ಕನ್ನಡ ವಾರ್ತೆಗಳು

ದ.ಕ. ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ.

Pinterest LinkedIn Tumblr

sammelana_logo_relcse

ಮಂಗಳೂರು.ಆಗಸ್ಟ್.21: ಶ್ರೀ ಕ್ಷೇತ್ರ ಕಟೀಲಿನಲ್ಲಿ ಅಗೋಸ್ತು ತಾ. 28, 29, 30ರಂದು ಜರಗಲಿರುವ ದ.ಕ. ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಪ್ರಗತಿಯ ಧಾವಂತದೊಂದಿಗೆ ಪಾರಂಪರಿಕ ಸಂರಕ್ಷಣೆ ಪರಿಕಲ್ಪನೆಯ ಆಶಯದ ಧ್ವನಿಯನ್ನು ಪ್ರತಿಬಿಂಬಿಸುವ ಲಾಂಛನವನ್ನು ಆಯ್ಕೆ ಮಾಡಲಾಗಿದೆ.

ಈ ಲಾಂಛನವನ್ನು ಪ್ರಸಿದ್ಧ ಕಲಾವಿದ ಮಂಗಳೂರಿನ ರಾಜೇಂದ್ರ ಕೇದಿಗೆ ರಚಿಸಿದ್ದಾರೆ. ಶ್ರೀ ಜಾನ್ ಚಂದ್ರನ್ ಚಿತ್ರ ಕಲಾವಿದರು ಮತ್ತು ಆಯ್ಕೆ ಸಮಿತಿ ಸದಸ್ಯರು ಈ ಲಾಂಛನವನ್ನು ಆಯ್ಕೆ ಮಾಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.

Write A Comment