ಮಂಗಳೂರು,ಜುಲೈ.29: ದಕ್ಷಿಣ ಕನ್ನಡ ಜಿಲ್ಲಾ ಫುಟ್‌ಬಾಲ್ ಅಸೋಸಿಯೇಷನ್ ವತಿಯಿಂದ 19ನೇ ವರ್ಷದ ಸ್ವಾತಂತ್ರ್ಯ ಕಪ್ ಫುಟ್‌ಬಾಲ್ ಟೂರ್ನ ಮೆಂಟ್‌ಗೆ ಮಂಗಳವಾರ ಪಾಲಿಕೆ ಸದಸ್ಯ ಎ. ದಿವಾಕರ ಚಾಲನೆ ನೀಡಿದರು.
ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ/ ಎಂಜಿನಿಯರಿಂಗ್ ಕಾಲೇಜಿನ ನಾಲ್ಕು ವಿಭಾಗಗಳಲ್ಲಿ 19 ದಿನಗಳ ಕಾಲ ಫುಟ್ ಬಾಲ್ ಪಂದ್ಯಾವಳಿ ನಡೆಯಲಿದ್ದು, ಜಿಲ್ಲೆಯ ಒಟ್ಟು 215 ತಂಡಗಳು ನೋಂದಾಯಿಸಿಕೊಂಡಿವೆ. ಟೂರ್ನಮೆಂಟ್‌ನ ಉದ್ಘಾಟನಾ ಸಮಾರಂಭದ ನಂತರ ನಗರದ ಕೇಂಬ್ರಿಡ್ಜ್ ಶಾಲೆ ಮತ್ತು ಕಲ್ಲಡ್ಕದ ಶ್ರೀರಾಮ ಶಾಲೆಯ ಬಾಲಕಿಯರ ತಂಡ ಚೊಚ್ಚಲ ಪಂದ್ಯವನ್ನು ಆಡಿದವು.
ಪ್ರಾಥಮಿಕ ಶಾಲಾ ವಿಭಾಗದಲ್ಲಿ 36 ತಂಡಗಳು ನೋಂದಾಯಿಸಿಕೊಂಡಿದ್ದು, ಇದೇ 19ರಿಂದ 30ರವರೆಗೆ ಬಾಲಕ – ಬಾಲಕಿಯರ ತಂಡಗಳು ಆಡಲಿವೆ. ಪ್ರೌಢಶಾಲಾ ವಿಭಾಗದಲ್ಲಿ 64 ತಂಡಗಳು ನೋಂದಾಯಿಸಿಕೊಂಡಿದ್ದು, 31 ರಿಂದ ಆಗಸ್ಟ್ 4ರವರೆಗೆ ಪಂದ್ಯಾವಳಿ ನಡೆಯಲಿವೆ. ಪದವಿ ಪೂರ್ವ ಮತ್ತು ಪದವಿ/ ಎಂಜಿನಿಯರಿಂಗ್ ವಿಭಾಗದ ನೋಂದಣಿ ನಡೆಯುತ್ತಿದ್ದು, ಅಂದಾಜು 100 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ.
ಸ್ವಾತಂತ್ರ್ಯ ದಿನ ಆಗಸ್ಟ್ 15 ರಂದು ನಾಲ್ಕು ವಿಭಾಗಗಳ ಬಾಲಕ – ಬಾಲಕಿಯರ ಏಳು ತಂಡಗಳು ಫೈನಲ್‌ನಲ್ಲಿ ನಡೆಯಲಿವೆ. ಅಂದು ಜಯಶಾಲಿಯಾಗುವ ತಂಡಗಳಿಗೆ ₨ 50 ಸಾವಿರ ನಗದು ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ.
ಪಾಲಿಕೆ ಸದಸ್ಯ ಅಬ್ದುಲ್ ಲತೀಫ್, ವಿಜಯ ಸುವರ್ಣ, ಉದ್ಯಮಿಗಳಾದ ಎ.ಕೆ. ನಿಯಾಜ್, ಮಿಥಿಲ್ ಪುತ್ರನ್, ಯುವ ರಾಜ ಬೆಂಗ್ರೆ, ಫುಟ್‌ಬಾಲ್ ಅಸೋಶಿಯೇ ಷನ್‌ನ ಅಧ್ಯಕ್ಷ ಡಿ.ಎಂ. ಅಸ್ಲಂ ಮೊದಲಾದವರಿ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.








