ಉಡುಪಿ: ಸುಮಾರು ಒಂದು ತಿಂಗಳುಗಳಿಂದ ಮುನಿಸಿಕೊಂಡಿದ್ದ ವರುಣರಾಯ ಕರಾವಳಿಯಲ್ಲಿ ಮತ್ತೆ ಪ್ರತ್ಯಕ್ಷನಾಗಿದ್ದಾನೆ. ಸೋಮವಾರ ಮಧ್ಯಾಹ್ನದಿಂದ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ತುಂತುರು ಮಳೆಯಾಗಿತ್ತು. ಸೋಮವಾರ ಸಂಜೆ ಸುಮಾರಿಗೆ ಉಡುಪಿ ಜಿಲ್ಲೆ ಹಾಗೂ ಕುಂದಾಪುರ ತಾಲೂಕಿನ ಹಲವೆಡೆಗಳಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗಿದೆ.
(ಬರ ಸಿಡಿಲಿಗೆ ಬಲಿಯಾದ ಸಂದೀಪ್ ಪೂಜಾರಿ)
ಸೋಮವಾರ ರಾತ್ರಿ ವೇಳೆ ಏಕಾಏಕಿ ಸುರಿದ ಬಾರೀ ಮಳೆ ರೈತರಲ್ಲಿ ಹರ್ಷ ಮೂಡಿಸಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ಬಾವಿಗಳಲ್ಲಿ ನೀರು ಕಡಿಮೆಯಾಗುತ್ತಿದ್ದು ಮುಂದಿನ ವರ್ಷ ಕುಡಿಯಲು ನೀರಿಗೆ ತತ್ವಾರ ಬರುವ ಭಯದಲ್ಲಿ ಜನರಿದ್ದಾರೆ. ಅಲದೇ ಭತ್ತದ ಕ್ರಷಿಭೂಮಿಗಳಲ್ಲಿ ನೀರಿಲ್ಲದೇ ಫಸಲು ಬಿಸಿಲಿನ ಅಟ್ಟಹಾಸಕ್ಕೆ ಸಿಕ್ಕಿತ್ತು. ಸೋಮವಾರ ಸುರಿದ ಮಳೆ ಕೊಂಚ ರೈತರು ಹಾಗೂ ಜನರಲ್ಲಿ ಹರ್ಷವನ್ನುಂಟು ಮಾಡಿದರೇ ಹೆದ್ದಾರಿಯಲ್ಲಿ ಅತುಷ್ಪತ ಅರೆಬರೆ ಕಾಮಗಾರಿಯಿಂದಾಗಿ ನೆರೆ ಸ್ರಷ್ಟಿಯಾಗಿತ್ತು.
ಸಿಡಿಲಿಗೆ ಬಲಿ: ಉಡುಪಿಯ ಹಿರಿಯಡ್ಕ ಸಮೀಪದ ಅಂಜಾರುವಿನಲ್ಲಿ ಸಿಡಿಲು ಬಡಿದ ಪರಿಣಾಮ ಯುವಕನೋರ್ವ ಗಯಗೊಂಡು ಸಾವನ್ನಪ್ಪಿದ ಘಟನೆ ವರದಿಯಾಗಿದೆ. ಇಲ್ಲಿನ ನಿವಾಸಿ ಸಂದೀಪ್ ಪೂಜಾರಿ (೨೬) ಸಿಡಿಲಿಗೆ ಬಲಿಯಾದ ಯುವಕನಾಗಿದ್ದು ಗದ್ದೆಗೆ ನೀರು ಹಾಯಿಸಲು ತೆರಳಿದಾಗ ಸೋಮವಾರ ಸಂಜೆ ವೇಳೆ ಈ ಘಟನೆ ಸಂಭವಿಸಿದೆ.
ಇನ್ನು ಮಣಿಪಾಲ ಸಮೀಪದಲ್ಲಿ ಗರಿಬಿಚ್ಚಿ ಕುಣಿಯುತ್ತಿದ್ದ ನವಿಲು ಪಕ್ಷಿಗೆ ಸಿಡಿಲು ಬಡಿದ ಕಾರಣ ಗರಿಬಿಚ್ಚಿದ ಸ್ಥಿತಿಯಲ್ಲಿ ರಾಷ್ಟ್ರಪಕ್ಷಿ ನವಿಲು ಸಾವನ್ನಪ್ಪಿದೆ.
ಇನ್ನು ಕುಂದಾಪುರ ಹಾಗೂ ಬೈಂದೂರಿನಲ್ಲೂ ಉತ್ತಮ ಮಳೆಯಾಗಿದ್ದು ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.