ಕನ್ನಡ ವಾರ್ತೆಗಳು

ಕಟೀಲು ಶ್ರೀ ಕ್ಷೇತ್ರ ಹಾಗೂ ಸಂಘ ಸಂಸ್ಥೆಗಳ ಅಶ್ರಯದಲ್ಲಿ ರಕ್ತದಾನ ಶಿಬಿರ

Pinterest LinkedIn Tumblr

Kateel_Blud_Donetion

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಶ್ರಯದಲ್ಲಿ ಪರಿಸರದ ವಿವಿಧ ಸಂಘ ಸಂಸ್ಥೆಗಳು, ಶಾಲೆ ಕಾಲೇಜುಗಳ ಸಹಯೋಗದಲ್ಲಿ ಮಂಗಳೂರಿನ ಕೆ.ಎಂ.ಸಿ. ಹಾಗೂ ವೆನ್ಲಾಕ್ ಆಸ್ಪತ್ರೆಗಳ ಜಂಟೀ ಆಶ್ರಯದಲ್ಲಿ ಭಾನುವಾರ ಬೃಹತ್ ರಕ್ತದಾನ ಶಿಬಿರ ಕಟೀಲು ಸರಸ್ವತೀ ಸದನದಲ್ಲಿ ನಡೆಯಿತು.

ಕಟೀಲು ದೇವಳದ ಅರ್ಚಕ ಶ್ರೀ ಹರಿನಾರಾಯಣ ಆಸ್ರಣ್ಣ , ತಂತ್ರಿಗಳಾದ ವೇದವ್ಯಾಸ ತಂತ್ರಿ, ಜಿ.ಪಂ. ಸದಸ್ಯ ಈಶ್ವರ್ ಕಟೀಲ್, ಕಿನ್ನಿಗೋಳಿ ರೋಟರಿಯ ಜೊಸ್ಸಿ ಪಿಂಟೋ ಇನ್ನರ ವೀಲ್‍ಕ್ಲಬ್‍ನ ಶಾಲೆಟ್ ಪಿಂಟೋ, ರಕ್ತ ನೀಡುವ ಮೂಲಕ ಶಿಬಿರ ಉದ್ಘಾಟಿಸಿದರು.

122 ಮಂದಿ ರಕ್ತದಾನ ಮಾಡಿದರು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Write A Comment