ಕನ್ನಡ ವಾರ್ತೆಗಳು

ಹಮೀದ್ ಕೊಲೆ ಪ್ರಕರಣ : ಥಾಯ್ಲೆಂಡ್‌ನಿಂದ ಬಂದ ಪ್ರಮುಖ ಆರೋಪಿ ಬಂಧನ.

Pinterest LinkedIn Tumblr

Murder_accsed_wenlock_1

ಮಂಗಳೂರು, ಜೂನ್.30 : ಬಂದರ್‌ನ ಅನ್ಸಾರಿ ರಸ್ತೆಯ ಅಬ್ದುಲ್ ಹಮೀದ್ ಅವರು 8 ತಿಂಗಳ ಹಿಂದೆ ಶಕ್ತಿನಗರದ ವೈಧ್ಯನಾಥ ನಗರದ ಜೋಕುಲ ಭೂತಸ್ಥಾನದ ಬಳಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಪ್ರಮುಖ ಅರೋಪಿ ಮರೋಳಿಯ ಬಿಪಿನ್ ರೈ (27)ಯನ್ನು ಸೋಮವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಶನ್ ಅಧಿಕಾರಿಗಳು ವಶಕ್ಕೆ ಪಡೆದು ಮಂಗಳೂರು ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಲಾಗಿದ್ದು, ಅತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಅಬ್ದುಲ್ ಹಮೀದ್ ಕೊಲೆ ಪ್ರಕರಣಕ್ಕ್ರೆ ಸಂಬಂಧಿಸಿ ಹರೀಶ್ ಕೆಂಬಾರು ಮತ್ತು ನಾಗುರಿಯ ಹರೀಶ್‌ನನ್ನು ಈಗಾಗಲೇ ಬಂಧಿಸಿದ್ದು. ಅತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಕೊಲೆ ಕೃತ್ಯ ನಡೆಸಿದ ದಿನವೇ ಬಿಪಿನ್ ರೈ ಗೋವಾ ಮೂಲಕ ಮುಂಬಯಿಗೆ ತೆರೆಳಿ ಅಲ್ಲಿಂದ ಥಾಯ್ಲೆಂಡ್ ಗೆ ಪರಾರಿಯಾದ ಬಗ್ಗೆ ಮಾಹಿತಿ ಲಭ್ಯವಾದ್ದರಿಂದ ಮಂಗಳೂರು ಪೊಲೀಸರು ಲುಕ್ ಜೌಟ್ ನೋಟೀಸನ್ನು ದೇಶದ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಕಳುಹಿಸಿದ್ದರು.

Murder_accsed_wenlock_2

ಬಿಪಿನ್ ರೈ ಥಾಯ್ಲೆಂಡ್‌ನಿಂದ ದುಬೈ ಮೂಲಕ ಜೂ. ೨೯ ರಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಲುಕ್ ಜೌಟ್ ನೊಟೀಸ್ ಇದ್ದ ಕಾರಣ ಇಮೀಗ್ರೇಶನ್ ಅಧಿಕಾರಿಗಳು ಅತನನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಬಿಪಿನ್ ರೈ ಪಂಪ್‌ವೆಲ್‌ನಲ್ಲಿ ಫೈನಾಸ್ಸ್ ವ್ಯವಹಾರ ನಡೆಸುತ್ತಿದ್ದು ಈ ವ್ಯವಹಾರ ಸಂಬಂಧವಾಗಿ ಅಭುಲ್ ಹಮಿದ್ ಆವರ ಕೊಲೆಯಾಗಿತ್ತು.

Write A Comment