ಮಂಗಳೂರು, ಜುಲೈ .14: ಈ ವರ್ಷ ಹಜ್ಜ್ ಯಾತ್ರೆ ಕೈಗೊಳ್ಳುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಯಾತ್ರಾರ್ಥಿಗಳಿಗೆ ಚುಚ್ಚು ಮದ್ದು (ವ್ಯಾಕ್ಸಿನ್) ಹಾಗೂ ಪೊಲಿಯೊ ನೀಡುವ ಕಾರ್ಯಕ್ರಮವು ಜುಲೈ 22 ರಂದು ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ತನಕ ಯೇನಪೊಯ ಆಸ್ಪತ್ರೆ ಕೊಡಿಯಲ್‌ಬೈಲ್, ಮಂಗಳೂರು ಇಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಹಜ್ಜ್ ಯಾತ್ರಾರ್ಥಿಗಳು ಚುಚ್ಚು ಮದ್ದು ಹಾಗೂ ಲಸಿಕೆಯನ್ನು ಹಾಕಿಸಿಕೊಳ್ಳಲು ಕರ್ನಾಟಕ ರಾಜ್ಯ ಹಜ್ಜ್ ಸಮಿತಿ ಸೂಚಿಸಿದೆ ಎಂದು ಮಂಗಳೂರು ಹಜ್ಜ್ ನಿರ್ವಾಹಣಾ ಸಮಿತಿಯ ಅಧ್ಯಕ್ಷ ಯೇನಪೊಯ ಮೊಹಮ್ಮದ್ ಕುಂಞ ಹೇಳಿದ್ದಾರೆ.
