ಕನ್ನಡ ವಾರ್ತೆಗಳು

ಕೊಣಾಜೆಯಲ್ಲಿ ಸರಣಿ ಕಳ್ಳತನ : 5 ಲಕ್ಷ ಮೌಲ್ಯದ ಅಧಿಕ ಸೊತ್ತು ಕಳವು.

Pinterest LinkedIn Tumblr

Konaje_robery_photo_1

ಉಳ್ಳಾಲ,ಜುಲೈ.01 : ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಲೇಡಿಸ್ ಹಾಸ್ಟೆಲ್ ಬಳಿ ಇರುವ ಸ್ಟುಡಿಯೋ, ಮೊಬೈಲ್ ಅಂಗಡಿ, ಜಿನಸು ಅಂಗಡಿ ಸೇರಿದಂತೆ 7 ಅಂಗಡಿಗಳಿಗೆ ಕನ್ನ ಹಾಕಿರುವ ಕಳ್ಳರು ಸುಮಾರು 5 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತನ್ನು ಕಳವುಗೈದಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

Konaje_robery_photo_2 Konaje_robery_photo_3 Konaje_robery_photo_4 Konaje_robery_photo_5 Konaje_robery_photo_6 Konaje_robery_photo_7 Konaje_robery_photo_8 Konaje_robery_photo_9 Konaje_robery_photo_10 Konaje_robery_photo_11 Konaje_robery_photo_12 Konaje_robery_photo_13 Konaje_robery_photo_15 Konaje_robery_photo_16 Konaje_robery_photo_17 Konaje_robery_photo_18

Konaje_robery_photo_19 Konaje_robery_photo_20 Konaje_robery_photo_21 Konaje_robery_photo_22

ಕೊಣಾಜೆ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆಸಿರುವ ಕಳ್ಳರು ಪತ್ರಿಕಾ ಛಾಯಾಗ್ರಾಹಕ ಅಪುಲ್ ಇರಾ ಅವರ ಅಮ್ಮ ಸ್ಟುಡಿಯೋದಿಂದ 2 ಲಕ್ಷ ರೂ. ಬೆಲೆ ಬಾಳುವ ಮೂರು ಎಸ್‍ಎಲ್‍ಆರ್ ಕ್ಯಾಮರಾ, ಸಾಹಿಲ್ ಎಂಬವರಿಗೆ ಸೇರಿದ ಮೊಬೈಲ್ ಅಂಗಡಿಯಿಂದ ಸುಮಾರು 2 ಲಕ್ಷ ರೂ. ಮೌಲ್ಯದ ಮೊಬೈಲ್, ಚಾರ್ಜರ್‌ಗಳು, ಹರೀಶ್ ಎಂಬವರಿಗೆ ಸೇರಿದ ಮೊಬೈಲ್ ಅಂಗಡಿಯಿಂದ 20 ಸಾವಿರ ಮೌಲ್ಯದ ಮೊಬೈಲ್, ರವಿ ಜೆರಾಕ್ಸ್, ಮಹಮ್ಮದ್ ಎನ್.ಕೆ. ಅವರ ಜಿನಸು ಅಂಗಡಿ, ಸಾದಿಕ್ ಎಂಬವರ ಬೇಕರಿ,ಐಡಿಯಲ್ ಜ್ಯೂಸ್ ಸೆಂಟರ್‌ನಿಂದ ನಗದು ಹಣ ಮತ್ತು ಸಿಗರೇಟ್ ಪ್ಯಾಕೇಟ್‍ಗಳು ಕಳವು ಮಾಡಿದ್ದಾರೆ.

ಕೊಣಾಜೆ ಪೊಲೀಸರು ಪ್ರಕರಣವನ್ನು ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

Write A Comment