ಕನ್ನಡ ವಾರ್ತೆಗಳು

ಎಂಆರ್‌ಪಿಎಲ್‌ : ಪಾಲಿಪ್ರೊಪೆಲಿನ್ ಉತ್ಪನ್ನದ ಸರಕು ಸಾಗಾಟಕ್ಕೆ ಪ್ರಹ್ಲಾದ್ ಜೋಶಿ ಅವರಿಂದ ಚಾಲನೆ – 4 ಕೋ. ರೂ. ವೌಲ್ಯದ ಹರಳು ಬೆಂಗಳೂರಿಗೆ ರವಾನೆ

Pinterest LinkedIn Tumblr

mrpl_polypropylene_markt_1

ಮಂಗಳೂರು, ಜೂ. 26: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್)ನಲ್ಲಿ ಉತ್ಪಾದಿಸಲಾದ ಪ್ರಥಮ ಕಂತಿನ, ಹರಳು ರೂಪದ ಪಾಲಿಪ್ರೊಪೆಲಿನ್ ಉತ್ಪನ್ನದ ಸರಕು ಸಾಗಾಟಕ್ಕೆ ಗುರುವಾರ ಕೇಂದ್ರ ಸರಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಚಾಲನೆ ನೀಡಿದರು. ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನ ಪೆಟ್ರೋಟೆಕ್ ಪ್ರಾಡಕ್ಟ್್ಸ ಸಂಸ್ಥೆಗೆ ರವಾನೆಗೊಂಡ ಈ 500 ಟನ್ ತೂಕದ ಪಾಲಿಪ್ರೊಪೊಲಿನ್ ಹರಳುಗಳು 4 ಕೋ.ರೂ. ವೌಲ್ಯದ್ದಾಗಿದೆ ಎಂದು ತಿಳಿಸಿದರು.

ಎಂಆರ್‌ಪಿಎಲ್‌ನಲ್ಲಿ ಉತ್ಪಾದಿಸಲಾಗುತ್ತಿರುವ ಬಹು ಬೇಡಿಕೆಯ ಪಾಲಿಪ್ರೊಪಿಲಿನ್ ಪರ್ಲ್ಸ್‌ಗಳ ಪ್ರಥಮ ಕಂತಿನ ಸಾಗಾಟ ಇದಾಗಿದ್ದು, ಇದು ಪ್ಲಾಸ್ಟಿಕ್ ಹಾಗೂ ಹೆಚ್ಚಿನ ಗೃಹೋಪಯೋಗಿ ವಸ್ತುಗಳ ಉತ್ಪಾದನೆಗೆ ಬಳಸಲ್ಪಡುತ್ತದೆ. ದಕ್ಷಿಣ ಭಾರತದಲ್ಲಿ ಎಂಆರ್‌ಪಿಎಲ್ ಈ ಹರಳುಗಳನ್ನು ಉತ್ಪಾದಿಸುವ ಪ್ರಥಮ ತೈಲ ಕಂಪೆನಿ ಎಂಆರ್‌ಪಿಎಲ್ ಎಂದವರು ಈ ಸಂದರ್ಭದಲ್ಲಿ ತಿಳಿಸಿದರು.

2006ರಲ್ಲಿ ಈ ಪಾಲಿಪ್ರೊಪೆಲಿನ್ ಹರಳುಗಳ ಬೇಡಿಕೆ 15.3 ಲ.ಮೆ.ಟನ್ ಇದ್ದರೆ, 2014-15 ರಲ್ಲಿ 30.7 ಲ.ಮೆ.ಟನ್ ದಾಟಿದೆ. ಶೇ. 14ರಷ್ಟನ್ನು ಮಾತ್ರ ಆಂತರಿಕವಾಗಿ ಪೂರೈಸಲು ಸಾಧ್ಯವಾಗಿದೆ ಎಂದವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿಯ ಅವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಒಎನ್‌ಜಿಸಿ- ಎಂಆರ್‌ಪಿಎಲ್‌ನಂತಹ ತೈಲ ಕಂಪೆನಿಗಳು ಒತ್ತು ನೀಡುತ್ತಿವೆ. ದೇಶದಲ್ಲಿ ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸಿ, ಆಮದನ್ನು ನಿಯಂತ್ರಿಸುವ ಕಾರ್ಯವನ್ನು ಮಾಡಲಾಗುತ್ತಿದೆ.

