ಕುಂಪಲ, ಜೂ.15 : ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ದ.ಕ ಜಿಲ್ಲೆಯಲ್ಲಿ ಸೋಮೇಶ್ವರ ಗ್ರಾಮ ಪಂಚಾಯತ್‌ಗೆ ಪ್ರಚಂಡ ಬಹುಮತ ನೀಡುದರೊಂದಿಗೆ ಅತ್ಯಂತ ಅಧಿಕ ಮತನೀಡುವ ಮೂಲಕ ಬಿಜೆಪಿಯನ್ನು ವಿಜಯಗೊಳಿಸಿದ್ದಾರೆ. ಅದರೆ ವಿಜಯೋತ್ಸವ ಮೇರವಣಿಗೆ ನಂತರ ಮಾಡಿ ಮೊದಲು ಅಭಿವೃದ್ದಿಯ ಕೆಲಸಕ್ಕೆ ಚಲನೆ ನೀಡವ ಪ್ರಮಾಣಿಕ ಪ್ರಯತ್ನ ಮಾಡಿದೆವೆ. ಚಿತ್ರಾಂಜಲಿನಗರ ವಿಜಯನಗರ ಸಂಪರ್ಕ ರಸ್ತೆ ನಿರ್ಮಿಸಲು ಇಲ್ಲಿನ ಜನರ ಬೇಡಿಕೆ ಇತ್ತು. ಜಿಲ್ಲಾ ಪಂಚಯತ್ ಅನುದಾನದಿಂದ 7 ಲಕ್ಷ ರೂಪಾಯಿಯ ಕಾಮಗಾರಿ ಅಗಾಲಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಅವರು ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿತ್ರಾಂಜಲಿನಗರ ವಿಜಯನಗರ ಸಂಪರ್ಕ ರಸ್ತೆ ಶಿಲಾನ್ಯಾಸ ನೇರವೆರಿಸಿ ಮಾತನಾಡಿದರು. ಪಂಚಾಯತ್ ಅನುದನದಲ್ಲಿ ಯಾವುದೆ ಡೊಡ್ಡ ಕೆಲಸ ಮಡಲು ಸಾಧ್ಯವಿಲ್ಲ. ಗ್ರಾಮ ಪಂಚಾಯತ್‌ನಲ್ಲಿ ಸಿಗುವ ಮೂಲಭೂತ ಸೌಕರ್ಯ ಪಡಿತರಚಿಟಿ ಅಗಿರ ಬಹುದು ನೀರಿನ ಸಮಸ್ಯೆ, ದಾರಿದೀಪ ಇಂತಹ ಸಣ್ಣ ಪುಟ್ಟ ಕೆಲಸ ಪಂಚಾಯತ್ ಸದಸ್ಯರು ಮಾಡುವ ಮೂಕಲ ಜನಸಾಮನ್ಯರ ವಿಶ್ವಾಸ ಕಂಡಿತ ವಾಗಿಯು ಗಲಿಸಲು ಸಾಧ್ಯ ಎಂದು ಗ್ರಾಮ ಪಂಚಾಯತ್ ಸದಸ್ಯರಿಗೆ ಕಿವಿಮಾತು ನೀಡಿದರು.
ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ಸುಶೀಲಾ ನಾಯ್ಕ, ಎಸ್,ಎಸ್ ನಾಯ್ಕ, ಅನೀಲ್ ಬಗಂಬಿಲ ಮುಖ್ಯ ಅತಿಥಿಗಳಾಗಿ ಭಾಗವಹಿದರು.
ಗ್ರಾಮ ಪಂಚಯತ್ ನೂತನ ಸದಸ್ಯರುಗಳಾದ ಹೇಮಲತಾ ಸುಧಾಕರ್ ಜಿ.ಕೆ, ಗೋಪಲ್ ಕೃಷ್ಣ ರಾವ್, ದೇವಾನಂದ್ ಶೆಟ್ಟಿ, ಕುಂದಾ ಶ್ರೀ, ಹರಿಪ್ರಸಾದ್, ಗ್ರಾಮ ಪಂಚಯತ್ ಮಾಜಿ ಸದಸ್ಯರುಗಳಾದ ಶಿವನಾಂದ್ ಟೈಲರ್, ಕಸ್ತೂರಿ, ವಾಸುಕಿ ನಾಗಬ್ರಹ್ಮ ಅಧ್ಯಕ್ಷ ಸುಧಾಕರ್ ಜಿ.ಕೆ, ಕಾರ್ಯದರ್ಶಿ ಚೆಲುವೆ, ಸ್ಥಳೀಯರಗಳಾದ ವಿನೋದ್, ಶಾಂತರಾಮ್, ಉದಯ ಕುಮರ್, ಬಾನು ಕುಮಾರ್, ಸತೀಶ್ ರಾವ್ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದಾರು.
