ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಜಗದಂಬಾ ಯಕ್ಷಗಾನ ಕಲಾ ಮಂಡಳಿಯ ವಾರ್ಷಿಕೋತ್ಸವವು ಅ. 15 ರಂದು ಮಾಟುಂಗ ಪಶ್ಚಿಮದ ಡಾ| ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಲಾಪೋಷಕ ಪೊಲ್ಯ ಉಮೇಶ್ ಶೆಟ್ಟಿಯವರು ಮಾತನಾಡುತ್ತಾ, ಯಕ್ಷಗಾನವು ಕರ್ನಾಟಕದ ಸ್ವಂತ ಕಲೆಯಾಗಿದ್ದು ಆರಾಧನ ಭಾವನೆಯಿಂದ ಕಾಣಬೇಕು, ಎಂದರು.
ವೀರಕೇಸರಿ ಕಲಾವೃಂದದ ಅಧ್ಯಕ್ಷರಾದ ರಮೇಶ್ ಶೆಟ್ಟಿ ಪಯ್ಯಾರ್ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮುಂಬಯಿಯ ಕಲಾಭಿಮಾನಿಗಳು ಯಕ್ಷಗಾನವನ್ನು ಸದಾ ಪ್ರೋತ್ಸಾಹಿಸಬೇಕೆಂದರು.ಗೌರವ ಅತಿಥಿಗಳಾಗಿ ಮಲಾಡ್ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಶ್ರೀನಿವಾಸ ಪಿ. ಸಾಪಲ್ಯ ಮತ್ತು ದಾಮೋದರ ಶೆಟ್ಟಿ ಇರುವೈಲು ಆಗಮಿಸಿದ್ದರು.
ಯಕ್ಷಗಾನದ ಭಾಗವತ ದೇವಲ್ಕುಂದ ಭಾಸ್ಕರ್ ಶೆಟ್ಟಿ, ಕಲಾವಿದರಾದ ರಮೇಶ್ ಸುವರ್ಣ, ಕಲಾ ಸಂಘಟಕ ಪ್ರಕಾಶ್ ಎಂ ಶೆಟ್ಟಿ ಸುರತ್ಕಲ್, ಸತೀಶ್ ಕಾಪು, ಸತೀಶ್ ಮೂಲ್ಕಿ ಅವರನ್ನು ಸನ್ಮಾನಿಸಲಾಯಿತು. ಪೊಲ್ಯ ಲಕ್ಷೀನಾರಾಯಣ ಶೆಟ್ಟಿಯವರು ಅಬಿನಂದನಾ ಭಾಷಣ ಮಾಡಿದರು.ಬಾಲಕೃಷ್ಣ ಪಿ ಭಂಡಾರಿ, ಶ್ರೀ ಜಗದಂಬಾ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷ ಸುರೇಂದ್ರ ಸಾಲ್ಯಾನ್, ಗೌ ಪ್ರ ಕಾರ್ಯದರ್ಶಿ ಗಣೇಶ್ ಕುಮಾರ್, ಜಿ ಟಿ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಣೇಶ್ ಕುಮಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.