ಮಂಗಳೂರು : ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಮರ್ಥನೀಯ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಹಾಗೂ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಕಮೆಂಟ್ ಮಾಡಿದ ಆರೋಪದ ಮೇಲೆ ಶ್ರೀ ರಾಮ ಸೇನೆಯ ಮಾಜಿ ನಾಯಕ ಪ್ರಸಾದ್ ಅತ್ತಾವರ ಅವರನ್ನು ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದರು.
ಸಾಮಾಜಿಕ ತಾಣವಾದ ವಾಟ್ಸ್ಅಪ್‌ನಲ್ಲಿ ಕಲಬುರ್ಗಿ ಹತ್ಯೆಯನ್ನು ಪ್ರಸಾದ್ ಅತ್ತಾವರ್ ಸಮರ್ಥಿಸಿಕೊಂಡಿದ್ದಾರೆ ಹಾಗೂ ಜೈ ಬಜರಂಗಿ’ ಎಂಬ ಹೆಸರಿನಲ್ಲಿ ಫೇಸ್‌ಬುಕ್ ಖಾತೆ ತೆರೆದು ಅದರಲ್ಲಿ ಪ್ರಸಾದ್ ಅತ್ತಾವರ ಅವರ ಫೋಟೊ ಹಾಕಿ ಡಾ | ಎಂ.ಎಂ. ಕಲಬುರ್ಗಿ ಹತ್ಯೆ ಬಗ್ಗೆ ಕೆಟ್ಟದ್ದಾಗಿ ಬರೆಯಲಾಗಿತ್ತು ಎಂಬ ಆರೋಪದ ಮೇಲೆ ಪ್ರಸಾದ್ ಅತ್ತಾವರ ಅವರನ್ನು ಬಂಧಿಸಲಾಗಿತ್ತು.
ಬಳಿಕ ಅವರನ್ನು ಬಂದರ್ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಸಾದ್ ವಿರುದ್ಧ ಐಪಿಸಿ ಸೆಕ್ಷನ್ 153a ಮತ್ತು 506 ಪ್ರಕರಣವನ್ನು ದಾಖಲಿಸಿದ್ದರು. ಬಳಿಕ ರಾತ್ರಿ ಅವರನ್ನು ನ್ಯಾಯಾಧೀಶರ ಮನೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜಾರು ಪಡಿಸಿದಾಗ ಪ್ರಸಾದ್ ಅತ್ತಾವರ್ ಅವರಿಗೆ ಜಡ್ಜ್ ಜಾಮೀನು ಮಂಜೂರು ಮಾಡಿದ್ದಾರೆ.
ಫೆಸ್‌ಬುಕ್‌ನಲ್ಲಿ ಕಮೆಂಟ್:
ಜೈ ಬಜರಂಗಿ. ಗುರು ಬೆಳಗ್ಗೆ ಧಾರವಾಡದಲ್ಲಿ ಬು(ಲ)ದ್ಧಿ ಜೀವಿ ಹಿಂದೂ ವಿರೋಧಿ ಸಾಹಿತಿ ಎಂ.ಎಂ. ಕಲಬುರ್ಗಿಯನ್ನು ಗುಂಡು ಹಾರಿಸಿ ಹತ್ಯೆ. ಹಿಂದೂ ದೇವಿ ದೇವತೆಗಳನ್ನು ಹೀಯಾಳಿಸಿದನರೆ ಇದೇ ಗತಿ ಅಂತ ಈಗಲಾದರೂ ಅರ್ಥ ಮಾಡಿ ಕೊಳ್ಳಿ ಬು(ಲ)ದ್ಧಿ ಜೀವಿಗಳೇ. ಇಲ್ಲಾಂದ್ರೆ ಆ ದೇವಿಯೇ ನಿಮ್ಮ ಮರ್ದನ ಮಾಡುತ್ತಾಳೆ. ಈಗಲಾದರೂ ಬದಲಾಗಿ. ಹೆಂಗ ಹೊಡದರ ನೋಡಿರಿ. ಹಿಂದೂ ದೇವರುಗಳಿಗೆ ಬೈಯ್ಯುವ, ಕುಂಕುಮ ಇಟ್ಟು ಕೊಳ್ಳದೆ ಇರೋನಿಗೆ ಹಣೆಗೆ ತಿಲಕ ಇಟ್ಟು ಕೊಳ್ಳೊ ಜಾಗಕ್ಕೆ ಗುಂಡು ಇಟ್ಟ ಆ ಪುಣ್ಯಾತ್ಮನಿಗೆ ಧನ್ಯವಾದಗಳು” ಎಂಬುದಾಗಿ ಪ್ರಸಾದ್ ಅತ್ತಾವರ ಅವರ ಹೆಸರಿನಲ್ಲಿರುವ ಫೆಸ್‌ಬುಕ್‌ನಲ್ಲಿ ಕಮೆಂಟ್ ಹಾಕಲಾಗಿತ್ತು.
