ಮಂಗಳೂರು.ಆಗಸ್ಟ್.25: ಬೆಂಗಳೂರಿನ ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (ಕೆ.ಎಸ್.ಸಿ.ಎಸ್.ಟಿ.) ವತಿಯಿಂದ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಳೆದ ಆಗಸ್ಟ್ 20 ಮತ್ತು 21 ರಂದು ನಡೆದ ರಾಜ್ಯಮಟ್ಟದ 38 ನೇ ಸ್ಟೂಡೆಂಟ್ಸ್ ಪ್ರಾಜೆಕ್ಟ್ ಕಾರ್ಯಕ್ರಮದಲ್ಲಿ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ‘ ವರ್ಷದ ಪ್ರಾಜೆಕ್ಟ್’ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಕಾಲೇಜಿನ ಇಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ್ದ ಸ್ವಯಂ ಚಾಲಿತ ಅಡಿಕೆ ಮರ ಏರುವ ಮತ್ತು ಕೀಟನಾಶಕ ಔಷಧಿ ಸಿಂಪಡಿಸುವ ಯಂತ್ರದ ಪ್ರಾಜೆಕ್ಟ್ಗೆ 2014-15 ನೇ ಸಾಲಿನ ವರ್ಷದ ಪ್ರಾಜೆಕ್ಟ್ ಪ್ರಶಸ್ತಿ ಪಡೆದಿದ್ದಾರೆ.
ಪ್ರಾಜೆಕ್ಟ್ ರೂಪಿಸಿದ ವಿದ್ಯಾರ್ಥಿಗಳಾದ ಮನೋಜ್ ಕುಮಾರ್, ಚಂದ್ರಕಾಂತ ಶೆಣೈ, ಲೋಯಲ್ ರಯನ್, ಅಪರ್ಿತ್ ಕುಮಾರ್, ಇಲೆಕ್ಟ್ರಿಕಲ್ ವಿಭಾಗ ಮುಖ್ಯಸ್ಥೆ ಡಾ.ರಾಜಲಕ್ಷ್ಮೀ ಸಾಮಗ ಬಿ.ಎಲ್, ಕಾಲೇಜಿನ ಪ್ರಾಂಶುಪಾಲ ಡಾ. ಗಣೇಶ್ ವಿ.ಭಟ್, ಯೋಜನಾ ಮಾರ್ಗದರ್ಶಕರಾದ ಪ್ರೊ.ರಘುವೀರ ಎಚ್. ಮೊದಲಾದವರು ಉಪಸ್ಥಿತರಿದ್ದರು.