ಮಂಗಳೂರು ಸೆ.04: ನಗರದ ಯುವತಿಯರ ಸಮಾಜ ಸೇವಾ ಸಂಸ್ಥೆ ಮಂಗಳೂರು ಮಹಿಳಾ ವೃತ್ತ -82 ಮತ್ತು ನಗರದ ಯುವಕರ ಸಮಾಜ ಸೇವಾ ಸಂಸ್ಥೆ ಶೀಲ್ಡ್ ಪ್ರತಿಷ್ಠಾನ ಇವರ ಜಂಟಿ ಆಶ್ರಯದಲ್ಲಿ ನಗರದ ದ.ಕ.ಜಿ.ಪ ಕದ್ರಿ ಮಲ್ಲಿಕಟ್ಟೆ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಯನ್ನು ಶುಕ್ರವಾರದಂದು ಆಚರಿಸಲಾಯಿತು.
ನಗರದ ಯುವತಿಯರ ಸಮಾಜ ಸೇವಾ ಸಂಸ್ಥೆ ಮಂಗಳೂರು ಮಹಿಳಾ ವೃತ್ತ – 82 ದ ಅಧ್ಯಕ್ಷೆಯಾದ ಶ್ರೀಮತಿ. ನಂದಿತ ಫೇರ್‌ನಾಂಡಿಸ್‌ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದ್ದು ಅವರ ನಿಸ್ವಾರ್ಥ ಮತ್ತು ಅನುಪಮ ಸೇವೆ ಅಮೂಲ್ಯ ಎಂದು ನುಡಿದು ಶಿಕ್ಷಕೀಯರಾದ ಶ್ರೀಮತಿ. ಪುಪ್ಪಾವತಿ, ಶ್ರೀಮತಿ. ದೋರತಿ ಡಾಯಸ್, ಶ್ರೀಮತಿ. ಕುಮುದಿನಿ, ಶ್ರೀಮತಿ, ಜಯಂತಿ, ಶ್ರೀಮತಿ. ಸವಿತ ರವರನ್ನು ಗೌರವಿಸಿ ಅವರ ಸೇವಾ ಮನೋಭಾವವನ್ನು ಶ್ಲಾಘಿಸಿದರು. ಬಳಿಕ ತಮ್ಮ ಸಂಘದ ಸೇವಾ ಚಟುವಟಿಕೆಗಳ ಅಂಗವಾಗಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ 75 ಕೊಡೆಗಳನ್ನು ಉಚಿತವಾಗಿ ವಿತರಿಸಿದರು.
ವೇದಿಕೆಯಲ್ಲಿ ಕಾರ್‍ಯದರ್ಶಿಯವರಾದ ಶ್ರೀಮತಿ. ನಯನ ಫೇರ್‌ನಾಂಡಿಸ್, ಸದಸ್ಯೆ ಶ್ರೀಮತಿ. ರೋಹಿಳ ರೈ, ಶೀಲ್ಡ್ ಪ್ರತಿಷ್ಠಾನದ ಅಧ್ಯಕ್ಷ ಶ್ರೀ. ಧರ್ಮಿಥ್ ರೈ, ಕಾರ್‍ಯದರ್ಶಿ ಶ್ರೀ. ವರ್‌ಧನ್ ಪೈ, ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ. ಎಮ್.ವಿ.ಮಲ್ಯ ಉಪಸ್ಥಿತರಿದ್ದರು. ಖ್ಯಾತ ಮೆಡಿಮಿಕ್ಸ್ ಸಂಸ್ಥೆ ವಿದ್ಯಾರ್ಥಿಗಳಿ ಗೆ ಉಚಿತ ಸಾಬೂನ್, ಬಿಸ್ಕ್‌ಟ್, ಚಾಕ್‌ಲೇಟ್‌ಗಳನ್ನು ಪ್ರಾಯೋಜಿಸಿದ್ದರು.
ಪ್ರಾರಂಭದಲ್ಲಿ ಶಿಕ್ಷಕಿ ಶ್ರೀಮತಿ. ಪುಪ್ಪಾವತಿ, ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ. ದೋರತಿ ಡಾಯಸ್, ಧನ್ಯವಾದ ನೀಡಿದರು. ಶಿಕ್ಷಕಿ ಶ್ರೀಮತಿ. ಕುಮುದಿನಿ, ಕಾರ್‍ಯಕ್ರಮ ನಿರೂಪಿಸಿದರು.






