ಕನ್ನಡ ವಾರ್ತೆಗಳು

ಉಡುಪಿ ಶ್ರೀ ಕೃಷ್ಣನಿಗೆ ಲೀಲೋತ್ಸವ ಸಂಭ್ರಮ: ಪೊಡವಿಗೊಡೆಯನ ಕಾಣಲು ಬಂದ ಭಕ್ತಸಾಗರ

Pinterest LinkedIn Tumblr

ಉಡುಪಿ: ನಗರದ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ  ಜನ್ಮಾಷ್ಟಮಿ ಹಾಗೂ ಭಾನುವಾರ ವಿಟ್ಲಪಿಂಡಿ (ಶ್ರೀಕೃಷ್ಣ ಲೀಲೋತ್ಸವ) ಸಾವಿರಾರು ಭಕ್ತರ ಜನಸಾಗರದಲ್ಲಿ ಭಾರೀ ವಿಭೃಂಜಣೆಯಿಂದ ನಡೆದಿದೆ. ವಿಟ್ಲಪಿಂಡಿ( ಶ್ರೀ ಕೃಷ್ಣ ಲೀಲೋತ್ಸವ) ಆಚರಣೆಯಲ್ಲಿ ರಥದಲ್ಲಿ ಅಲಂಕರಿಸಿದ ಶ್ರೀ ಕೃಷ್ಣ ಮೂರ್ತಿಯೊಂದಿಗೆ ಪರ್ಯಾಯಾ ಕಾಣಿಯೂರು ಶ್ರೀಗಳು ರಥಬೀದಿಯಲ್ಲಿ ಸಾಗಿ ಬಂದರು. ಈ ಸಂದರ್ಭದಲ್ಲಿ ಹುಲಿವೇಷಗಳು ಕುಣಿತದ ಮೂಲಕ ಜನರ ಮನಸೂರೆಗೊಳಿಸಿತು.

vitlapinidi image 1 udp_06-09-15_vitlapindi_image (1) udp_06-09-15_vitlapindi_image (5) udp_06-09-15_vitlapindi_image (4) udp_06-09-15_vitlapindi_image (3) udp_06-09-15_vitlapindi_image (2)

 

ಚಿನ್ನದ ರಥದಲ್ಲಿ ಕುಳಿತು ಭಕ್ತ ಜನಸಾಗರವನ್ನು ಹರಸುವ ಶ್ರೀಕೃಷ್ಣನನ್ನು ಮನದಣಿಯೆ ಕಂಡು ಕಣ್ತುಂಬಿಕೊಳ್ಳಲು ಕಾತರಿಸಿದ ಜನತೆ ಮಧ್ಯಾಹ್ನವಾಗುತ್ತಿದ್ದಂತೆಯೇ ರಥಬೀದಿಯಲ್ಲಿ ಜಮಾವಣೆಗೊಂಡರು. ಎಲ್ಲಾ ರಸ್ತೆಗಳೂ ಜನರಿಂದ ತುಂಬಿದ್ದವು. ಭಾನುವಾರ ರಜಾ ದಿನವಾದ ಕಾರಣ ಭಕ್ತರ ಸಂಖ್ಯೆ ಇನ್ನಷ್ಟು ಜಾಸ್ಥಿಯಿತ್ತು. ಥಬೀದಿಯ ನಾಲ್ಕು ದಿಕ್ಕುಗಳಲ್ಲಿ ಹಾಕಲಾದ ಮೊಸರು ಕುಡಿಕೆ ಕಂಬದಲ್ಲಿ ಗೊಲ್ಲರು ಮೊಸರು ಕುಡಿಕೆಯನ್ನು ಒಡೆದು ಸಂಭ್ರಮಿಸಿದರು. ರಥಬೀದಿಯಲ್ಲಿ ನೆರೆದ ಸಾವಿರಾರು ಭಕ್ತ ಜನ ಸಾಗರಕ್ಕೆ ಶ್ರೀ ಕೃಷ್ಣ ಪ್ರಸಾದ ಉಂಡೆ- ಚಕ್ಕುಲಿಯನ್ನು ಎಸೆಯುವ ಮೂಲಕ ಭಕ್ತರು ಉಂಡೆ – ಚಕ್ಕುಲಿ ಪಡೆದು ಶ್ರೀ ಕೃಷ್ಣನ ಕೃಪೆಗೆ ಪಾತ್ರರಾದರು.

ಸಾಂಪ್ರದಾಯಿಕ ವೇಷಗಳಾದ ಹುಲಿವೇಷ, ಮರಕಾಲು, ಯಕ್ಷಗಾನ ವೇಷಗಳ ಹಲವು ತಂಡಗಳು ಮೊದಲೇ ಆಗಮಿಸಿ ಪ್ರದರ್ಶನ ನೀಡಿದರೆ ಉಳಿದ ತಂಡಗಳು ಅನಂತರ ಬಂದು ಸೇರಿಕೊಂಡವು. ಪರ್ಯಾಯ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಶೀರೂರು ಶ್ರೀಗಳು ಹುಲಿವೇಷಧಾರಿಗಳ ಕಸರತ್ತನ್ನು ಕಂಡು ಪ್ರೋತ್ಸಾಹಿಸಿದರು. ಪೂತನಿ, ಕೇರಳದ ಭೂತಾರಾಧನೆಯ ವೇಷಗಳು ಮನಸೂರೆಗೊಳ್ಳುವಂತಹ ಪ್ರದರ್ಶನ ನೀಡಿದವು.

Write A Comment