ಕನ್ನಡ ವಾರ್ತೆಗಳು

ಸ್ಯಾಂಡಲ್‌ ವುಡ್‌ ಖ್ಯಾತ ನಟ ಕಿಚ್ಚ ಸುದೀಪ್ ದಾಂಪತ್ಯದಲ್ಲಿ ಹೊತ್ತಿಕೊಂಡಿತಾ ಕಿಚ್ಚು..?

Pinterest LinkedIn Tumblr

sudeep_Divorce_Wife

ಬೆಂಗಳೂರು: ಸ್ಯಾಂಡಲ್‌ ವುಡ್‌ ಖ್ಯಾತ ನಟರಾಗಿ, ಬಹುಭಷೆಯಲ್ಲು ನಟಿಸಿ ಜನಮನ್ನಣೆಗೆ ಪಾತ್ರರದ ಕಿಚ್ಚ ಸುದೀಪ್‌ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಮ್ಮ ಪತ್ನಿ ಪ್ರಿಯಾ ರಾಧಾಕೃಷ್ಣನ್ ಅವರಿಗೆ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಚೇದನ ನೀಡಲು ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸುದೀಪ್ ಮತ್ತು ಪ್ರಿಯಾರಾಧಾಕೃಷ್ಣನ್ ಅವರ 14 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ಪರಸ್ಪರ ಒಪ್ಪಿಗೆಯ ಮೇಲೆ ಅಂತ್ಯವಾಗುತ್ತಿದೆ. ಮೂಲಗಳ ಪ್ರಕಾರ ಸುದೀಪ್ ಮತ್ತು ಪ್ರಿಯಾ ರಾಧಾಕೃಷ್ಣನ್ ಅವರು ಪರಸ್ಪರ ಸಮ್ಮತಿಯ ಮೇರೆಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದು, 11 ವರ್ಷ ವಯಸ್ಸಿನ ಓರ್ವ ಪುತ್ರಿಯನ್ನು ಪತ್ನಿ ಪ್ರಿಯಾ ಸುಪರ್ದಿಗೆ ನೀಡುವ ಬಗ್ಗೆಯೂ ಒಪ್ಪಿಕೊಳ್ಳಲಾಗಿದೆಯೆನ್ನಲಾಗಿದೆ. ಅಲ್ಲದೆ ಪ್ರಿಯಾ ಅವರಿಗೆ 19 ಕೋಟಿ ರೂಪಾಯಿಗಳನ್ನೂ ಜೀವನಾಂಶವಾಗಿ ನಟ ಸುದೀಪ್‌ ಅವರು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಕಾಲೇಜು ಸಮಯದಲ್ಲಿಯೇ ಪ್ರೀತಿ ಮಾಡಿದ್ದ ಪ್ರೇಯಸಿಯನ್ನು ಸುದೀಪ್‌ ಅವರು 2001ರಲ್ಲಿ ಮದುವೆಯಾಗಿದ್ದರು. ಮೂಲತಃ ಕೇರಳ ನಾಯರ್ ಕುಟುಂಬ ಮೂಲದವರಾದ ಪ್ರಿಯಾ ರಾಧಾಕೃಷ್ಣನ್ ಹಾಗೂ ಸುದೀಪ್ ದಂಪತಿಗೆ 11 ವರ್ಷ ವಯಸ್ಸಿನ ಓರ್ವ ಪುತ್ರಿಯಿದ್ದಾರೆ. ಈ ಹಿಂದೆ 2013ರಲ್ಲಿ ನಟ ಸುದೀಪ್ ಅವರು ತಮ್ಮ ಪತ್ನಿ ಪ್ರಿಯಾ ಅವರಿಗೆ “ಸ್ಟೇಜ್ 360” ಎಂಬ ಈವೆಂಟ್ ಮ್ಯಾನೇಜ್ ಮೆಂಟ್ ಸಂಸ್ಥೆಯನ್ನು ಸ್ಥಾಪನೆ ಮಾಡಿಕೊಟ್ಟಿದ್ದರು. ಸುದೀಪ್ ಅವರ ಕೆಲವು ಖಾಸಗಿ ವಾಹಿನಿ ಕಾರ್ಯಕ್ರಮಗಳು ಹಾಗೂ ಅವರು ಭಾಗವಹಿಸುತ್ತಿದ್ದ ಕ್ರಿಕೇಟ್ ಆಟಗಳ ಸಂದರ್ಭದಲ್ಲಿಯೂ ಪ್ರಿಯಾ ಭಾಗಿಯಾಗುತ್ತಿದ್ದು ಗಂದನ ಬಗ್ಗೆ ಕಾಳಜಿ ವಹಿಸುತ್ತಿದರೆನ್ನಲಾಗಿದೆ. ಆದರೇ ಸುದೀಪ್ ದಂಪತಿಗಳನ್ನು ಅತೀ ಹತ್ತಿರದಿಂದ ಕಂಡ ಕೆಲವು ಮೂಲಗಳು ಹೇಳುವ ಪ್ರಕಾರ ಇತ್ತೀಚೆಗೆ ಕೆಲವು ಸಮಯಗಳಿಂದ ಇಬ್ಬರ ದಾಂಪತ್ಯದಲ್ಲಿ ಎಲ್ಲವೂ ಸರಿಯಾಗಿರಲಿಲ್ಲವೆಂದು ತಿಳಿದುಬಂದಿದೆ.

ಈ ಸಂಬಂಧ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಸುದೀಪ್‌ ಅವರು ಕಳೆದ ಕೆಲವು ವರ್ಷಗಳಿಂದ ನಮ್ಮ ನಡುವೆ ಸಾಕಷ್ಟು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದ ಕಾರಣ ಪರಸ್ಪರ ಸಮ್ಮತಿಯ ಮೂಲಕ ಈ ವಿಚ್ಚೇದನ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ ಎನ್ನಲಾಗಿದೆ.

Write A Comment