ಕನ್ನಡ ವಾರ್ತೆಗಳು

ಕುಂದಾಪುರ: ತೆಕಟ್ಟೆಲ್ಲೊಂದು ಬಾಯ್ತೆರೆದು ನಿಂತ ಡೇಂಜರಸ್ ಬಾವಿ!

Pinterest LinkedIn Tumblr

ಕುಂದಾಪುರ: ದಲಿತರಿಗೆ ಸೌಲಭ್ಯ, ಸೌಕರ್ಯ ನೀಡುವಲ್ಲಿ ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆಯಾದರೂ ಕೆಲವು ಕಡೆ ಅದೇ ಸೌಲಭ್ಯಗಳು ರಾಜಕೀಯ ಕಾರಣಕ್ಕಾಗಿ ಅಪೂರ್ಣವಾಗಿ ಜನರು ಇನ್ನಷ್ಟು ಬವಣೆ ಪಡಬೇಕಾಗುತ್ತೆ. ಇಲ್ಲೊಂದು ಕಡೆ ಕುಡಿಯುವ ನೀರಿನ ಬಾವಿ ನಿರ್ಮಿಸಿದ್ದು ನಿಜ, ಆದ್ರೇ ಕುಡಿಯುವ ನೀರಿಗೆ ಇಲ್ಲಿನ ಜನರ ಅಲೆದಾಟ ತಪ್ಪಿಲ್ಲ, ತೆಕ್ಕಟ್ಟೆ ಬಾರಾಳಿಬೆಟ್ಟು ಎಂಬಲ್ಲಿ ಮನೆಗೆ ತಾಗಿಕೊಂಡೇ ಇರುವ ಡೇಂಜರ್ ಬಾವಿಯ ಬಗೆಗ್ಗಿನ ಕಂಪ್ಲೀಟ್ ಸ್ಟೋರಿಯಿದು.

ಇದು ತೆಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಬಾರಾಳಿಬೆಟ್ಟು. ಪಂಚಾಯತಿನಿಂದ ಕೂಗಳತೆ ದೂರದಲ್ಲಿದೆ. ಇಲ್ಲೊಂದಷ್ಟು ದಲಿತರ ಮನೆಗಳಿದೆ. 20 ವರ್ಷಗಳ ಹಿಂದಿನ ಬಾವಿಯು ಹಾಳಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ ಕಾರಣ ಜನರ ಕಷ್ಟಕ್ಕೆ ಸ್ಪಂದಿಸಿದ ಸ್ಥಳೀಯ ಕೆಲವು ಜನಪ್ರತಿನಿಧಿಗಳು ಇಲ್ಲೊಂದು ಕುಡಿಯುವ ನೀರಿನ ಬಾವಿ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದರು. ಜನರಿಗೆ ತುರ್ತು ಕುಡಿಯುವ ನೀರು ಕೊಡುವ ಬರದಲ್ಲಿ ಬಾವಿ ಮಂಜೂರಾತಿಯೂ ಆಗದೇ ಇದ್ದರೂ ಕಾಮಗಾರಿ ಆರಂಭವಾಗಿಯೇ ಬಿಡ್ತು. ವಕ್ವಾಡಿ ಮೂಲದ ವ್ಯಕ್ತಿಯೋರ್ವರು ಬಾವಿ ನಿರ್ಮಾಣದ ಗುತ್ತಿಗೆಯನ್ನು ಪಡೆದು ಇಲ್ಲಿನ ದೇವಿ ಎನ್ನುವವರ ವಾಸದ ಮನೆ ಸಮೀಪ ಕಾಮಗಾರಿ ಆರಂಭಿಸಿಯೇ ಬಿಟ್ರು. ಒಂದು ಬಾವಿಯೂ ಸ್ಥಳದಲ್ಲಿ ನಿರ್ಮಾಣವೂ ಅಯ್ತು. ಆದ್ರೇ ಆರ್ಡರ್ ಆಗದ ಬಾವಿ ಕೆಲಸ ಮಾಡಿದ ಕಾರಣ ಅದಕ್ಕೆ ಹಣ ಪಾವತಿ ಆಗಿರಲಿಲ್ಲ, ಗುತ್ತಿಗೆದಾರರು ಅರ್ಧಕ್ಕೆ ಕೆಲಸ ನಿಲ್ಲಿಸಿ ಬಿಟ್ರು. ಸದ್ಯ ಈಗ ಅರೆಬರೆ ಕಾಮಗಾರಿಯಾದ ಬಾವಿ ಆವರಣವಿಲ್ಲದೇ ಅಪಾಯಕಾರಿಯಾಗಿ ಬಾಯ್ತೆರೆದು ನಿಂತಿದೆ. 18 ಅಡಿ ಆಳವಿರುವ ಈ ಬಾವಿ ಸಮೀಪವೇ ಮನೆಯಿದ್ದು ಮಕ್ಕಳಿರುವ ಕಾರಣ ಅಪಾಯಕಾರಿ ಬಾವಿಯ ಬಗ್ಗೆ ಸ್ಥಳೀಯರು ಪ್ರತಿಕ್ಷಣವೂ ಜಾಗ್ರತರಾಗಿಯೇ ಇರಬೇಕಾಗುತ್ತೆ.

tekkatte_Well_Problem (5) tekkatte_Well_Problem (3) tekkatte_Well_Problem (1) tekkatte_Well_Problem (7) tekkatte_Well_Problem (2) tekkatte_Well_Problem (6) tekkatte_Well_Problem (4)

