__ ಸತೀಶ್ ಕಾಪಿಕಾಡ್
ಮಂಗಳೂರು: ಕರ್ನಾಟಕ ಪ್ರಾದೇಶಿಕ ಕ್ರಿಕೆಟ್ ಅಕಾಡೆಮಿ ನೇತ್ರತ್ವದಲ್ಲಿ ಮಂಗಳೂರು ಪ್ರೀಮಿಯರ್ ಲೀಗ್ (ಎಂಪಿಎಲ್) ಕ್ರಿಕೆಟ್ ಪಂದ್ಯಾಟವೂ ಪಣಂಬೂರಿನ ಎನ್ಎಂಪಿಟಿ ಮೈದಾನದಲ್ಲಿ ಡಿ.15ರಿಂದ 27ರವರೆಗೆ ಜರಗಲಿದ್ದು, ಈ ಟೂರ್ನಮೆಂಟ್‌ನ ಲೋಗೋ ಅನಾವರಣ ಕಾರ್ಯಕ್ರಮ ರವಿವಾರ ಸಂಜೆ ನಗರದ ಪಾಂಡೇಶವರದಲ್ಲಿರುವ ಪೋರಂ ಪಿಜ್ಜಾ ಮಾಲ್‌ನಲ್ಲಿ ನಡೆಯಿತು.
ಇಂಡಿಯಾನ್ ಕ್ರಿಕೇಟ್ ಪ್ರೀಮಿಯರ್ ಲೀಗ್ ( ಐಪಿಎಲ್) ನಂತೆ ನಡೆಯಲ್ಲಿರುವ ಈ ಟೂರ್ನಮೆಂಟ್‌ನ ಲೋಗೋ ವನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖಾ ಸಚಿವ ಕೆ. ಅಭಯಚಂದ್ರ ಜೈನ್ ಅವರು ಅನಾವರಣಗೊಳಿಸಿದರು.
ಇದೇ ಸಂದರ್ಭ ಎಂಪಿಎಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ತಂಡಗಳ ಮಾಹಿತಿ ನೀಡಲಾಯಿತು. ಸಚಿವ ಅಭಯಚಂದ್ರ ಜೈನ್ ಮಾಲಕತ್ವದ ಬೆದ್ರ ಬುಲ್ಸ್ ಮೂಡಬಿದ್ರೆ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್ ಮಾಲಕತ್ವದ ಟೀಮ್ ಯುನೈಟೆಡ್ ಉಳ್ಳಾಲ ತಂಡಗಳು ಸೇರಿದಂತೆ ಒಟ್ಟು 12 ತಂಡಗಳು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿದೆ.
ಕಾರ್ಯಕ್ರಮದಲ್ಲಿ ಖುಶಿ ಮೆಡಿಕಲ್ ಸೆಂಟರ್ ಅಧ್ಯಕ್ಷ ಶೇಖ್ ಮೊಹಮ್ಮದ್ ಶರಿಫ್, ಶಾಸಕರಾದ ಜೆ.ಆರ್ .ಲೋಬೊ, ಮೊಯ್ದಿನ್ ಬಾವಾ, ಕರ್ನಾಟಕ ಪ್ರಾದೇಶಿಕ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಮೊಹಮ್ಮದ್ ಸಿರಾಜುದ್ದೀನ್, ಮಾಜಿ ಮೇಯರ್ ಮಹಾಬಲ ಮಾರ್ಲ, ಆಮ್ಕೋ ಇಂಡಸ್ಟ್ರೀಯಲ್ ಸಪ್ಲೈ ಎಂಡ್ ಸೊಲ್ಯುಶನ್ ಸೌದಿ ಅರೆಬಿಯಾದ ಸಿಇಒ ಆಸೀಫ್ ಮಹಮ್ಮದ್, ಸೌದಿ ಅರೆಬಿಯಾದ ಅಲ್ ಮುಝೈನ್ ಅಧ್ಯಕ್ಷ ಝಕಾರಿಯಾ ಜೋಕಟ್ಟೆ, ಹಿದಾಯ ಪೌಂಡೇಶನ್ ಕಾರ್ಯದರ್ಶಿ ಅನೀಫ್ ಹಾಜಿ ಗೋಳ್ತ ಮಜಲ್, ಕೆಎಸ್‌ಸಿಎ ಮಂಗಳೂರು ವಿಭಾಗದ ಎ.ವಿ. ಶಶಿಧರ, ಮನೋಹರ್ ಅಮೀನ್, ಹೆಚ್. ರತನ್ ಕುಮಾರ್, ಸೌದಿ ಅರೆಬಿಯಾದ ಹರ್ಟ್ಸ್ ಇಕ್ಯುಪ್‌ಮೆಂಟ್ ರೆಂಟಲ್‌ನ ಇಮ್ರಾನ್ ಹಸನ್, ಪ್ರಮುಖರಾದ ಕುಮಾರ್ ಅಪ್ಪಚ್ಚು, ಕರ್ನಾಟಕ ಪ್ರಾದೇಶಿಕ ಕ್ರಿಕೆಟ್ ಆಕಾಡೆಮಿಯ ಮುಖ್ಯಸ್ಥ ಮಹಮ್ಮದ್ ಸಿರಾಜುದ್ಧೀನ್ ಮುಂತಾದವರು ಉಪಸ್ಥಿತರಿದ್ದರು.
ಎಂಪಿಎಲ್‌ನ ಸಂಚಾಲಕ ಇಮ್ತೀಯಾಜ್ ಸ್ವಾಗತಿಸಿದರು, ಮಧು ಕಾರ್ಯಕ್ರಮ ನಿರೂಪಿಸಿದರು.