ಕನ್ನಡ ವಾರ್ತೆಗಳು

ಮಂಗಳೂರು ಪುರಭವನ ಕಾಮಗಾರಿ 3 ತಿಂಗಳಲ್ಲಿ ಪೂರ್ಣ

Pinterest LinkedIn Tumblr

townhall_recontrct_news_1

ಮಂಗಳೂರು, ಜುಲೈ.18 : ಮಂಗಳೂರು ನಗರದ ಪುರಭವನ 1964ರಲ್ಲಿ ನಿರ್ಮಾಣವಾದದ್ದು. 50 ವರ್ಷಗಳನ್ನು ಪೂರೈಸಿರುವ ಈ ಕಲಾಸೌಧ ತನ್ನ ಒಡಲಲ್ಲಿ ಅನೇಕ ಕಲಾವಿದರ ಕಲಾಪ್ರತಿಭೆಗೆ ಅವಕಾಶ ನೀಡಿ ಅವರು ದೇಶ ವಿದೇಶಗಳಲ್ಲಿ ಖ್ಯಾತರಾಗಿದ್ದಾರೆ. ಈ ಕಲಾಮಂದಿರ ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಅಗತ್ಯವಾದ ದುರಸ್ತಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ರೂ. 255 ಲಕ್ಷ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ಪುರಭವನದ ಪಡಸಾಲೆಗೆ ಗ್ರಾನೈಟ್ ಗ್ರೀನ್‌ರೂಂ, ವಿ.ಐ.ಪಿ.ಕೊಠಡಿ, ಜಲನಿರೋಧಕ ಕಾಮಗಾರಿ ಮತ್ತು ಶೌಚಾಲಯ ದುರಸ್ತಿ ಕಾಮಗಾರಿಗಳು ಸೇರಿವೆ.

ಆಕಸ್ಟಿಕ್ ಪ್ಯಾನೆಲಿಂಗ್, ಧ್ವನಿ ವ್ಯವಸ್ಥೆ, ಉತ್ತಮ ಬೆಳಕಿನ ವ್ಯವಸ್ಥೆ, ಫಾಲ್ ಸೀಲಿಂಗ್ ಮತ್ತು ಕ್ಯಾಟ್ ವಾಕ್ ನಿರ್ಮಾಣಕ್ಕೆ ಅಂದಾಜು ಒಟ್ಟು ರೂ. 98 ಲಕ್ಷ, ಆಸನಗಳನ್ನು ಅಳವಡಿಸಲು ಅಂದಾಜು ರೂ.60ಲಕ್ಷ, ಹವಾನಿಯಂತ್ರಣ ವ್ಯವಸ್ಥೆಗೆ ಅಂದಾಜು ರೂ.48 ಲಕ್ಷ ಹಾಗೂ ಹೊಸ ಕೇಬಲ್ ಅಳವಡಿಕೆ ಹಾಗೂ ಜನರೇಟರ್‌ಗಾಗಿ ರೂ.49 ಲಕ್ಷ ಸೇರಿ ಒಟ್ಟು ರೂ.255 ಲಕ್ಷ ಅಂದಾಜು ವೆಚ್ಚವಾಗಲಿದೆ.

ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಮಹಾನಗರಪಾಲಿಕೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆಯುಕ್ತರು ಈ ಮಾಹಿತಿ ನೀಡಿದ್ದಾರೆ. ಕಾಮಗಾರಿಗೆ ಇ -ಟೆಂಡರ್ ಕರೆಯಲಾಗಿದ್ದು, ಟೆಂಡರ್ ಸ್ವೀಕರಿಸಲು ಜುಲೈ 21 ಕೊನೆಯ ದಿನ. 3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

Write A Comment