ಕನ್ನಡ ವಾರ್ತೆಗಳು

ಕೊಂಡೆವೂರಿನಲ್ಲಿ ವಿಶಿಷ್ಟ ನಾಟಿ ಉತ್ಸವ.

Pinterest LinkedIn Tumblr

Naije_krish_photo_1

ಮಂಗಳೂರು,ಜುಲೈ.24 : ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೇಂದ್ರ ಕೃಷಿ ವಿಜ್ಞಾನ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಇಲ್ಲಿ ಗುರುವಾರ ಭತ್ತ ನಾಟಿ ಮಾಡುವ ” ನಾಟಿ ಉತ್ಸವ” ಕ್ಕೆ .ಚೆಂಡೆ ಜಾಗಟೆಗಳೊಡನೆ ಗದ್ದೆಯೆಡೆಗೆ ಸಾಗಿ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಭತ್ತ ನಾಟಿ ಮಾಡುವ ಮೂಲಕ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ” ಕೃಷಿ ನಮ್ಮ ದೇಶದ ಜೀವಾಳವಾಗಿದ್ದ್ದು, ಕೃಷಿಕ ಬೆನ್ನೆಲುಬಾಗಿದ್ದಾನೆ. ವೈವಿಧ್ಯಮಯ ಜೀವಾರಾಶಿ ಇದ್ದರೆ ಮಾತ್ರ ಪ್ರಕೃತಿ ಸಮತೋಲನವಾಗಿರುತ್ತದೆ. ಇದಕ್ಕಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತ ನಾವು ಪ್ರಕೃತಿಯನ್ನು ಸಂರಕ್ಷಿಸೋಣ” ಎಂದು ಕರೆ ನೀಡಿದರು.

Naije_krish_photo_3 Naije_krish_photo_4 Naije_krish_photo_2

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲಾ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ವಿ ಶೆಟ್ಟಿಯವರು ಇಂತಹ ಕಾರ್ಯಕ್ರಮಗಳ ಮೂಲಕ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದರು. ಧ.ಗ್ರಾ ಯೋಜನೆಯ ಕೃಷಿ ಅಧಿಕಾರಿ ನಾರಾಯಣ್ ರವರು  ಇಂದಿಲ್ಲಿ ನಡೆಯುತ್ತಿರುವ ಈ ಪದ್ಧತಿ ಬೇಸಾಯದ ಸರಳತೆ. ಲಾಭಗಳ ವಿವರಗಳನ್ನು ಬೇರೆ ಕ್ರಮಗಳಿಗೆ ಹೋಲಿಸಿ ವಿವರವಾಗಿ ತಿಳಿಸಿದರು. ಯೋಗಾಶ್ರಮದ ಟ್ರಸ್ಟಿಗಳಲ್ಲೊಬ್ಬರಾದ ಶ್ರೀ ಮೋಹನದಾಸ್ ಕೊಂಡೆವೂರು ಈ ಸಂರ್ಧಭದಲ್ಲಿ ಉಪಸ್ಥಿತರಿದ್ದರು.

ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀಮತಿ ವಸಂತಿ ಸ್ವಾಗತಿಸಿದರು, ಧನ್ಯವಾದವನ್ನು ದಿನೇಶ್ ಹಾಗೂ ನಿರ್ವಹಣೆಯನ್ನು ವಿಶ್ವನಾಥ್ ಮಾಡಿದರು.

ಸಾಕಷ್ಟು ಸಂಖ್ಯೆಯಲ್ಲಿ ಕೃಷಿಕ ಬಾಂಧವರು ಹಾಗೂ ಯೋಗಾಶ್ರ,ಅ ಸಂಚಾಲಿತ ನವೋದಯ ಕಿರಿಯ ಪ್ರಾಥಮಿಕ ಶಾಲೆ ಕೊಡಿಬೈಲ್ ಇಲ್ಲಿಅಯ ಚಿಣ್ಣರುಗಳು ಭತ್ತ ನಾಟಿಯಲ್ಲಿ ಆಸಕ್ತಿಯಿಂದ ಪಾಲ್ಗೊಂಡಿದ್ದರು.

Write A Comment