ಇಂಧನದ ಆಮದಿಗಾಗಿ ಕೇಂದ್ರದ ಬಜೆಟ್‌ನ ಬಹುಭಾಗ ಖರ್ಚಾಗುತ್ತಿದೆ. ದೇಶದ ಬೇಡಿಕೆಯ ಶೇ. 70 ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, 30 ಶೇ.ವನ್ನು ಮಾತ್ರ ದೇಶದಲ್ಲಿ ಉತ್ಪಾದಿಸಲಾಗುತ್ತಿದೆ. ಕಳೆದ ಬಾರಿ 118 ಮಿಲಿಯನ್ ಮೆಟ್ರಿಕ್ ಟನ್ ತೈಲ ಆಮದು ಮಾಡಲಾಗಿತ್ತು. ಕೇವಲ 38 ಮಿಲಿಯನ್ ಮೆಟ್ರಿಕ್ ಟನ್ ದೇಶದಲ್ಲಿ ಉತ್ಪಾದನೆಯಾಗಿತ್ತು. 2020 ಇಸವಿಗೆ ಜನಸಂಖ್ಯೆ ಆಧಾರದಲ್ಲಿ ಶೇ.. 10 ರಷ್ಟು ಅವಲಂಬನೆ ಕಡಿತಗೊಳಿಸಬೇಕು ಮತ್ತು 2050ರ ವೇಳೆಗೆ ಶೇ. 50 ರಷ್ಟು ಅವಲಂಬನೆ ಕಡಿತಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

mrpl_polypropylene_markt_2 mrpl_polypropylene_markt_3 mrpl_polypropylene_markt_4 mrpl_polypropylene_markt_5 mrpl_polypropylene_markt_6

ಪಾದೂರು (ಉಡುಪಿ)ಹಾಗೂ ಪೆರ್ಮುದೆ (ಮಂಗಳೂರು)ನಲ್ಲಿ ತೈಲ ಶೇಖರಣಾ ಘಟಕಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಸಂಪರ್ಕ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳ ಕಾರಣ ಸ್ವಲ್ಪವಿಳಂಬವಾಗಿದೆ. ಡಿಸೆಂಬರ್‌ನೊಳಗೆ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡು ಘಟಕಗಳು ಕಾರ್ಯಾರಂಭಿಸುವ ನಿರೀಕ್ಷೆ ಇದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರಹ್ಲಾದ್ ಜೋಶಿ ತಿಳಿಸಿದರು.

ಎಂಆರ್‌ಪಿಎಲ್‌ನ ಆಡಳಿತ ನಿರ್ದೇಶಕ ಎಚ್. ಕುಮಾರ್ ಮಾತನಾಡಿ, ದೇಶದಲ್ಲಿ ಪಾಲಿಪ್ರೊಪೆಲಿನ್‌ನ ಒಂಭತ್ತು ವಿತರಕ ಸಂಸ್ಥೆಗಳನ್ನು ಗುರುತಿಸಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಿ ದೇಶೀಯವಾಗಿ ಬೇಡಿಕೆ ಪೂರೈಸಲು ಎಲ್ಲ್ಲ ಮೇಲ್ದರ್ಜೆಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ನುಡಿದರು. ಎಂಆರ್‌ಪಿಎಲ್ ರಿಫೈನರೀಸ್‌ನ ನಿರ್ದೇಶಕ ಎಂ.ವೆಂಕಟೇಶ್ ಈ ಸಂದರ್ಭ ಉಪಸ್ಥಿತರಿದ್ದರು.

ಪಾಲಿಪ್ರೊಪೆಲಿನ್‌ಗೆ ಭಾರೀ ಬೇಡಿಕೆ :

ನಾಫ್ತಾವನ್ನು ವಿಭಜಿಸುವ ಮೂಲಕ ಉತ್ಪಾದಿಸಲಾಗುವ ಪಾಲಿಪ್ರೊಪೆಲಿನ್ ಸಣ್ಣದಾದ ಹರಳಿ (ಮುತ್ತಿನ)ನ ಮಾದರಿಯಲ್ಲಿದೆ. ಇದು ಎಲ್ಲ್ಲ ತೆರನಾದ ಪ್ಲಾಸ್ಟಿಕ್ ವಸ್ತುಗಳು, ವೌಲ್ಡಿಂಗ್ ಮಾತ್ರವಲ್ಲದೆ ಅಟೋಮೊಬೈಲ್ ಕ್ಷೇತ್ರದಲ್ಲೂ ಬಹುಪಯೋಗಿ ಹರಳಾಗಿದೆ. ದೇಶದಲ್ಲಿ ಪಾಲಿಪ್ರೊಪೆಲಿನ್‌ಗೆ ಭಾರೀ ಬೇಡಿಕೆಯಿದ್ದು, ಎಂಆರ್‌ಪಿಎಲ್ ಪಾಲಿಪ್ರೊಪಿಲಿನ್ ಉತ್ಪಾದನೆ ಯಲ್ಲಿ ದೇಶದ ಬೃಹತ್ ಘಟಕವಾಗಿದೆ.

Write A Comment