲಾದವರು ಮಾತನಾಡಿ, ಸಂತ್ರಸ್ತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.

Endo_Protest_photo_2 Endo_Protest_photo_3 Endo_Protest_photo_4

ಪ್ರಮುಖ ಬೇಡಿಕೆಗಳು:
ಸ್ಥಗಿತಗೊಂಡಿರುವ ಮಾಸಾಶನ ತಕ್ಷಣ ಬಿಡುಗಡೆಗೊಳಿಸಬೇಕು ಹಾಗೂ ಪಿಂಚಣಿಯನ್ನು ಒಂದೇ ಇಲಾಖೆ ವಿತರಿಸಬೇಕು. ಮೇಲ್ದರ್ಜೆ ಗೇರಿರುವ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು. ಎಂಡೋ ಪೀಡಿತರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಬೇಕು ತಾಲೂಕಿಗೆ ಒಂದು ಶಾಶ್ವತ ಪುನರ್ವಸತಿ ಕೇಂದ್ರ ನೀಡಬೇಕು ಮಲಗಿದ್ದಲ್ಲೇ ಇರುವ ಸಂತ್ರಸ್ತರ ಚಿಕಿತ್ಸೆಗಾಗಿ ಸ್ಟಾಫ್ ನರ್ಸನ್ನು ಒದಗಿಸಬೇಕು. ಸಂಚಾರಿ ಆಸ್ಪತ್ರೆಯನ್ನು ತಕ್ಷಣ ಆರಂಭಿಸಬೇಕು. ಎಂಡೋ ಸಂತ್ರಸ್ತರ ಸಮಗ್ರ ಮಾಹಿತಿಯನ್ನು ಒಳಗೊಂಡ ವೆಬ್‌ಸೈಟ್ ಆರಂಭಿಸಬೇಕು ಮೊದಲಾದ 12 ಬೇಡಿ ಕೆಗಳನ್ನು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಹಸ್ತಾಂತರಿಸಲಾಯಿತು.

ಬೇಡಿಕೆ ಈಡೇರದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ:
ಎಂಡೋ ಪೀಡಿತರು ಹಾಗೂ ಅವರ ಕುಟುಂಬ ಈಗಾಗಲೇ ನರಕಯಾತನೆ ಅನುಭವಿ ಸುತ್ತಿದ್ದಾರೆ. ಆದರೆ ಸರಕಾರ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡುತ್ತಿರುವು ದಾಗಿ ಸುಳ್ಳು ಹೇಳುತ್ತಿದೆ. ಎಂಡೋ ಪೀಡಿತರನ್ನು ಭಿಕ್ಷೆ ಬೇಡುವ ಪರಿಸ್ಥಿತಿಗೆ ತರಲಾಗಿದೆ. ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿಲ್ಲ. ನಮ್ಮ ಹಕ್ಕಿಗಾಗಿ ನಾವೇನು ಬಂದೂಕು ಹಿಡಿಯಬೇಕೇ ಎಂದು ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ತೀವ್ರ ಅಸಹನೆ ವ್ಯಕ್ತಪಡಿಸಿದರು.

ಎಂಡೋ ಸಂತ್ರಸ್ತರು ಇಟ್ಟಿರುವ ಬೇಡಿಕೆಗಳನ್ನು ಈಡೇರಿಸದಿದ್ದರೆ ಶೀಘ್ರವೇ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ತೀವ್ರಗೊಳಿಸಲಾ ಗುವುದು ಎಂದವರು ಎಚ್ಚರಿಸಿದರು.

Write A Comment