ಕನ್ನಡ ವಾರ್ತೆಗಳು

ಸವಣೂರಿನು ಪರಿಸರದಲ್ಲಿ ಹೆಚ್ಚುತ್ತಿರುವ ಕಳ್ಳತನ : ಕಳ್ಳರ ಶೀಘ್ರ ಬಂಧನಕ್ಕೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

Pinterest LinkedIn Tumblr
Savanuru_Protest_1
ಪುತ್ತೂರು, ಜು.14: ಬೇಡಿಕೆ ಈಡೇರಿಸಿಕೊಳ್ಳುವುದಕ್ಕಾಗಿ ಪ್ರತಿಭಟನೆ ಅನಿವಾರ್ಯವಾಗಿದ್ದು, ಕಳ್ಳರನ್ನು ಪತ್ತೆ ಹಚ್ಚಿ ಎಂಬ ಪ್ರತಿಭಟನೆ ನಡೆಸುವ ಅನಿವಾರ್ಯತೆ ಸಾರ್ವಜನಿಕರಿಗೆ ಬಂದಿರುವುದು ವಿಷಾದನೀಯ ಎಂದು ಸವಣೂರು ವರ್ತಕರ ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಹೇಳಿದರು.
ಅವರು ಸೋಮವಾರ ಸವಣೂರಿನ ಸುತ್ತಮುತ್ತ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ಭೇದಿಸಲು ಹಾಗೂ ಸವಣೂರಿಗೆ ಹೊರಠಾಣೆ ಮಂಜೂರು ಮಾಡುವಂತೆ ಸವಣೂರಿನ ವರ್ತಕರ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸವಣೂರು ಜಂಕ್ಷನ್‌ನಲ್ಲಿ ನಡೆದ ಬಂದ್, ರಸ್ತೆ ತಡೆ, ಮತ್ತು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸವಣೂರಿನ ಅಗತ್ಯತೆಯನ್ನು ಮನ ಗಂಡು ಈ ಬಂದ್‌ಗೆ ಕರೆ ನೀಡಲಾಗಿದೆ. ಸವಣೂರಿನಲ್ಲಿ ಸುಮಾರು 20 ವರ್ಷಗಳ ಹಿಂದೆ ಪೊಲೀಸರು ಗಸ್ತು ತಿರುಗುತ್ತಿದ್ದರು. ಆದರೆ ಇಂದು ಅಂಗಡಿಗಳಲ್ಲಿ ಇಟ್ಟಿರುವ ಪೊಲೀಸ್ ಬೀಟ್ ಪುಸ್ತಕದಲ್ಲಿ ಪೊಲೀಸ್ ಸಹಿ ಕಾಣುತ್ತದೆ. ಆದರೆ ಗಸ್ತು ತಿರುಗುತ್ತಿಲ್ಲ. ಇದರಿಂದ ಜನತೆ ಗೊಂದಲಕ್ಕೆ ಒಳಗಾಗಿದ್ದಾರೆ. ಕಳ್ಳತನಪ್ರಕರಣವನ್ನು ಭೇದಿಸುವ ಕೆಲಸ ಪೊಲೀಸರದ್ದೇ ಹೊರತು, ನಾಗರಿಕರದ್ದಲ್ಲ. ಈ ಹಿನ್ನೆಲೆಯಲ್ಲಿ ಇಲಾ ಖೆಗೆ ಬಿಸಿ ಮುಟ್ಟಿಸಲು ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಿದೆ ಎಂದರು.
 ತಾಪಂ ಉಪಾಧ್ಯಕ್ಷ ದಿನೇಶ್ ಮೆದು ಮಾತನಾಡಿ, ಕಡಬ ಠಾಣೆ ಸವಣೂರಿನಿಂದ ಸುಮಾರು 32 ಕಿ.ಮೀ. ದೂರವಿದ್ದು, ಅಲ್ಲಿನ ಪೊಲೀಸರು ಸವಣೂರು ತಲುಪುವಾಗ ಕಳ್ಳರು ಸುರಕ್ಷಿತ ಜಾಗ ತಲುಪಿರುತ್ತಾರೆ. ಈ ಹಿನ್ನ್ನೆಲೆಯಲ್ಲಿ ಸವಣೂರಿನಲ್ಲಿ ಹೊರಠಾಣೆ ಅಗತ್ಯವಿದೆ ಎಂದರು.
ಸವಣೂರು ಗ್ರಾಪಂ ಅಧ್ಯಕ್ಷೆ ಇಂದಿರಾ ಕಲ್ಲೂರಾಯ, ಸವಣೂರು ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಗ್ರಾಪಂ ಉಪಾಧ್ಯಕ್ಷ ರವಿಕುಮಾರ್, ಸದಸ್ಯರಾದ ಅಬ್ದುರ್ರಝಾಕ್, ಗಿರಿಶಂಕರ ಸುಲಾಯ, ಗ್ರಾಪಂ ಮಾಜಿ ಸದಸ್ಯ ಸುದರ್ಶನ್ ನಾಕ್ ಕಂಪ, ಗ್ರಾಪಂ ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಗ್ರಾಪಂ ಸದಸ್ಯ ಎಂ.ಎ. ರಫೀಕ್, ಸವಣೂರು ಪ್ರಾ.ಕೃ.ಸ. ಸಂಘದ ಉಪಾಧ್ಯಕ್ಷ ಗಣೇಶ್ ನಿಡ್ವಣ್ಣಾಯ, ನಿರ್ದೇಶಕ ಸೋಮನಾಥ ಕನ್ಯಾಮಂಗಲ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಂದ್ರ ಶೇಖರ್, ಪಿ.ನಾಗರಾಜ ನಿಡ್ವಣ್ಣಾಯ, ಸಾಮಾಜಿಕ ಕಾರ್ಯಕರ್ತ ಲಕ್ಷ್ಮೀಶ ಗಾಂಭೀರ, ನರಸಿಂಹಪ್ರಸಾದ್ ಪಾಂಗಾಣ್ಣಾಯ, ಅಶ್ರಫ್ ಕಾಸಿಲೆ ಮತ್ತಿತರರು ಮಾತನಾಡಿ ಸವಣೂರಿ ನಲ್ಲಿ ಹೊರಠಾಣೆಯನ್ನು ತೆರೆಯುವಂತೆ ಆಗ್ರಹಿಸಿದರು.
ರಸ್ತೆ ತಡೆ ಸಂದಭರ್ದಲ್ಲಿ ಕಾಣಿಯೂರು, ಬೆಳ್ಳಾರೆ, ಪುತ್ತೂರಿ ನಿಂದ ಸವಣೂರಿಗೆ ಬರುವ ಎಲ್ಲಾ ವಾಹನ ಗಳನ್ನು ತಡೆಹಿಡಿಯಲಾಯಿತು
 ಬಳಿಕ ಪ್ರತಿಭಟನಕಾರರು ಕಡಬ ತಹಶೀಲ್ದಾರ್ ಲಿಂಗಯ್ಯರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅರ್ತಿಕೆರೆ, ಉಪಾಧ್ಯಕ್ಷ ಕರುಣಾಕರ ಗೌಡ, ಕೋಶಾಧಿಕಾರಿ ಮೋಹನ್ ರೈ ಕೆರೆಕ್ಕೊಡಿ, ಗೌರವ ಸಲಹೆಗಾರ ಸುಂದರ ರೈ, ವರ್ತಕರು, ರಿಕ್ಷಾ ಚಾಲಕರು, ಸಾರ್ವಜನಿಕರು ಭಾಗವಹಿಸಿದ್ದರು.

 

Write A Comment