ಕನ್ನಡ ವಾರ್ತೆಗಳು

ಕುಮಟಾ ಗ್ಯಾಸ್ ಟ್ಯಾಂಕರ್ ಪಲ್ಟಿ ಪ್ರಕರಣ: ಮಣಿಪಾಲ ಆಸ್ಪತ್ರೆಗೆ ಆರ್.ವಿ. ದೇಶಪಾಂಡೆ ಭೇಟಿ

Pinterest LinkedIn Tumblr

ಉಡುಪಿ: ಕುಮಟಾ ಸಮೀಪದ ಬರ್ಗಿ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸ್ಪೋಟಗೊಂಡ ಅವಘಡದಲ್ಲಿ ಗಾಯಗೊಂಡವರನ್ನು ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದು ಈ ಆಸ್ಪತ್ರೆಗೆ ಶುಕ್ರವಾರ ಪ್ರವಾಸೋಧ್ಯಮ ಮತ್ತು ಉನ್ತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

R.vi. Deshapande visit__Manipal_Kumta case (3)

R.vi. Deshapande visit__Manipal_Kumta case (1)

R.vi. Deshapande visit__Manipal_Kumta case (2)

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯಿಂದ ಮನಸ್ಸಿಗೆ ಅತೀವ ದುಃಖಕರವಾಗಿದೆ. ಇನ್ನು ಏಳು ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರು ಜನರಲ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮ್ರತರ ಕುಟುಂಬಗಳಿಗೆ 2 ಲಕ್ಷ ಹಾಗೂ ಗಾಯಾಳುಗಳಿಗೆ 1 ಲಕ್ಷ ಪರಿಹಾರವನ್ನು ಸರಕಾರದಿಂದ ಕೊಡಿಸುವ ಭರವಸೆ ನೀಡಿದ್ದಲ್ಲದೇ ಮದ್ಯಂತರ ಪರಿಹಾರವನ್ನು ಕುಟುಂಬಳಿಗೆ ಶೀಘ್ರವೇ ಸರಕಾರದಿಂದ ಕೊಡಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿಯೂ ತಿಳಿಸಿದರು. ಅಲ್ಲದೇ ಮ್ರತರು ಹಾಗೂ ಗಾಯಾಳುಗಳಿಗೆ ಯೋಗ್ಯ ಪರಿಹಾರ ಧನ ಮತ್ತು ಆಸ್ತಿಪಾಸ್ತಿ ಹಾನಿಗೊಳಗಾದವರಿಗೆ ಸೂಕ್ತ ಪರಿಹಾರವನ್ನು ನೀಡುವ ಬಗ್ಗೆಯೂ ಸಂಬಂಧಪಟ್ಟ ತೈಲ ಕಂಪನಿಗಳಿಗೆ ಈಗಾಗಲೇ ಸೂಚಿಸಿರುವ ಬಗ್ಗೆಯೂ ಇದೇ ಸಂದರ್ಭ ಅವರು ಹೇಳಿದ್ದಾರೆ.

ಬಿ.ಬಿ.ಎಂ.ಪಿ. ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೊಂಚ ನಿಷ್ಟೂರವಾಗಿಯೇ ಪ್ರತಿಕ್ರಿಯಿಸಿದ ಆರ್.ವಿ. ದೇಶಪಾಂಡೆ ಅವರು, ‘ನನ್ನ ಮನಸ್ಸಿನ ವಿಚಾರ ಮಾಧ್ಯಮದವರಿಗೆ ತೀಲಿಯುವುದಾದರೂ ಹೇಗೆ, ಅದನ್ನು ಬಹಿರಂಗಪಡಿಸೊಲ್ಲ, ಪಕ್ಷದ ಶಿಸ್ತಿನ ಸಿಪಾಯಿ ನಾನು, ಪಕ್ಷದ ತಿರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಈ ಬಗ್ಗೆ ನಾನು ಪ್ರತಿಕ್ರಿಯಿಸಲು ಉತ್ಸುಹಕನಾಗಿಲ್ಲ ಎಂದರು.

Write A Comment