ಮಂಗಳೂರು,ಆಗಸ್ಟ್.28 : ವಿವಾದಿತ ಎತ್ತಿನ ಹೊಳೆ ಯೋಜನೆಯ ಜಾರಿಗೊಳಿಸಿದ ರಾಜ್ಯ ಸರಕಾರದ ವಿರೋಧದ ಬಗ್ಗೆ ತುಳುನಾಡು ರಕ್ಷಣಾ ವೇದಿಕೆ ವಿರೋಧಿಸಿ ತೀವೃ ಹೋರಾಟ ನಡೆಸಲಿದೆ ಎಂದು ಸಂಘಟನೆಯ ಮುಖಂಡ ಎಂ.ಜಿ ಹೆಗ್ಡೆ ತಿಳಿಸಿದ್ದಾರೆ.
ಅವರು ಶುಕ್ರವಾರ ತುಳುನಾಡು ರಕ್ಷಣಾ ವೇದಿಕೆಯ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಎತ್ತಿನಹೊಳೆ ಯೋಜನೆಯ ವಿರುದ್ಧ ಸಂಘಟನೆಯ ಮುಂದಿನ ಹೆಜ್ಜೆಗಳ ಕುರಿತು ಮಾಹಿತಿ ನೀಡುತ್ತಿದ್ದರು.
ನಂತರ ಮಾತನಾಡಿದ, ತುಳುನಾಡು ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ತುಳುನಾಡಿನ ಜೀವನದಿ ನೇತ್ರಾವತಿಯ ಜೊತೆ ಬೆಸೆದುಕೊಂಡಿರುವ ಜನರ ಭಾವನಾತ್ಮಕ ವಿಚಾರದೊಂದಿಗೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ನಾವು ಸಿದ್ಧತೆಗಳನ್ನು ನಡೆಸುತ್ತಿದ್ದೇವೆ. ಇದರ ಯಶಸ್ಸಿಗಾಗಿ ಮತ್ತು ಯೋಜನೆ ಅನುಷ್ಟಾನವಾಗಲು ಕುತಂತ್ರ ರೂಪಿಸುತ್ತಿರುವ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ನಾಶವಾಗಲಿ ಎಂದು ಪ್ರಾರ್ಥಿಸಿ ಇದೇ ಬರುವ 31 ರಂದು ನಗರದ ಮಂಗಳಾದೇವಿ ದೇವಸ್ಥಾನ,ಹಜ್ರತ್ ಸೈದಾನಿ ಬೀಬಿ ದರ್ಗಾ ಮತ್ತು ರೊಝಾರಿಯಾ ಚರ್ಚ್ ನಲ್ಲಿ ಪೂಜೆ ಸಲ್ಲಿಸಲಿದ್ದೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಹಾಜಿ ಕೆ ಮುನೀರ್ ಬಾವ, ಹಸನ್ ಮಾಡೂರು, ಜ್ಯೋತಿಕಾ ಜೈನ್, ಮೋಹನ್ ದಾಸ್ ರೈ ಮೊದಲಾದವರು ಉಪಸ್ಥಿತರಿದ್ದರು.