ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ ಬೃಹತ್ ತ್ರಿವರ್ಣ ದ್ಬಜ ಅನಾವರಣ.

Pinterest LinkedIn Tumblr

ganpathi_big_flag_1

ಮಂಗಳೂರು,ಆಗಸ್ಟ್.13: ಕರ್ನಾಟಕದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಮಂಗಳೂರಿನ 145 ವರ್ಷಗಳ ಇತಿಹಾಸವುಳ್ಳ ಪ್ರತಿಷ್ಠಿತ ಸಾರಸ್ವತ ವಿಧ್ಯಾಸಂಸ್ಥೆಯ ವಿಧ್ಯಾರ್ಥಿಗಳಿಂದ ಅದ್ಭುತ ಶೈಲಿಯ ದೇಶಾಭೀಮಾನ ಪ್ರದರ್ಶಿತಬಾಗಲಿದೆ.

ಮಕ್ಕಳಲ್ಲಿ ದೇಶಭಿಮಾನ ಮೂಡಿಸುವಲ್ಲಿ ವಿಧ್ಯಾಸ್ಥಂಸ್ಥೆ ಮಹತ್ತರ ಪ್ರಾತ್ರವಹಿಸುತದೆ. ವಿಧ್ಯಾರ್ಥಿಗಳಲ್ಲಿ ರಾಷ್ಟ್ರಾಭಿಮಾನ ಹೊರಹೊಮ್ಮಿಸುವ ಅಧ್ಬುತ ಕಾರ್ಯಕ್ರಮ ಸಾರಸ್ವತ ವಿಧ್ಯಾಸಂಸ್ಥೆಯ ಅಧೀನದಲ್ಲಿರುವ ಗಣಪತಿ ಆಂಗ್ಲಮಾಧ್ಯಮ ಶಾಲೆ, ಗಣಪತಿ ಅನುದಾನಿತ ಪ್ರಾಥಮಿಕ ಶಾಲೆ ಹಾಗೂ ಗಣಪತಿ ಪ್ರೌಢಶಾಲೆ, ಗಣಪತಿ ಪದವಿ ಪೂರ್ವ ಕಾಲೇಜು, ಅನಂದಾಶ್ರಮ ಶಾಲೆ ಹಾಗೂ ಪರಿಜ್ಞಾನ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳಿಂದ ಆಗಸ್ಟ್ 15 ರಂದು ಗಣಪತಿ ಶಾಲೆಯ ಪರಿಸರದಲ್ಲಿ ನಡೆಯಲಿದೆ.

ganpathi_big_flag_2 ganpathi_big_flag_3 ganpathi_big_flag_4 ganpathi_big_flag_5 ganpathi_big_flag_6

ಬೆಳಿಗ್ಗೆ 7.45  ಕ್ಕೆ ಸರಿಯಾಗಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಭಾ.ಆ,ಸೇ ಅವರು 305 ಮೀಟರ್ ಉದ್ದದ ರಾಷ್ಟ್ರದ್ವಜವನ್ನು ಅನಾವರಣಗೊಳಿಸಿ 1000 ದಷ್ಟು ವಿಧ್ಯಾರ್ಥಿಗಳಿಗೆ ಹಸ್ತಾಂತರಿಸಲಿದ್ದಾರೆ. ಗಣಪತಿ ಪ್ರೌಢ ಶಾಲೆಯ ರಸ್ತೆಯಂಚಿನಲ್ಲಿರುವ ಮಹಾಲಕ್ಷ್ಮೀ ಗಣಪತಿ ದೇವಸ್ಥಾನದ ಮುಂಭಾದಿಂದ ಈ ರಾಷ್ಟ್ರಧ್ವಜವು ಅನಾವರಣಗೊಳ್ಳುತ್ತಾ ಹಂಪನಕಟ್ಟಾ ವೃತ್ತದವರೆಗೆ ಮುಂದುವರಿಯಲಿದೆ.

ಗುಣಪಟ್ಟದ ಶಿಕ್ಷಣದ ಜೋತೆಗೆ ವಿಧ್ಯಾರ್ಥಿಗಳಲ್ಲಿ ರಾಷ್ಟ್ರಭಿಮಾನ ಮೂಡಿಸುವ ನಮ್ಮ ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿಯ ಜೊತೆಗೆ ಅವರ ಪ್ರತಿಭೆಗೂ ಮುಕ್ತ ಅವಕಾಶವನ್ನು ಕಲ್ಪಿಸುತ್ತದೆ. ಈ ಮಹತ್ತರವಾದ ಕಾರ್ಯಕ್ರಮವನ್ನು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶ ಸೇವೆಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಎಲ್ಲ ವೀರಯೋಧರ ಸ್ಮರಣಾರ್ಥ ಮತ್ತು ನಮ್ಮ ಪವಿತ್ರ ರಾಷ್ಟ್ರ ಹಾಗೂ ಅದರ ಉತ್ತಮ ಭವಿಷ್ಯತ್ತಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ದೇಶಭಕ್ತ ಪ್ರಜೆಗಳಿಗೆ , ಹಾಗೂ ದೇಶರಕ್ಷಕರಿಗೆ ಸಮರ್ಪಿಸುತ್ತಿದ್ದೇವೆ.

ಮಂಗಳೂರಿನ ಜನತೆ ಎಂದೂ ಕಂಡು ಕೇಳರಿಯದ ಈ ಅಧ್ಭುತ ದೇಶಾಭಿಮಾನ ಬಿಂಬಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ದೇಶಪ್ರೇಮವನ್ನು ವ್ಯಕ್ತಪಡಿಸಿ, ವಿಧ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಾಗಿ ಆಡಳಿತ ಮಂಡಳಿಯ ಕಾರ್ಯದರ್ಶಿ ಮಹೇಶ್ ಎಲ್.ಬೊಂಡಾಲ್ , ಕಾರ್ಯನಿರ್ವಾಹಣಾಧಿಕಾರಿ ಎ.ಎಸ್.ರಾಮಚಂದ್ರರಾವ್ ಹಾಗೂ ಸಮೂಹ ಶಿಕ್ಷಣ ಸಂಸ್ಥೆಯ ಎಲ್ಲಾ ಮುಖ್ಯಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಾರಸ್ವತ ಶಿಕ್ಷಣ ಸಂಸ್ಥೆಗಳ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ಎಸ್.ಸಿ.ಸಿ. ಏರ್ ವಿಂಗ್, ನೇವಲ್ ವಿಂಗ್ ಮತ್ತು ಎಸ್.ಎಸ್.ಎಸ್ ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ತ್ರೀವರ್ಣದ್ವಜವನ್ನು ಹಿಡಿಯಲಿದ್ದಾರೆ.

ಮಂಗಳೂರಿನ ಪ್ರಮುಖ ಬ್ಯಾಂಕುಗಳು , ಉದ್ದಿಮೆಗಳು, ಸಂಘ ಸಂಸ್ಥೆಗಳು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿವೆ.

Write A Comment