ಕನ್ನಡ ವಾರ್ತೆಗಳು

ಅಂತರಾಷ್ಟ್ರೀಯ ಮಾದಕ ವ್ಯಸನ ನಿಷೇಧ ದಿನ ಹಾಗೂ ಜಾಗೃತಿ ಜಾಥಾ.

Pinterest LinkedIn Tumblr

world_drugantey_day_1

ಮಂಗಳೂರು, ಜೂನ್. 26: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಮಂಗಳೂರು ನಗರ ಇವರ ಜಂಟಿ ಆಶ್ರಯದಲ್ಲಿ “ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ” ಆಚರಣೆ ಹಾಗೂ ಈ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮಿಕೊಳ್ಳಲಾದ  “ಜಾಗೃತಿ ಜಾಥ” ಶುಕ್ರವಾರ  ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆಯಿತು.

 ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಹಾಗೂ  ಜಾಗೃತಿ ಜಾಥ ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು, ಶಾಲಾ ಮಕ್ಕಳು, ಯುವಕರು, ವಿಧ್ಯಾವಂತರು, ಬುದ್ಧಿವಂತರು, ಸಾಧಕರು, ಮಹಿಳೆಯರು ಸಹಿತ  ಹೆಚ್ಚಿನವರು ಈ ಒಂದು ಪಿಡುಗಿನ ಕಪಿ ಮುಷ್ಠಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಇದು ಒಂದು “ಪ್ರಪಂಚದ ಅದೃಶ್ಯ ಕೊಲೆಗಾರ” ನಾಗಿ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿ ಮಾದಕ ವಸ್ತುಗಳಿಗೆ ಜನರು ಆಕರ್ಷಿತರಾಗುವುದು ಈ ಶತಮಾನದ ದುರಂತವೇ ಸರಿ ಎಂದು ಹೇಳಿದರು.

world_drugantey_day_2 world_drugantey_day_3 world_drugantey_day_4

ಮಾದಕ ಪದಾರ್ಥಗಳ ಸೇವನೆಯ ಚಟವೆಂಬುದೊಂದು ರೋಗ, ಮಾದಕವ್ಯಸನ ಪ್ರಪಂಚದ ಐದು ಮಾರಕ ರೋಗಗಳಲ್ಲಿ ಒಂದಾಗಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆಯು 1956 ರಲ್ಲಿ ಘೋಷಿಸಿದೆ. ಅಮುಲು ರೋಗವು ವ್ಯಕ್ತಿಯ ದೈಹಿಕ, ಮಾನಸಿಕ, ಕೌಟುಂಬಿಕ, ಸಾಮಾಜಿಕ, ಅಧ್ಯಾತ್ಮಿಕ ಹಾಗೂ ಅರ್ಥಿಕ ಅಭಿವೃದ್ಧಿಯ ಮೇಲೆ ದುಷ್ಪರಿಣಾಮವನ್ನು ಬೀರಿವುದಲ್ಲದೇ, ವ್ಯಕ್ತಿಯ ಘನತೆ ಗೌರವಗಳನ್ನು ಕಳೆದುಕೊಂಡು ಅವನ ಜೀವನವೇ ಬೀದಿ ಪಾಲಾಗುವಂತೆ ಮಾಡುತ್ತದೆ, ಮಾದಕ ಅಮಲಿನ ಅಭ್ಯಾಸದಲ್ಲಿ ನಿರತರಾದವರು ಎಂದಿಗೂ ಈ ನಶೆಯಿಂದ ಹೊರಗೆ ಬರಲಾರರು. ಹೀಗೆ ಜೀವಿಸುವ ವ್ಯಕ್ತಿಗೆ ಸೂಕ್ತ ಸತ್ ಪ್ರೇರಣೆ, ಮಾರ್ಗದರ್ಶನ ಮತ್ತು  ಚಿಕಿತ್ಸೆ ನೀಡುವುದು ಅತೀ ಅಗತ್ಯದ ಸಾಮಾಜಿಕ ಕರ್ತವ್ಯವಾಗಿದೆ.

world_drugantey_day_5 world_drugantey_day_6 world_drugantey_day_7

ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ನಗರ ಮತ್ತು ಗ್ರಾಮಾಂತರ ಅಧ್ಯಕ್ಷರಾದ ಶೀಧರ್ ಹೊಳ್ಳ, ಶ್ರೀಧರ್ ರಾವ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಇದರ ನಿರ್ದೆಶಕ ಸುಧೀರ್ ಕುಮಾರ್ ಬಂಟ್ವಾಳ್, ಯೋಜನಾಧಿಕಾರಿ ರಾಘವ ಎಂ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಜನಜಾಗೃತಿ ವೇದಿಕೆಯ ಕದ್ರಿಯ ವಲಯಾಧ್ಯಕ್ಷ ಮಹಾಬಲ ಚೌಟ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಕಾರ್ಯಕರ್ತರು  ಉಪಸ್ಥಿತರಿದ್ದರು.

Write A Comment