ಮಂಗಳೂರು,ಆಗಸ್ಟ್.11 : ಜಮಿಯ್ಯತುಲ್ ಫಲಾಹ್ ದ.ಕ-ಉಡುಪಿ ಇದರ ಕೇಂದ್ರ ಕಾರ್ಯಕಾರಿ ಸಮಿತಿಯ 2015-17 ಸಾಲಿಗೆ ನೂತನ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಬೆಳ್ತಂಗಡಿ ರವರು ಸರ್ವಾನುಮತದಿಂದ ಆಯ್ಕೆಯಾಗಿರುವರು.
ಹಾಜಿ ಅಬ್ದುಲ್ ಲತೀಫ್ ಸಾಹೇಬ್ ರವರು ಸಂಸ್ಥೆಯ ಬೆಳ್ತಂಗಡಿ ಘಟಕದ ಮೊದಲ ಅಧ್ಯಕ್ಷರಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಇವರು ದ.ಕ ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ ಸಂಸ್ಥೆಯ ಜಿಲ್ಲಾ ಸಹ ಆಯುಕ್ತರಾಗಿ ಮತ್ತು ಮಡಂತ್ಯಾರ್ ಕುಲ್ಫತ್ಹ್ ಬೈಲ್ ಜುಮ್ಮ ಮಸೀದಿಯ ಅಧ್ಯಕ್ಷರಾಗಿ ಸಮಾಜ ಮತ್ತು ಸಮುದಾಯದ ಸೇವೆಯಲ್ಲಿ ಸಕ್ರಿಯರಾಗಿ ತಮ್ಮನ್ನು ತೊಡಗಿಸಿಕೊಂಡಿರುವರು.
ನೂತನ ಸಾಲಿಗೆ ಉಪಾಧ್ಯಕ್ಷರಾಗಿ ಶಬೀಹ್ ಅಹ್ಮದ್ ಖಾಝಿ ಉಡುಪಿ ಮತ್ತು ಹಾಜಿ ಇಬ್ರಾಹಿಂ ಕೊಡಿಜಾಲ್, ಪ್ರಧಾನ ಕಾರ್ಯದರ್ಶಿ ಯಾಗಿ ಮೊಹಮ್ಮದ್ ಶರೀಫ್ ಕಾರ್ಕಳ, ಕೋಶಾಧಿಕಾರಿಯಾಗಿ ಇಮ್ತಿಯಾಝ್ ಅಹ್ಮದ್ ಖತೀಬ್ ಮಂಗಳೂರು, ಜೊತೆ ಕಾರ್ಯಧರ್ಶಿ ಯಾಗಿ ಹಾಜಿ ಕೆ. ಬೀರಾ ಮೊಹಿದ್ದೀನ್ ಸುಳ್ಯ, ಸಂಘಟನಾ ಕಾರ್ಯದರ್ಶಿಯಾಗಿ ಖಾಸಿಂ ಬಾರ್ಕೂರ್ ಉಡುಪಿ ಮತ್ತು ಪತ್ರಿಕಾ ಕಾರ್ಯ ದರ್ಶಿಯಾಗಿ ಆಲಿಯಬ್ಬ ಪುಲಾಬೆ ರವರನ್ನು ಸರ್ವಾಮತದಿಂದ ಆಯ್ಕೆಮಾಡಲಾಯಿತು.
ಸಂಸ್ಥೆಯ ಎನ್.ಆರ್.ಸಿ.ಸಿ ಅಮೀರ್‌ರಾದ ಮೊಹಮ್ಮದ್ ಮನ್ಸೂರ್, ಎನ್.ಆರ್.ಸಿ.ಸಿ ಸದಸ್ಯರಾದ ಶಾಹುಲ್ ಹಮೀದ್ ಮತ್ತು ಮೊಹಮ್ಮದ್ ಫಾರೂಕ್ ರವರು ಚುನಾವಣ ಪಕ್ರಿಯೆಯನ್ನು ನಡೆಸಿಕೊಟ್ಟರು.