ಕನ್ನಡ ವಾರ್ತೆಗಳು

ಪೊಲೀಸರ ಸೇವೆಗೆ ಜನಮನ್ನಣೆ ಸಿಗಲಿ: ಪೊಲೀಸ್ ಸಿಬ್ಬಂದಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಎಸಿಪಿ ರವಿಕುಮಾರ್

Pinterest LinkedIn Tumblr

Mulki_Police_sendup

ಮೂಲ್ಕಿ: ಜನಸಾಮಾನ್ಯರ ಸುರಕ್ಷತೆಯ ಜೊತೆ ಜೊತೆಗೆ ಸಂವಿಧಾನ ಬದ್ದ ಕಾನೂನಿನ ಪರಿಪಾಲನೆ ಮಾಡುವ ಪೊಲೀಸರ ಕರ್ತವ್ಯ ಸೇವೆಯು ಜನಮನ್ನಣೆಗೆ ಒಳಗಾದಲ್ಲಿ ಮಾತ್ರ ಇಲಾಖೆಗೆ ಗೌರವ. ವರ್ಗಾವಣೆ ಎನ್ನುವುದು ಆಂತರಿಕ ವ್ಯವಸ್ಥೆ ಆದರು ಕೆಲವೊಂದು ಬಾರಿ ವಯುಕ್ತಿಕ ಜೀವನಕ್ಕೆ ಅಡ್ಡಿ ಆಗುವುದು ಸಹಜ. ಇದೆಲ್ಲವನ್ನು ನಿಭಾಯಿಸಿಕೊಂಡಲ್ಲಿ ಮಾತ್ರ ಉತ್ತಮ ಕರ್ತವ್ಯ ನಿರ್ವಹಿಸಲು ಸಾಧ್ಯವಿದೆ ಎಂದು ಪಣಂಬೂರು ಎಸಿಪಿ ರವಿಕುಮಾರ್ ಅಭಿಪ್ರಾಯ ಪಟ್ಟರು.

ಅವರು ಮೂಲ್ಕಿಯ ಆಧಿದನ್‌ನ ಸಭಾಂಗಣದಲ್ಲಿ ಮಂಗಳವಾರ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆ ಗೊಂಡಿರುವ 13 ಮಂದಿ ಪೊಲೀಸ್ ಸಿಬ್ಬಂದಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮೂಲ್ಕಿ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಮಾತನಾಡಿ ಸಮಾಜದ ಎಲ್ಲಾ ಆಯಾಮಗಳಲ್ಲಿಯೂ ತೊಡಗಿಕೊಳ್ಳುವ ಪೊಲೀಸ್ ಸಿಬ್ಬಂದಿಗಳು ನಿಸ್ವಾರ್ಥವಾಗಿ ಸೇವೆಯನ್ನು ನೀಡಿದಲ್ಲಿ ಜನರು ನಮ್ಮನ್ನು ಗುರುತಿಸುತ್ತಾರೆ ಎಂದರು.

ಪೊಲೀಸ್ ಸಿಬ್ಬಂದಿಗಳಾದ ರವಳೇಂದ್ರ, ಕಾಂತಪ್ಪ, ರಾಮಣ್ಣ ಶೆಟ್ಟಿ, ಧರ್ಮಪ್ಪ, ದೇಜಪ್ಪ, ವಿಜಯ ಕಾಂಚನ್, ಕೃಷ್ಣಪ್ಪ, ಮಾಧವ, ಶರಿಫ್, ಲೋಹಿತ್, ಶೇಖಪ್ಪ, ಪ್ರಶಾಂತ್, ಜಯರಾಮರವನ್ನು ಗೌರವಿಸಲಾಯಿತು. ಮೂಲ್ಕಿ ಉಪನಿರೀಕ್ಷಕ ಪರಮೇಶ್ವರ ಹಾಜರಿದ್ದರು.

ಮೂಲ್ಕಿ ಠಾಣೆಯ ವಾಮನ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಸನ್ಮಾನಿತರಪರವಾಗಿ ರಾಮಣ್ಣ ಶೆಟ್ಟಿ ಕೃತಜ್ಞತೆಯನ್ನು ಸಲ್ಲಿಸಿದರು. ಹೋಮ್‌ಗಾರ್ಡ್ ಕಮಾಂಡೆರ್ ಮನ್ಸೂರು ವಂದಿಸಿದರು. ಪತ್ರಕರ್ತ ನರೇಂದ್ರ ಕೆರೆಕಾಡು ನಿರೂಪಿಸಿದರು.

Write A Comment