ಕನ್ನಡ ವಾರ್ತೆಗಳು

ಮಂಗಳೂರಿನ ಮ್ಯಾಕ್ಸ್ ಶೋ ರೂಂಗೆ ಖ್ಯಾತ ಗಾಯಕ ಕುನಾಲ್ ಗಂಜಾವಾಲ ಭೇಟಿ

Pinterest LinkedIn Tumblr

Kunal_Ganja_wala_1a

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು : ಬಾಲಿವುಡ್ ಹಾಗೂ ಸ್ಸಾಂಡಲ್‌ವುಡ್‌ನ ಖ್ಯಾತ ಗಾಯಕ ಕುನಾಲ್ ಗಂಜಾವಾಲ ಅವರು ಶನಿವಾರ ಮಂಗಳೂರಿಗೆ ಭೇಟಿ ನೀಡಿ ನಗರದ ಫಿಜಾ ಮಾಲ್‌ನಲ್ಲಿರುವ ಮ್ಯಾಕ್ಸ್ ಶೋ ರೂಂನಲ್ಲಿ ಅತ್ಯಾಧುನಿಕ ಶೈಲಿಯ ಉಡುಪುಗಳ ಪ್ರದರ್ಶನವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು ಗ್ರಾಹಕರು ಹಾಗೂ ಪತ್ರಕರ್ತರೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಕರಾವಳಿಯ ವಿವಿಧ ಪುಣ್ಯ ಕ್ಷೇತ್ರಗಳಿಗೆ ತಾನು ಈಗಾಗಲೇ ಭೇಟಿ ನೀಡಿದ್ದೇನೆ. ನಾನು ಭೇಟಿ ನೀಡುವ ಸಂದರ್ಭದಲ್ಲಿ ಸಿಟಿ ತುಂಬಾ ಹಾಟ್ ಹಾಟ್ ಇರುತ್ತದೆ. ಇವತ್ತು ತುಂಬಾನೆ ಕೂಲ್ ಆಗಿದೆ. ತುಂಬಾ ಇಷ್ಟವಾಗುತ್ತಿದೆ ಎಂದು ಹೇಳಿದ ಕುನಾಲ್ ಅವರು , ಹಿಂದಿ ಚಿತ್ರದ ಜತೆಗೆ ಕನ್ನಡ ಚಿತ್ರದಲ್ಲಿ ಅತ್ಯಧಿಕವಾಗಿ ಹಾಡುವ ಅವಕಾಶ ನನಗೆ ದೊರಕಿದೆ ಎಂಬ ಸಂತೋಷ ನನ್ನಲಿವೆ. ಹೊಸ ಚಿತ್ರಗಳು ಕೂಡ ನನ್ನ ಹಾಡಿನಲ್ಲೇ ಬರಲಿದೆ ಎಂದರು.

Kunal_Ganja_wala_2 Kunal_Ganja_wala_34 Kunal_Ganja_wala_1a Kunal_Ganja_wala_2a Kunal_Ganja_wala_6Kunal_Ganja_wala_7 Kunal_Ganja_Wala_ (1) Kunal_Ganja_Wala_ (2) Kunal_Ganja_Wala_ (3) Kunal_Ganja_Wala_ (4) Kunal_Ganja_Wala_ (5) Kunal_Ganja_Wala_ (6) Kunal_Ganja_Wala_ (7) Kunal_Ganja_Wala_ (8) Kunal_Ganja_Wala_ (9)Kunal_Ganja_Wala_ (10) Kunal_Ganja_Wala_ (11)

ತುಳುವಿನಲ್ಲಿ ಅವಕಾಶ ಸಿಕ್ಕರೆ ಹಾಡಲು ನಾನು ರೆಡಿ :

ಪ್ರಸ್ತುತ ತುಳು ಚಿತ್ರಗಳು ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದು, ಉತ್ತಮ ಹೆಸರು ಪಡೆಯುತ್ತಿವೆ. ತುಳುವಿನಲ್ಲಿ ಹಾಡಲು ಅವಕಾಶ ಸಿಕ್ಕರೆ..? ಎಂದು ಸುದ್ಧಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುನಾಲ್ ಅವರು, ಖಂಡಿತ… ಜಾನಿ ಲಿವರ್ ತುಳುವಿನಲ್ಲೇ ಅಭಿನಯಿಸಿದ್ದಾರೆ.ನನಗೆ ತುಂಬಾ ಅಸಕ್ತಿ ಇದೆ. ಈಗಾಲೇ ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದೇನೆ. ಯಾರು ಬೇಕಾದ್ರು ನನ್ನನ್ನು ಸಂಪರ್ಕ ಮಾಡಬಹುದು. ಮುಂಬಯಿಯಲ್ಲಿ ರೆಕಾರ್ಡಿಂಗ್ ಮಾಡಲು ನಾನು ಸಿದ್ದ ಎಂದು ಹೇಳಿದರು.

