ಕನ್ನಡ ವಾರ್ತೆಗಳು

ಕಸಾಯಿಖಾನೆಗೆ ಸೇರಬೇಕಾದ 16 ದನಗಳು ಬರ್ಕೆ ಪೊಲೀಸ್ ವಶ

Pinterest LinkedIn Tumblr

Barke Police_Ride_1

ಮಂಗಳೂರು: ಬರ್ಕೆ ಪೊಲೀಸರು ಗುರುವಾರ ಮುಂಜಾನೆ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಕಸಾಯಿಖಾನೆಗೆ ಸೇರಬೇಕಾದ 16 ದನಗಳು ಪೊಲೀಸರ ವಶವಾಗಿದೆ.

ಇಂದು ಮುಂಜಾನೆ ನಗರದ ಮಣ್ಣಗುಡ್ಡ – ಬರ್ಕೆಯ ದುರ್ಗಾಮಹಲ್ ಜಂಕ್ಷನ್ ಬಳಿ ಖಚಿತ ಮಾಹಿತಿ ಮೇರೆಗೆ ಬರ್ಕೆ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಜಾನುವಾರು ಸಾಗಿಸುತಿದ್ದ ವಾಹನವನ್ನು ವಶಪಡಿಸಿಕೊಂಡ್ಡಿದ್ದಾರೆ. ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ೧೬ ದನಗಳಿದ್ದು, ವಾಹನದಲ್ಲಿದ್ದ ಜಾನುವಾರುಗಳು ಅತ್ಯಂತ ದಯಾನೀಯ ಸ್ಥಿತಿಯಲ್ಲಿದ್ದವು ಎನ್ನಲಾಗಿದೆ. ಇವುಗಳಲ್ಲಿ ಕೆಲವು ದನಗಳ ಕಾಲಿಗೆ ಏಟುಗಳಾಗಿದ್ದವು ಎಂದು ತಿಳಿದು ಬಂದಿದೆ.

Barke Police_Ride_2 Barke Police_Ride_3 Barke Police_Ride_4 Barke Police_Ride_5 Barke Police_Ride_6 Barke Police_Ride_7 Barke Police_Ride_8

ಪೊಲೀಸರು ಸ್ಥಳಿಯರ ನೆರವಿನಿಂದ ಜಾನುವಾರುಗಳನ್ನು ಠಾಣೆಯಿಂದ ಬೇರೇಡೆಗೆ ಸಾಗಿಸಿದ್ದಾರೆ. ಪ್ರಕರಣದ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಕ್ರಮ ಕೈಗೊಳುತ್ತಿಲ್ಲ : ವಿಎಚ್‌ಪಿ ಆರೋಪ

ನಿನ್ನೆ ತಾನೇ ಹಿಂದೂ ಸಂಘಟನೆಗಳ ಮುಖಂಡರು ಎಂ.ಬಿ.ಪುರಾಣಿಕ ಅವರ ನೇತ್ರತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕರಾವಳಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಜಾನುವಾರು ಸಾಗಾಟ ತಡೆಗೆ ಪೊಲೀಸರು ಕ್ರಮ ಕೈಗೊಳುತ್ತಿಲ್ಲವೆಂದು ಆರೋಪಿಸಿರುವುದನ್ನು ಇಲ್ಲಿ ಸ್ಮರಿಸ ಬಹುದು.

Write A Comment