ಮಂಗಳೂರು,ಜುಲೈ.13 : ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಾಡೋಜ ಡಾ| ಪಾಟೀಲ ಪುಟ್ಟಪ್ಪ (ಪಾಪು) ಅವರು ಇತ್ತೀಚೆಗೆ ಮಂಗಳೂರಿಗೆ ಭೇಟಿಯಿತ್ತ ಸಂದರ್ಭದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರನ್ನು ಶಾಲುಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ, ಧಾರವಾಡ ಜಿಲ್ಲಾ ಕಸಾಪದ ಅಧ್ಯಕ್ಷರಾದ ಡಾ. ಲಿಂಗರಾಜ ಅಂಗಡಿ ವಿದ್ಯಾವರ್ಧಕ ಸಂಘದ ಕಾರ್ಯಧ್ಯಕ್ಷ ಡಾ| ಡಿ. ಎಂ. ಹಿರೇಮಠ, ಸಹಕಾರ್ಯದರ್ಶಿ ಶಿವಾನಂದ ಭಾವಿಕಟ್ಟೆ, ಸದಸ್ಯರಾದ ಮೋಹನ ನಾಗಮ್ಮನವರ, ಗುರುಹಿರೇಮಠ, ವಿಶ್ವೇಶ್ವರೀ ಬಿ. ಹಿರೇಮಠ, ಗುರುತಿಗಡಿ, ಮನೋಜ ಪಾಟಿಲ, ಮೊದಲಾದವರು ಉಪಸ್ಥಿತರಿದ್ದರು.
