ಉಳ್ಳಾಲ. ಆ, 10: ಶಾಲಾ ಪಠ್ಯ ಎಷ್ಟು ಅಗತ್ಯವೂ ಜೋತೆಗೆ ಅಷ್ಟೆ ಕ್ರೀಡೆಯು ಆತ್ಯಆಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು, ಕಲ್ಲಾಪು ಸೈಯ್ಯದ್ ಮದನಿ ಆಂಗ್ಲಮಾಧ್ಯಮ ಶಾಲೆ ಇದರ ಜಂಟಿ ಆಶ್ರಯದಲ್ಲಿ ಉಳ್ಳಾಲ ಹಝ್ರತ್ ಸೈಯ್ಯಿದ್ ಮದನಿ ಆಂಗ್ಲ ಮಾಧ್ಯಮ ಶಾಲಾ ಅವರಣದಲ್ಲಿ ನಡೆದ ಹೋಬಳಿ ಮಟ್ಟದ ಪ್ರೌಢ ಶಾಲಾ ವಿಭಾಗದ ಬಾಲಕ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮವಾಗಿರಬೇಕಾದರೆ ಕ್ರೀಡೆಯಿಂದ ಸಾಧ್ಯ, ಈ ಸಂಸ್ಥೆಯ ಅಡಳಿತವು ಸುಮಾರು ವರ್ಷಗಳಿಂದ ಉತ್ತಮ ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಈ ಪ್ರದೇಶದ ಜನರಿಗೆ ಉದೋಗ್ಯ ನೀಡಿದೆ. ಈ ಪ್ರದೇಶ ಬೆಳವಣಿಗೆ ಹೊಂದಲು ಸೈಯ್ಯದ್ ಮದನಿ ದರ್ಗಾ ಅಧೀನದಲ್ಲಿ ಬರುವ ಸಂಸ್ಥೆಗಳು ಕಾರಣವಾಗಿದೆ.
ಸೈಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಯು.ಎಸ್ ಹಂಝ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೈಯ್ಯದ್ ಮದನಿ ದರ್ಗಾ ಅಧೀನದಲ್ಲಿ ಬರುವ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ಶಿಕ್ಷಣ ಜೊತೆಗೆ ಕ್ರೀಡೆಗೂ ಮಹತ್ವ ನೀಡುತಿದೆ. ವಿದ್ಯಾರ್ಥಿಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಶಿಸ್ತು ಬದ್ದವಾಗಿದಲ್ಲಿ ಜೀವನ ಪೂರ್ತಿ ಶಿಸ್ತು ಬದ್ದವಾಗಿರಲು ಸಾಧ್ಯ ಎಂದು ಹೇಳಿದರು.ದೈಹಿಕ ಶಿಕ್ಷಣಾಧಿಕಾರಿ ಲಿಲ್ಲಿ ಪಾಯಿಸ್ ಮಾತನಾಡಿ ವಿದ್ಯಾರ್ಥಿಗಳಿಗೆ ಕಿವಿಮಾತನಾಡಿದರು.
ಸೈಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರುಗಳಾದ ಬಿ.ಜಿ ಹನೀಫ್ ಹಾಜಿ, ಹಾಜಿ ಉಮರಬ್ಬ, ಕೋಶಾಧಿಕಾರಿ ನಾಝೀಂ, ಹಮೀದ್ ಕಲ್ಲಾಪು, ಶಿಕ್ಷಕರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಕೆ.ಎಂ.ಕೆ ಮಂಜನಾಡಿ, ಉಳ್ಳಾಲ ಮೋಡೆಲ್ ಅಧಿಕಾರಿಗಳಾದ ಲೋಕನಾಥ್ ರೈ, ಪ್ರಮೋದ್, ವಿಷ್ಣು ಹೆಬ್ಬಾರ್, ಹಝ್ರತ್ ಸೈಯ್ಯದ್ ಮದನಿ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪದ್ಯಾ ಇಮ್ತಿಯಝ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದರು.
ಎಂ.ಎಚ್ ಮಲಾರ್ ಸ್ವಾಗತಿಸಿದರು. ಟಿಪ್ಪು ಸುಲ್ತಾನ್ ಫ್ರೌಢ ಶಾಲಾ ಚಿತ್ರಕಲಾ ಶಿಕ್ಷಕ ಬಿ.ಎಂ ರಫೀಕ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಸೈಯ್ಯದ್ ಮದನಿ ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ನಸೀಮಾ ವಂದಿಸಿದರು.
_ಆರೀಫ್ ಕಲ್ಕಟ್ಟ