Kunal_Ganja_Wala_ (12) Kunal_Ganja_Wala_ (13) Kunal_Ganja_Wala_ (14) Kunal_Ganja_Wala_ (15) Kunal_Ganja_Wala_ (16) Kunal_Ganja_Wala_ (17) Kunal_Ganja_Wala_ (18) Kunal_Ganja_Wala_ (19)Kunal_Ganja_Wala_ (20) Kunal_Ganja_Wala_ (21) Kunal_Ganja_Wala_ (22) Kunal_Ganja_Wala_ (23) Kunal_Ganja_Wala_ (25) Kunal_Ganja_Wala_ (27) Kunal_Ganja_Wala_ (29) Kunal_Ganja_Wala_ (31) Kunal_Ganja_Wala_ (32)

Kunal_Ganja_Wala_-(33) Kunal_Ganja_Wala_-(34) Kunal_Ganja_Wala_-(35) Kunal_Ganja_Wala_-(36) Kunal_Ganja_Wala_-(37) Kunal_Ganja_Wala_-(38) Kunal_Ganja_Wala_-(39) Kunal_Ganja_Wala_-(40)

ಬಿಗೆ ಹೋಂಟ್ ತೆರೆ …ಪ್ಯಾಸಾ ದಿಲ್ ಮೆರಾ…

ಈ ಸಂದರ್ಭದಲ್ಲಿ ಮ್ಯಾಕ್ಸ್ ಗ್ರಾಹಕರ ಒತ್ತಾಯದ ಮೇರೆಗೆ “ಮರ್ಡರ್ ಚಿತ್ರದ ತಾನೇ ಹಾಡಿರುವ “ಬಿಗೆ ಹೋಂಟ್ ತೆರೆ …ಪ್ಯಾಸಾ ದಿಲ್ ಮೆರಾ’ ಹಾಡನ್ನು ಕುನಾಲ್ ಅವರು ಸುಶ್ರಾವ್ಯವಾಗಿ ಹಾಡಿ ನೆರೆದವರನ್ನು ರಂಜಿಸಿದರು. ಕನ್ನಡ ಹಾಡು ಹೇಳುವಂತೆ ಗ್ರಾಹಕರು ಒತ್ತಾಯಿಸಿದಾಗ” ನೀನೆ… ನೀನೆ ….ನನಗೆಲ್ಲಾ ನೀನೆ’ ಹಾಗೂ ಜಗವೇ ಒಂದು ರಣರಂಗ… ಒಂದೇ ….ಒಂದು…. ಸಾರಿ ಕಣ್ಮುಂದೆ… ಬಾರೇ” ಹಾಡಿ ಗ್ರಾಹಕರ ಹಾಗೂ ಸಂಗೀತಾ ಪ್ರಿಯರನ್ನು ಖುಷಿ ಪಡಿಸಿದರು. ಮಂಗಳೂರು ಅಂದ್ರೆ ನನಗೆ ತುಂಬಾನೇ ಇಷ್ಟ ನನ್ನ ಪತ್ನಿ ಹಾಗೂ ಕುಟುಂಬದವರೆಲ್ಲ ಹೆಚ್ಚಾಗಿ ಮಂಗಳೂರಿಗೆ ಬರುತ್ತಾ ಇರುತ್ತೇವೆ.ಆಳಿಕೆ ಸತ್ಯಸಾಯಿಬಾಬಾ ಮಂದಿರಕ್ಕೆ ಹಾಗೂ ಶಿಕ್ಷಣ ಕೇಂದ್ರಕ್ಕೆ ನಿರಂತರವಾಗಿ ಭೇಟಿ ನೀಡುತ್ತಿರುತ್ತೇನೆ’ ಎಂದು ಕುನಾಲ್ ಅವರು ಈ ಸಂದರ್ಭದಲ್ಲಿ ಹೇಳಿದರು.

_ Sathish Kapikad

Write A Comment