ಕನ್ನಡ ವಾರ್ತೆಗಳು

ಕೋಟೇಶ್ವರ: ಗೋವಿಗೆ ಎಸಿಡ್ ಎರಚಿದ ದುಷ್ಕರ್ಮಿಗಳು; ಕಿಡಿಗೇಡಿಗಳ ಕೃತ್ಯಕ್ಕೆ ಎಲ್ಲೆಡೆ ಖಂಡನೆ

Pinterest LinkedIn Tumblr

ಕುಂದಾಪುರ: ಕೋಟೇಶ್ವರ ಸಮೀಪದ ರಾಜರಾಮ್ ಪಾಲಿಮರ್‍ಸ್‌ನ ಆವರಣದಲ್ಲಿರುವ ಶ್ರೀ ಗೋವಿಂದ ಗೋರಕ್ಷಾ ಗೋಕುಲಧಾಮದಲ್ಲಿ ಸಾಕಲಾಗುತ್ತಿರುವ ಗೋವು ಒಂದಕ್ಕೆ ಕಿಡಿಗೇಡಿಗಳು ಎಸಿಡ್‌ನ್ನು ಎರಚಿ ಪೈಶಾಚಿಕವಾಗಿ ವರ್ತಿಸಿದ ಘಟನೆ ನಡೆದಿದೆ.

ಕಳೆದ ಗುರುವಾರದಂದು ಎಂದಿನಂತೆ ಫ್ಯಾಕ್ಟರಿಯಿಂದ ಮೇವಿಗಾಗಿ ಬಯಲಿಗೆ ದನಗಳು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಇವುಗಳ ಪೈಕಿ ಬಯಲಿನಲ್ಲಿ ಮೆಂದು ವಾಪಾಸಾಗಬೇಕಿದ್ದ ಮೂರುವರೆ ವರ್ಷ ಪ್ರಾಯದ ಗಂಡು ಗೋವು ನಾಲ್ಕೈದು ದಿನ ಕಳೆದರೂ ಇಲ್ಲಿಗೆ ಬಾರದೇ ಇರುವುದು ಮಾಲಕರಲ್ಲಿ ಆತಂಕ ಮೂಡಿತ್ತು. 5 ದಿನಗಳ ಬಳಿಕ ಅಂದರೇ ಭಾನುವಾರ ಸಂಜೆ ಸುಮಾರಿಗೆ ವಾಪಾಸ್ಸಾದ ಗೋವು ನಿಶಕ್ತಿಯಿಂದ ಬಳಲುತ್ತಿದ್ದು ಮೈಯೆಲ್ಲ ಎಸಿಡ್‌ನಿಂದ ಸುಟ್ಟು ಹೋಗಿರುವ ದೃಶ್ಯ ಹೃದಯ ಕಲಕುವಂತಿತ್ತು.

Koteshwara_Cow_Acid Koteshwara_Cow_Acid (7) Koteshwara_Cow_Acid (5) Koteshwara_Cow_Acid (4) Koteshwara_Cow_Acid (2) Koteshwara_Cow_Acid (1) Koteshwara_Cow_Acid (3) Koteshwara_Cow_Acid (8) Koteshwara_Cow_Acid (6)

ಗೋವಿನ ದೇಹದ ಹಲವು ಭಾಗಗಳಲ್ಲಿ, ಕೊಂಬಿನ ಭಾಗ, ಕಣ್ಣು ಸಮೀಪ ಹಾಗೂ ಕಣ್ಣಿಗೂ ಗಾಯಗಳಾಗಿದ್ದು ನೋವಿನಿಂದ ಗೋವು ನರಳುತ್ತಲಿದೆ.
ಗೋವಿನ ಸ್ಥಿತಿಯನ್ನು ಗಮನಿಸಿದ ತಕ್ಷಣವೇ ಗೋಕುಲಧಾಮ ನಡೆಸುತ್ತಿರುವ ಸುರೇಶ್ ಕಾಮತ್ ಕೋಟೇಶ್ವರ ಅವರು ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಇಂತಹ ಅಮಾನವೀಯ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಬಗ್ಗೆ ಬೇಸರಗೊಂಡಿರುವ ಅವರು ಗೋವಿನ ಪರಿಸ್ಥಿತಿ ಬಗ್ಗೆ ಮರುಕ ವ್ಯಕ್ತಪಡಿಸುತ್ತಾರೆ.

ಕಳೆದ ಒಂದೂವರೆ ವರ್ಷಗಳ ಹಿಂದೆ ಒಂದು ಗೋವಿನಿಂದ ಆರಂಭಗೊಂಡ ಶ್ರೀ ಗೋವಿಂದ ಗೋರಕ್ಷಾ ಗೋಕುಲಧಾಮದಲ್ಲಿ ಇದೀಗಾ ೧೭ ಗೋವುಗಳಿದೆ. ದುಷ್ಕರ್ಮಿಗಳ ದಾಳಿಗೊಳಗಾದ ಈ ಬಸವ (ಗಂಡು ಜಾನುವಾರು)ಕಳೆದ ಶಿವರಾತ್ರಿಯ ದಿನದಂದೇ ಇಲ್ಲಿಗೆ ಬಂದಿತ್ತು.

ಸುಸಜ್ಜಿತ ಕೋಣೆಯಲ್ಲಿ ಇಲ್ಲಿ ಜಾನುವಾರುಗಳು ವಾಸಿಸುತ್ತಿದ್ದು ನಿತ್ಯ ಬೆಳಿಗ್ಗೆ ಮೇವ್ನರಿಸಿ ಹೊರಗೆ ಹೋಗುವ ಜಾನುವಾರುಗಳು ತಂಡೋಪತಂಡವಾಗಿ ಸಂಜೆ ವೇಳೆ ಮನೆಗೆ ಬರುತ್ತಿದ್ದವು. ಆದರೇ ದುಷ್ಕರ್ಮಿ ಕಿಡಿಗೇಡಿಗಳು ಮೂಕ ಪ್ರಾಣಿಯ ಮೇಲೆ ಎಸಗಿದ ಈ ಕೃತ್ಯ ಎಲ್ಲೆಡೆ ಆಕ್ರೋಷಕ್ಕೆ ಕಾರಣವಾಗಿದೆ.

Write A Comment