ಕನ್ನಡ ವಾರ್ತೆಗಳು

ಮೇಯಲು ಬಿಟ್ಟ ದನ ಕದಿಯಲು ಬಂದ ಖದೀಮರಿಬ್ಬರ ಬಂಧನ

Pinterest LinkedIn Tumblr

ಕುಂದಾಪುರ: ಮನೆ ಸಮೀಪ ಮೇಯಲು ಕಟ್ಟಿಹಾಕಿದ್ದ ದನವನ್ನು ಕದಿಯಲು ಬಂದ ಆರೋಪಿಗಳಿಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಹೆರಿಕೆರೆ ನಿವಾಸಿಗಳಾದ ರವಿ ಅಲಿಯಾಸ್ ಅಪ್ಪಣ್ಣ (25), ನಾಗರಾಜ್ ಅಲಿಯಾಸ್ ನಾಗ (30) ಎನ್ನುವವರೇ ದನಗಳ್ಳರು.

Kundapura_Theaft_News

ಮಧ್ಯಾಹ್ನದ ಸುಮಾರಿಗೆ ಸಂಶಯಾಸ್ಪದವಾಗಿ ದನಗಳನ್ನು ಕಟ್ಟಿದ್ದ ಸ್ಥಳದ ಸಮೀಪ ಬಂದ ಇಬ್ಬರು ದನಕ್ಕೆ ಕಟ್ಟಿದ್ದ ಹಗವನ್ನು ಬಿಚ್ಚಿ ಕದಿಯಲು ಮುಂದಾದಗ ಮನೆಯವರು ಇವರಿಬ್ಬರನ್ನು ನೋಡಿ ಅವರನ್ನು ಹಿಡಿದುಕೊಂಡು ವಿಚಾರಣೆ ನಡೆಸಿದ್ದಾರೆ. ಬಳಿಕ ಅವರು ದನ ಕಳವುಗೈಯಲು ಬಂದಿದ್ದು ದ್ರಢಪಟ್ಟ ಕಾರಣ ಪೊಲಿಸರಿಗೆ ಇವರಿಬ್ಬರನ್ನು ಒಪ್ಪಿಸಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ನ್ಯಾಯಾಲಯಕ್ಕೂ ಹಾಜರುಪಡಿಸಲಾಗಿದೆ.

Write A Comment