ಕನ್ನಡ ವಾರ್ತೆಗಳು

ಎಸ್‍ಎಲ್‍ಪಿ ಅದೇಶದಂತೆ ಅರ್ಹರಿಗೆ ಮಾತ್ರ ಕೆಂಪು ದೀಪ ಅಳವಡಿಕೆಗೆ ಸಾದ್ಯ.

Pinterest LinkedIn Tumblr

Red_light_photo

ಮಂಗಳೂರು, ಜುಲೈ.07: ರಾಜ್ಯದಲ್ಲಿ ಶಿಷ್ಟಾಚಾರದ ನಿಯಮಗಳನ್ನು ಉಲ್ಲಂಘಿಸಿ ವಾಹನಗಳು ಕೆಂಪು ದೀಪ ಅಳವಡಿಸಿಕೊಂಡು ಸಂಚರಿಸುವುದು ಕಂಡು ಬಂದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಅಲ್ಲದೆ ಮೋಟಾರು ವಾಹನ ಕಾಯ್ದೆ 1988ರ ಅನ್ವಯ ಸೂಕ್ತ ಕ್ರಮ ವಹಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರಿ ವಾಹನಗಳ ಮೇಲೆ ಕೆಂಪು ದೀಪವನ್ನು ಅಳವಡಿಸಲು ಯಾವ ಯಾವ ಹುದ್ದೆಗಳಿಗೆ ಅರ್ಹತೆ ಇದೆ ಎಂಬ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ವೋಚ್ಚ ನ್ಯಾಯಾಲಯವು ಎಸ್‍ಎಲ್‍ಪಿ ನೀಡಿರುವ ಅದೇಶದ ಹಿನ್ನೆಲೆಯಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಮಂತ್ರಿಮಂಡಲದ ಸಚಿವರುಗಳು, ವಿಧಾನ ಪರಿಷತ್ ಸಭಾಪತಿಗಳು, ವಿಧಾನ ಸಭೆಯ ಸಭಾಧ್ಯಕ್ಷರು, ಮುಖ್ಯ ನ್ಯಾಯಾಧೀಶರು ಹಾಗೂ ನ್ಯಾಯಾಧೀಶರುಗಳು ತಮ್ಮ ಆಧಿಕೃತ ವಾಹನಗಳ ಮೇಲೆ ಕೆಂಪು ದೀಪ ಉಪಯೋಗಿಸಬಹುದಾಗಿದೆ.

ಪ್ರತಿಷ್ಟಿತ ವ್ಯಕ್ತಿಗಳ ಭದ್ರತೆಗೆ ಉಪಯೋಗಿಸುವ ಪೋಲಿಸ್ ಎಸ್ಕಾರ್ಟ್ ವಾಹನಗಳು ಮಾತ್ರ ನೀಲಿ ಬಣ್ಣದ ದೀಪ ಅಳವಡಿಸಿಕೊಳ್ಳಲು ಅವಕಾಶವಿರುತ್ತದೆ. ಇತರೆ ಪೋಲಿಸ್ ಅಧಿಕಾರಿಗಳು ನೀಲಿ ಮತ್ತು ಹಳದಿ ಲೈಟ್‍ಗಳನ್ನು ಅಳವಡಿಸುವಂತಿಲ್ಲ. ಪೋಲಿಸ್ ಇಲಾಖೆಯ ಅಧಿಕಾರಿಗಳು ನೀಲಿ ಮತ್ತು ಹಳದಿ ಲೈಟ್ ಗಳನ್ನು ಅಳವಡಿಸಬಾರದೆಂದು ರಾಜ್ಯದ ಎಲ್ಲಾ ಪೋಲಿಸ್ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

Write A Comment