ಕುಂದಾಪುರ: ಕುಂಭಾಶಿ, ಗೋಪಾಡಿ, ತೆಕ್ಕಟ್ಟೆ, ಬೀಜಾಡಿ, ಕೋಟೇಶ್ವರ ಹಾಗೂ ಹಂಗಳೂರು ಗ್ರಾ.ಪಂ. ಅಧ್ಯಕ್ಷರ ನೇತೃತ್ವದ ತಂಡ ಹಾಲಾಡಿಯಲ್ಲಿ ಇತ್ತೀಚೆಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಭೇಟಿಯಾಗಿ ಕೃತಕ ನೆರೆಯಿಂದ ಕೃಷಿ ಚಟುವಟಿಕೆ ನಾಶವಾಗುತ್ತಿರುವ ಬಗ್ಗೆ ಮನವಿ ಸಲ್ಲಿಸಿದರು.
ಸರಕಾರವು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ವಹಿಸದೇ ಇದ್ದಲ್ಲಿ ರೈತರು ಆತ್ಮಹತ್ಯೆಗೆ ಮುಂದಾಗುವ ಸಾಧ್ಯತೆ ಇದೆ. ನೆರೆ ಸಮಸ್ಯೆ ನಿಯಂತ್ರಿಸಲು ಅಲ್ಲಲ್ಲಿ ತೋಡು ಹಳ್ಳಗಳಲ್ಲಿ ನೀರು ನಿಂತು ಕೃತಕ ನೆರೆ ಉಂಟಾಗುವ ತೊಂದರೆ ತಪ್ಪಿಸಬೇಕಾಗಿದೆ ಎಂದು ಮನವಿ ಮಾಡಿದರು.
ಮನವಿಗೆ ಉತ್ತರಿಸಿದ ಶಾಸಕರು, ಈ ಬಗ್ಗೆ ಸರಕಾರದ ಗಮನ ಸೆಳೆಯಲಾಗಿದೆ. ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾ.ಪಂ.ಗಳ ಸಮಸ್ಯೆಗಳಿಗೆ ಸ್ಪಂದಿಸುವುದರೊಡನೆ ನೆರವು ನೀಡಲು ಸಿದ್ಧ ಎಂದು ಹೇಳಿದರು.
ಗೋಪಾಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್, ತೆಕ್ಕಟ್ಟೆ ಗ್ರಾ.ಪಂ. ಅಧ್ಯಕ್ಷ ಶೇಖರ್ ಕಾಂಚನ್, ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ಜಾನಕಿ ಬಿಲ್ಲವ, ಹಂಗಳೂರು ಗ್ರಾ.ಪಂ. ಅಧ್ಯಕ್ಷೆ ಜಲಜ ಚಂದನ್, ಕುಂಭಾಶಿ ಗ್ರಾ.ಪಂ. ಅಧ್ಯಕ್ಷೆ ಶ್ರೀವಾಣಿ ಅಡಿಗ, ಕೋಟೇಶ್ವರ ಗ್ರಾ.ಪಂ. ಉಪಾಧ್ಯಕ್ಷ ಉದಯ ನಾಯಕ್, ತಾ.ಪಂ. ಸದಸ್ಯ ಮಂಜು ಬಿಲ್ಲವ, ತಾ.ಪಂ. ಮಾಜಿ ಉಪಾಧ್ಯಕ್ಷ ಶೇಖರ ಚಾತ್ರಬೆಟ್ಟು, ಗ್ರಾ.ಪಂ. ಸದಸ್ಯರಾದ ಸುರೇಶ್ ಶೆಟ್ಟಿ, ವಾದಿರಾಜ ಹೆಬ್ಬಾರ್, ರಮೇಶ್ ಸುವರ್ಣ, ಸುರೇಶ್ ಪೂಜಾರಿ, ಲಕ್ಷ್ಮಣ ಕಾಂಚನ್, ರಾಘವೇಂದ್ರ ಪೂಜಾರಿ, ನಾಗರಾಜ ಆಚಾರ್ಯ, ಸುಧಾಕರ, ಶೇಖರ ಪೂಜಾರಿ, ಜಯಲಕ್ಷ್ಮೀ ಆನಂದ ಪೂಜಾರಿ, ಸರೋಜಾ, ರೈತ ಮುಖಂಡರಾದ ರಾಮ ಗುರಿಕಾರ, ಬಸವ ಪೂಜಾರಿ, ಆನಂದ ಪೂಜಾರಿ, ಸಮಾಜಸೇವಕರಾದ ಗಣೇಶ್ ಪುತ್ರನ್, ವಾಸುದೇವ ಪ್ರಭು ಮೊದಲಾದವರು ಉಪಸ್ಥಿತರಿದ್ದರು.