ವಿಟ್ಲ, ಆಗಸ್ಟ್.24: ಕಷ್ಟದ ವ್ಯಕ್ತಿಗಳ ಕಣ್ಣೀರೊರಸುವ ಕಾಯಕ ಎಲ್ಲರಿಂದ ನಡೆಯಬೇಕು. ಮಾರಾಟ ವ್ಯಾಪಾರದಿಂದ ಸಂಸ್ಥೆಗಳು ಹೊರ ಬಂದು ಸೇವಾ ಪರಿಕಲ್ಪತೆಯತ್ತ ಸಾಮಾಜಕ್ಕೆ ಕೊಡುಗೆ ನೀಡಬೇಕು.ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ವಾಕ್ಯದಂತೆ ನಾವು ಕೆಲಸ ಮಾಡಬೇಕು ಎಂದು ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಅವರು ಕುದ್ದುಪದವು ಉದಯಗಿರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ದಿ| ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ಷಷ್ಠ್ಯಬ್ದ ಸ್ಮರಣಾರ್ಥ ಭವಾನಿ ಫೌಂಡೇಶನ್ ಮುಂಬಯಿ ಸಂಸ್ಥೆಯ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.
ಭವಾನಿ ಫೌಂಡೇಶನ್ ಮುಂಬಯಿ ಲೋಕಾರ್ಪಣೆಗೊಳಿಸಿದ ಎಜೆ ಹಾಸ್ಪಿಟಲ್ ಎಂಡ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು ಇದರ ಸಂಸ್ಥಾಪಕ ಎ. ಜೆ ಶೆಟ್ಟಿ ಮಾತನಾಡಿ ಜೀವನದಲ್ಲಿ ಗಳಿಸಿದ ಸಂಪತ್ತಿನ ಒಂದು ಅಂಶವನ್ನು ಸಮಾಜ ಸೇವೆಗೆ ವಿನಿಯೋಗಿಸಬೇಕು.ಆರೋಗ್ಯ ಇದ್ದಾಗ ಮಾತ್ರ ಮನುಷ್ಯನಿಗೆ ಸಮಾಜ ಸೇವೆಯ ಚಟುವಟಿಕೆಯಲ್ಲಿ ಭಾಗವಹಿಸಲು ಸಾಧ್ಯ. ಹಳ್ಳಿಯ ಜನರು ಆಧುನಿಕ ವೈದ್ಯಕೀಯ ಸೇವೆಯನ್ನು ಉಪಯೋಗಿಸಿಕೊಳ್ಳಬೇಕು. ರೋಗದ ಪ್ರಥಮ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳಲು ಪ್ರಯೊಬ್ಬರೂ ಮುಂದೆಬರಬೇಕು ಎಂದು ತಿಳಿಸಿದರು.
ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಸುಬೋಧ್ ಕುಮಾರ್ ರೈ ಅವರು ಸಂಸದ ನಾಡಿ ಪರೀಕ್ಷಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭವಾನಿ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕ-ಕಾರ್ಯಾಧ್ಯಕ್ಷ ದಡ್ದಂಗಡಿ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ ವಹಿಸಿದರು.
ಈ ಸಂದರ್ಭಕೇಪು-ವಿಟ್ಲಗ್ರಾಮ ಪಂಚಾಯಿತಿಅಧ್ಯಕ್ಷ ತಾರನಾಥ ಆಳ್ವ, ಜಿಲ್ಲಾ ಪಂಚಾಯಿತಿ ಸದಸ್ಯ ಚೆನ್ನಪ್ಪ ಆರ್.ಕೋಟ್ಯಾನ್, ತಾಲೂಕು ಪಂಚಾಯಿತಿ ಸದಸ್ಯೆ ಲಲಿತಾ ಶಿವಪ್ಪ ನಾಯ್ಕ್, ಕಾರ್ಯನಿರತ ಪತ್ರಕರ್ತರ ಸಂಘ ಬಂಟ್ವಾಳ ತಾಲೂಕು ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ಚೆಲ್ಲಡ್ಕ ವಿಠಲ ಆಳ್ವ, ಸರಿತಾ ಕುಸುಮೋದರ ಆಳ್ವ, ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಅಧ್ಯಕ್ಷ ಸೀತಾರಾಮ ಶೆಟ್ಟಿ, ನಡುಮುಗೇರ್ ಶಿವರಾಮ ಶೆಟ್ಟಿ, ಡಾ. ವೈ ಭರತ್ ಶೆಟ್ಟಿ, ಜೀಕ್ಷಿತ್ ಕುಸುಮೋದರ ಶೆಟ್ಟಿ, ಚೆಲ್ಲಡ್ಕ ಪ್ರಕಾಶ್ ಡಿ ಶೆಟ್ಟಿ, ಗೋಪಾಲಕೃಷ್ಣ ಕುಂಡರ್, ಪ್ರೇಮನಾಥ ಶೆಟ್ಟಿ ಮುಂಡ್ಕೂರು, ಸವೀನ್‌ಚಂದ್ರ ಆರ್. ಸನೀಲ್‌ಮತ್ತಿತರರು ಉಪಸ್ಥಿತರಿದ್ದರು.
ಶ್ರೀಜಾ ಪ್ರಾರ್ಥಿಸಿದರು.ಭವಾನಿ ಪೌಂಡೇಶ್ ವಿಶ್ವಸ್ಥ ಸದಸ್ಯ ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು.ರಾಜೀವ ಭಂಡಾರಿ ಮಣಿಪದವು ಪ್ರಸ್ತಾವನೆಗೈದರು.ವಿಶ್ವಸ್ಥ ಸದಸ್ಯ, ಪತ್ರಕರ್ತ ರೋನ್ಸ್ ಬಂಟ್ವಾಳ ವಂದಿಸಿದರು.ಶಿಕ್ಷಕ ಸುರೇಶ್‌ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.
ಸಹಕಾರ – ಪ್ರಯೋಜನ:
ಉಚಿತಆರೋಗ್ಯ ಶಿಬಿರ ದಿವ್ಯಶಕ್ತಿಯುವಕ ಮಂಡಲ ಕುದ್ದುಪದವು, ದುರ್ಗಾಮಿತ್ರವೃಂದ, ಮೈರಾ-ಕೇಪು, ಉಳ್ಳಾಲ್ತಿ ಭಜನಾ ಮಂಡಳಿ ಅಮೈ, ಗುರೂಜಿಯುವಕ ಮಂಡಲ ಅಡ್ಯನಡ್ಕ ಸಂಸ್ಥೆಗಳ ಸಹಕಾರದಲ್ಲಿಎ.ಜೆ ಹಾಸ್ಪಿಟಲ್ ಎಂಡ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು ಸಂಸ್ಥೆಯಿಂದ ನಡೆಯಿತು.ಶಿಬಿರದಲ್ಲಿ ವಿವಿಧತರದಆರೋಗ್ಯ ತಪಾಸಣೆಗಳು ನಡೆದಿದ್ದು, ಸುಮಾರು ೫೧೧ ಮಂದಿ ಪ್ರಯೋಜನ ಪಡೆದುಕೊಂಡರು.
ಆರೀಫ್ ಕಲ್ಲಕಟ್ಟ_