ಈ ಎಲ್ಲಾ ಹಿನ್ನೆಲೆಯಲ್ಲಿ ಅವರನ್ನು ಬಂದರ್ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಸಾದ್ ವಿರುದ್ಧ ಐಪಿಸಿ ಸೆಕ್ಷನ್ 153a ಮತ್ತು 506 ಪ್ರಕರಣವನ್ನು ದಾಖಲಿಸಿದ್ದರು. ಸಂಜೆ ವೇಳೆಗೆ ಜೆ.ಎಂ.ಎಫ್.ಸಿ. 2 ನೇ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ರಾತ್ರಿ ಅವರನ್ನು ನ್ಯಾಯಾಧೀಶರ ಮನೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜಾರು ಪಡಿಸಿದಾಗ ಪ್ರಸಾದ್ ಅತ್ತಾವರ್ ಅವರಿಗೆ ಜಡ್ಜ್ ಜಾಮೀನು ಮಂಜೂರು ಮಾಡಿದ್ದಾರೆ.
ಫೇಸ್‌ಬುಕ್ ಖಾತೆಯನ್ನು ಪ್ರಸಾದ್ ಅತ್ತಾವರ್ ಸ್ವತ: ತೆರೆದು ಕಮೆಂಟ್ ಮಾಡಿದ್ದರೇ.. ಅಥವಾ ಅವರ ಹೆಸರಿನಲ್ಲಿ ಬೇರೆ ಯಾರೋ ಅಕೌಂಟ್ ತೆರೆದು ಕಮೆಂಟ್ ಹಾಕಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಭೂಗತ ಪಾತಕಿ ರವಿ ಪೂಜಾರಿ ಸಂಪರ್ಕ :ಒಂದು ವರ್ಷ ಜೈಲು
ಮಂಗಳೂರಿನಲ್ಲಿ ಸಂಭವಿಸಿದ ಪಬ್ ದಾಳಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಪ್ರಸಾದ್ ಅತ್ತಾವರ. ಬಜರಂಗ ದಳದ ಮಾಜಿ ಜಿಲ್ಲಾಧ್ಯಕ್ಷನಾಗಿದ್ದರು. 8 ವರ್ಷಗಳ ಕಾಲ ಈ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಇವರು ಭೂಗತ ಪಾತಕಿ ರವಿ ಪೂಜಾರಿ ಸಂಪರ್ಕದ ಹಿನ್ನೆಲೆಯಲ್ಲಿ 2010 ರಲ್ಲಿ ಜೈಲು ಸೇರಿ ಸುಮಾರು ಒಂದು ವರ್ಷ ಕಾಲ ಜೈಲಿನಲ್ಲಿದ್ದರು. ಜೈಲಿನಿಂದ ಹೊರ ಬಂದ ಬಳಿಕ ಮುತಾಲಿಕ್ ಜೊತೆ ಶ್ರೀರಾಮ ಸೇನೆಯ ಜವಾಬ್ದಾರಿ ವಹಿಸಿ ಅದರ ರಾಜ್ಯ ಸಂಚಾಲಕನಾಗಿಯೂ ಕಾರ್ಯನಿರ್ವಹಿಸಿದ್ದರು.



