ಕನ್ನಡ ವಾರ್ತೆಗಳು

ದುಷ್ಕೃತ್ಯಕ್ಕೆ ಸಂಚು : ಪಿಸ್ತೂಲ್ ಸಹಿತಾ ಆರೋಪಿ ಸೆರೆ

Pinterest LinkedIn Tumblr

Dayanand_Gun-arest_1

ಮಂಗಳೂರು, ಜೂ.28: ನಗರದ ಕುಲಶೇಖರ ಕೈಕಂಬ ಅಂಚೆ ಕಚೇರಿ ಬಳಿ ಅಕ್ರಮವಾಗಿ ಪಿಸ್ತೂಲ್ ಹಾಗೂ ಗುಂಡುಗಳನ್ನು ವಶದಲ್ಲಿಟ್ಟುಕೊಂಡ್ಡು ತಿರುಗಾಡುತ್ತಿದ್ದ ಆರೋಪಿಯನ್ನು ಶನಿವಾರ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕುಲಶೇಖರದ ದಯಾನಂದ ಯಾನೆ ರಾಜ (34) ಎಂದು ಗುರುತಿಸಲಾಗಿದೆ.

ಈತ ಶಸ್ತ್ರಾಸ್ತ್ರವನ್ನಿಟ್ಟುಕೊಂಡು ಯಾವುದೋ ದುಷ್ಕೃತ್ಯ ನಡೆಸಲು ಹೊಂಚು ಹಾಕುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಆರೋಪಿಯನ್ನು ಸೆರೆ ಹಿಡಿದ್ದಿದ್ದಾರೆ. ಆರೋಪಿಯಿಂದ 1 ಪಿಸ್ತೂಲ್ ಮತ್ತು 5 ಸಜೀವ ಗುಂಡುಗಳು ಹಾಗೂ 1 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಆತನ ಜೊತೆಯಲ್ಲಿ ತಿರುಗಾಡುತ್ತಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Dayanand_Gun-arest_2

ಆರೋಪಿಯು 2013ರಲ್ಲಿ ನೀರುಮಾರ್ಗದ ಪಾಲ್ದನೆಯಲ್ಲಿ ಬಸ್ ಚಾಲಕ ಪ್ರಸನ್ನ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಆರೋಪಿಯಿಂದ ವಶಪಡಿಸಿಕೊಂಡ ಪಿಸ್ತೂಲ್‌ನ ವೌಲ್ಯ 1 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಪೊಲೀಸ ಕಮೀಶನರ್ ಎಸ್. ಮುರುಗನ್‌ರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಕೆ.ಎಂ. ಶಾಂತರಾಜುರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ವೆಲೆಂಟೈನ್ ಡಿಸೋಜ, ಎಸ್‌ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Write A Comment