ಉಡುಪಿ, ಆ.01: ಮಲ್ಪೆ ಹಾಗೂ ಉಡುಪಿಯಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ವಂಚನೆ ಎಸಗಿರುವ ಉಡುಪಿ ಪಂದುಬೆಟ್ಟುವಿನ ಅಬ್ದುಲ್ ಮಜೀದ್(32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆತ ಮಲ್ಪೆಯ ಗೋಲ್ಡ್ ಲೋನ್ ಫೈನಾನ್ಸ್‌ನಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು 93,000 ರೂ. ಪಡೆದುಕೊಂಡು ಮೋಸ ಮಾಡಿದ್ದನು ಎಂದು ದೂರಲಾಗಿತ್ತು. ಅದೇ ರೀತಿ ಉಡುಪಿ ನಗರ ಠಾಣೆಯಲ್ಲೂ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ಮಾರ್ಗದರ್ಶನದಲ್ಲಿ ಮಲ್ಪೆ ಠಾಣಾಧಿಕಾರಿ ರವಿಕುಮಾರ್ ಹಾಗೂ ಸಿಬ್ಬಂದಿಗಳಾದ ಇಮ್ರಾನ್, ರಾಘವೇಂದ್ರ, ಬೆಂಗಳೂರಿನ ಆನಂದ ರಾವ್ ಸರ್ಕಲ್ ಬಳಿ ಮಜೀದ್‌ನನ್ನು ಬಂಧಿಸಿ, ಜು. 29ರಂದು ಮಲ್ಪೆ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.
ಇದೀಗ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.