ಕುಡಿಯುವ ನೀರಿನ ಸಲುವಾಗಿ ನಿರ್ಮಿಸಿದ ಬಾವಿ ಇನ್ನು ಆವರಣ ಪರಿಪುರ್ಣವಾಗದೇ ಬಾಯ್ತೆರೆದು ನಿಂತಿದೆ. ಇನ್ನು ಬಾವಿಯೊಳಗೆ ಸಿಮೆಂಟು ಮೊದಲಾದವುಗಳು ಬಿದ್ದಿರುವ ಕಾರಣ ಬಾವಿ ನೀರನ್ನು ಕಾಲಿ ಮಾಡಿ ನೀರನ್ನು ಶುದ್ದಗೊಳಿಸಬೇಕಿತ್ತು, ಆ ಕೆಲಸವನ್ನೂ ಮಾಡಿಲ್ಲ. ಅಲ್ಲದೇ ಮಳೆ ಬರುವ ಸಂದರ್ಭ ಆವರಣ ಇಲ್ಲದ ಕಾರಣ ಹೊರಗಿನ ಕೊಳಚೆ ನೀರು ಬಾವಿಗೆ ಹೊಕ್ಕುತ್ತದೆ. ಇದರಿಂದಾಗಿ ಸದ್ಯ ಕುಡಿಯುವ ನೀರಿಗಾಗಿ ಇಲ್ಲಿನ ಜನರು ಬೇರೆಯವರ ಮನೆಯನ್ನೇ ಅವಲಂಭಿಸಬೇಕಿದೆ. ಅಲ್ಲದೇ ದಲಿತರು ಬೇರೆಯವರ ಬಾವಿಯನ್ನು ಮುಟ್ಟಬಾರದೆಂಬ ಕಟ್ಟುಪಾಡುಗಳು ಇನ್ನೂ ಈ ಭಾಗದಲ್ಲಿ ಜೀವಂತವಿದ್ದು ಮನೆಯವರೇ ನೀರು ಎತ್ತಿ ಇವರ ಕೊಡಗಳಿಗೆ ಹಾಕಬೇಕಾಗುತ್ತದೆ, ಕುಡಿಯುವ ನೀರಿನ ಸಲುವಾಗಿ ಬೇರೆಯವರ ಮನೆಮುಂದೆ ಕೊಡ ಹಿಡಿದು ಕಾದು ನಿಲ್ಲಬೇಕೆಂದು ಇವರು ತಮ್ಮ ನೋವನ್ನು ತೋಡಿಕೊಳ್ತಾರೆ ಸ್ಥಳೀಯ ನಿವಾಸಿ ಸಣ್ಣಮ್ಮ.

ರಾಜಕೀಯ ಪ್ರತಿಷ್ಟೆಗಳ ಸಮಸ್ಯೆಯಿಂದಾಗಿ ಈ ಭಾಗದಲ್ಲಿ ದಲಿತರು ನಿತ್ಯ ಸಮಸ್ಯೆ ಅನುಭವಿಸ್ತಿದ್ದಾರೆ, ಹಲವು ಬಾರೀ ಬಾವಿ ಸಮಸ್ಯೆ ಬಗ್ಗೆ ಪಂಚಾಯತ್ ಗಮನಕ್ಕೆ ತಂದರೂ ಪಂಚಾಯತ್ ಯಾವುದೇ ಕ್ರಮಕೈಗೊಂಡಿಲ್ಲ್ವಂತೆ, ಬದಲಾಗಿ ಪಿ.ಡಿ.ಓ. ಬೇಜವಬ್ದಾರಿ ಉತ್ತರ ಕೋಡ್ತಾರಂತೆ. ಹೀಗೆ ಮುಂದುವರಿದ್ರೇ ಪಂಚಾಯತ್ ಎದ್ರು ನಾವು ಪ್ರತಿಭಟನೆ ನಡೆಸ್ತೇವೆ ಅಂತಾರೆ ಡಿ.ವೈ.ಎಫ್.ಐ. ಮತ್ತು ಕಾರ್ಮಿಕ ಸಂಘಟನೆ ತೆಕ್ಕಟ್ಟೆ ಘಟಕದ ಕಾರ್ಯದರ್ಶಿ ಸತೀಶ್ ತೆಕ್ಕಟ್ಟೆ.

ಒಟ್ಟಿನಲ್ಲಿ ದಲಿತರ ಸಮಸ್ಯೆ ಕೇಳೋರ್‍ಯಾರು ಎಂಬ ಪ್ರಶ್ನೆ ಈಗ ತೆಕ್ಕಟ್ಟೇ ಬಾರಾಳಿಬೆಟ್ಟು ಜನರನ್ನು ಕಾಡುತ್ತಿದೆ, ಕೇಳಿದ್ರೇ ಮಳೆಗಾಲದ ನೆಪವೊಡ್ಡಿ ಕೆಲಸ ಮಾಡಲು ಕಷ್ಟವಾಗುತ್ತಿದೆ ಎನ್ನಲಾಗುತ್ತಿದ್ದು, ಸದ್ಯ ಮಳೆ ಹಿನ್ನಡೆಯಾಗಿದ್ದರೂ ಕೆಲಸ ಮಾತ್ರ ಆರಂಭವಾಗಿಲ್ಲ. ಇನ್ನಾದರೂ ಸಂಬಂದಪಟ್ಟವರು ಎಚ್ಚೆತ್ತುಕೊಂಡು ಶೀಘ್ರ ಈ ಬಾವಿ ಕೆಲಸ ಪೂರ್ಣಗೊಳಿಸಿ ಜನರ ಸಮಸ್ಯೆಗೆ ಸ್ಪಂಧಿಸಬೇಕಿದೆ.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Write A Comment